ಕನ್ನಡ ಚಿತ್ರರಂಗದ ಮೂಕಿ ಚಿತ್ರಗಳ ಸ್ಟಾರ್ ನಾಯಕಿ ಲಕ್ಷ್ಮಿ ಬಾಯಿ

R Nagesh

     ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರಿಗೆ ಅಷ್ಟಾಗಿ ಪ್ರಾಮುಖ್ಯತೆಯನ್ನು ನೀಡದಿದ್ದ ಸಮಯದಲ್ಲಿ ಛಲ ಮತ್ತು ದೃಢ ಸಂಕಲ್ಪ ಎಂಬುದು ಇದ್ದರೆ ಜೀವನದಲ್ಲಿ ಎಂತಹ ಸಾಧನೆಯನ್ನು ಬೇಕಾದರೂ ಮಾಡಲು ಸಾಧ್ಯವಿದೆ ಎಂದು ಸಾಬೀತು ಪಡಿಸಿದ ದಿಟ್ಟ ಮಹಿಳೆ ನಟಿ ಲಕ್ಷ್ಮಿ ಬಾಯಿ. ಕನ್ನಡ ಚಿತ್ರರಂಗದಲ್ಲಿ ಮೂಕಿ ಚಿತ್ರಗಳ ಸ್ಟಾರ್ ನಾಯಕಿ ಎಂದು ಗುರುತಿಸಿಕೊಂಡಿದ್ದರಲ್ಲದೆ ರಂಗಭೂಮಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

         ಕ್ರಿ.ಶ.೧೯೧೮ ರಂದು ಬೆಂಗಳೂರು ಗ್ರಾಮಾಂತರ ಪ್ರದೇಶದ ಹೊಸೂರು ತಾಲೂಕಿನ ಮತ್ತೀಕೆರೆಯಲ್ಲಿ ಹನುಮಂತಪ್ಪ ಮತ್ತು ತಾಯಮ್ಮ ದಂಪತಿಯ ಮಗಳಾಗಿ ಲಕ್ಷ್ಮಿ ಬಾಯಿ ಜನಿಸಿದರು. ಇವರ ತಂದೆಯ ಹೆಸರು ಹನುಮಂತಪ್ಪ ವೃತ್ತಿಯಲ್ಲಿ ದೇಶದ ಗಡಿಯನ್ನು ಕಾಯುವ ಸೈನಿಕರಾಗಿದ್ದರು. ತಾಯಿಯ ಹೆಸರು ತಾಯಮ್ಮ ಮತ್ತು ಇವರ ಸಹೋದರಿಯ ಹೆಸರು ಕಮಲಾ ಬಾಯಿ ಇವರು ಕೂಡ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಾಗಿದ್ದರು.

ಇವರ ತಂದೆ ಮೊದಲ ಮಹಾಯುದ್ಧದಲ್ಲಿ ಅಕಾಲಿಕ ಮರಣವನ್ನು ಹೊಂದಿದಾಗ ಇವರ ಕುಟುಂಬಕ್ಕೆ ಆದ ಆಘಾತ ಅಷ್ಟಿಷ್ಟಲ್ಲ. ಒಂದು ಕಡೆ ಕಿತ್ತು ತಿನ್ನುವ ಬಡತನ, ಇನ್ನೊಂದು ಕಡೆ ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿ. ಆದರೂ ಜೀವನ ನಿರ್ವಹಣೆಯ ಅನಿವಾರ್ಯತೆಗೆ ಇವರ ತಾಯಿ ತಾಯಮ್ಮ ಮಿಡ್ ವೈಪ್ ಆಗಿ ಕೆಲಸವನ್ನು ನಿರ್ವಹಿಸುತ್ತ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಸಾಕಿ ಸಲಹುತ್ತಿದ್ದರು. ಆ ಸಮಯದಲ್ಲಿ ಇವರು ಆರ್ಕಾಟ್ ಶ್ರೀನಿವಾಸ ಆಚಾರ್ ಬೀದಿಯಲ್ಲಿದ್ದ ಸಿದ್ಧನಕಟ್ಟೆ ಪ್ರೌಢಶಾಲೆಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದರು.

ಒಂದು ದಿನ ಶಾಲೆಯಲ್ಲಿ ನಾಟಕದ ರಿಹರ್ಸಲ್ ನಡೆಯುತ್ತಿದ್ದಾಗ ನೋಡಲು ಇಷ್ಟಪಟ್ಟರೆಂದು ಇವರನ್ನು ಶಾಲೆಯ ಮುಖ್ಯೋಪಾಧ್ಯಾಯರು ಗದರಿಸಿದ್ದರು. ಕಾರಣ ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಅಷ್ಟಾಗಿ ಪ್ರಾಮುಖ್ಯತೆಯನ್ನು ನೀಡುತ್ತಿರಲಿಲ್ಲ. ಈ ಘಟನೆಯು ಇವರ ಮೇಲೆ ಅಪಾರ ಪರಿಣಾಮವನ್ನು ಬೀರಿತಲ್ಲದೆ ಕಲಾವಿದೆಯಾಗಲು ಪ್ರಮುಖ ಕಾರಣವಾಯಿತು.

ವಿಧಿಯಾಟದಂತೆ ಇದೇ ಸಮಯದಲ್ಲಿ ಇವರ ಕುಟುಂಬವು ಬಳಪೇಟೇಗೆ ಬಂದಿತು. ಆಗಲೇ ಇವರ ಎದುರುಗಡೆ ಮನೆಯಲ್ಲಿ ಮೂಕಿ ಚಿತ್ರಗಳ ನಟಿ ಕೃಷ್ಣಾಬಾಯಿ ವಾಸವಾಗಿದ್ದರು. ಇವರ ಪರಿಚಯದೊಂದಿಗೆ ಅಂದಿನ ಕಾಲದಲ್ಲಿ ಪ್ರಸಿದ್ಧಿ ಪಡೆದಿದ್ದ ಸೂರ್ಯ ಫಿಲಂ ಸ್ಟುಡಿಯೋ ಮುಖ್ಯಸ್ಥ ದೇಸಾಯಿಯವರನ್ನು ಭೇಟಿಯಾದರು. ಇವರ ಸಲಹೆಯಂತೆ ನಟಿಸಲು ಒಪ್ಪಿಕೊಂಡರೂ ಆರಂಭದಲ್ಲಿ ಇವರ ತಾಯಿ ಒಪ್ಪಲಿಲ್ಲ. ಆದರೂ ಸ್ಟುಡಿಯೋ ಮುಖ್ಯಸ್ಥರು ತಿಂಗಳಿಗೆ ರೂ.೨೫೦ ಸಂಬಳ ಮತ್ತು ಇರಲು ಒಂದು ಮನೆಯನ್ನು ಕೊಡುವುದಾಗಿ ಹೇಳಿದಾಗ ಕಿತ್ತು ತಿನ್ನುವ ಬಡತನದ ಬಾಳಿಗೆ ಅನಿವಾರ್ಯ ಆದ ಕಾರಣ ತಮ್ಮ ಮಗಳನ್ನು ಚಿತ್ರರಂಗಕ್ಕೆ ಕಳುಹಿಸಲು ಒಪ್ಪಿಕೊಂಡರು

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply