ಕನ್ನಡ ಚಿತ್ರರಂಗದ ಶೋ ಮ್ಯಾನ್ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್

( ಮುಂದುವರೆದಭಾಗ )

೧೯೯೭ ರಲ್ಲಿ ಇವರ ನಿರ್ಮಾಣ, ನಿರ್ದೇಶನದಲ್ಲಿ ತೆರೆ ಕಂಡ ಸಿಪಾಯಿ ಚಿತ್ರ. ಈ ಚಿತ್ರಕ್ಕೆ ಮೂರು ವಿಶೇಷತೆಗಳಿವೆ. ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ  ಸ್ನೇಹದ ಗುರುತಾಗಿ ಯಾವ ಶುಲ್ಕವನ್ನು ಪಡೆಯದೇ ಈ ಚಿತ್ರದಲ್ಲಿ ನಟಿಸಿದರು. ಈ ಚಿತ್ರವನ್ನು ಈಶ್ವರಿ ಸಂಸ್ಥೆ ನಿರ್ಮಿಸುವುದರ ಮೂಲಕ ಬೆಳ್ಳಿ ಹಬ್ಬವನ್ನು ಆಚರಿಸಿತು. ೧೯೯೯ ರಲ್ಲಿ ಬಿಡುಗಡೆಯಾದ ನಾನು ನನ್ನ ಹೆಂಡ್ತೀರು ಚಿತ್ರದಲ್ಲಿ ನಟಿಸಿ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡುವುದರೊಂದಿಗೆ ಸಂಗೀತ ನಿರ್ದೇಶಕರಾಗಿಯು ಬಡ್ತಿ ಪಡೆದರು.

ಈ ಚಿತ್ರದ ಮೂಲಕ ಸಂಗೀತ ನಿರ್ದೇಶನ ಮಾಡಲು ಆರಂಭಿಸಿದ ಇವರು ಓ ನನ್ನ ನಲ್ಲೆ,ಮಲ್ಲ, ಏಕಾಂಗಿ, ಹಠವಾದಿ ಚಿತ್ರ ಸೇರಿದಂತೆ ಇದುವರೆಗೂ ಹದಿನೈದಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅದೇ ವರ್ಷ ಅಂದರೆ ೧೯೯೯ ರಲ್ಲಿ ಚೋರ ಚಿತ್ತ ಚೋರ ಚಿತ್ರದಲ್ಲಿ ನಟಿಸಿ ಸಂಗೀತದ ಜೊತೆಯಲ್ಲಿ ಮೊದಲ ಬಾರಿಗೆ ದಿಲ್ಲು,ದಿಲ್ಲು ಸೇರಿದಾಗ ಗೀತೆಯನ್ನು ರಚಿಸುವುದರ ಮೂಲಕ ಗೀತೆ ರಚನಕಾರರಾಗಿ ಕೂಡ ಬಡ್ತಿ ಪಡೆದರು. ಇವರು ಕೇವಲ ಪ್ರೇಮ ಕಥೆಯ ಚಿತ್ರಗಳಿಗೆ ಸೀಮಿತವಾಗಿಲ್ಲ. ದೃಶ್ಯ, ಆದೃಶ್ಯ , ಅಪೂರ್ವ ದಂತಹ ವಿಭಿನ್ನ ಶೈಲಿಯ ಕಥೆಯನ್ನು ಹೊಂದಿರುವ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಳೆದ ವರ್ಷ ತೆರೆ ಕಂಡ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿ ಬಹು ತಾರಾಗಣ ಹೊಂದಿದ ಪೌರಾಣಿಕ ಕಥೆ ಕುರುಕ್ಷೇತ್ರ ಚಿತ್ರದಲ್ಲಿ ಕೃಷ್ಣನ ಪಾತ್ರವನ್ನು ಬಹಳ ಉತ್ತಮವಾಗಿ ನಿರ್ವಹಿಸಿದ್ದಾರೆ. ಇವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ನಾದಬ್ರಹ್ಮ, ಸಂಗೀತ ಮಾಂತ್ರಿಕ ಹಂಸಲೇಖವರನ್ನು ತಮ್ಮ ಪ್ರೇಮ ಲೋಕ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪರಿಚಯಿಸಿ ಕನ್ನಡ ಚಿತ್ರರಂಗದ ಗೀತ ಪರಂಪರೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದರು. ಇವರಲ್ಲದೆ ಎಲ್.ಎನ್.ಶಾಸ್ತ್ರಿ,ಸುಮಾ ಶಾಸ್ತ್ರಿ, ಹರಿಕೃಷ್ಣ ಮತ್ತು ಗೌತಮ್ ಶ್ರೀವತ್ಸ ಮುಂತಾದ ಅನೇಕ ಸಂಗೀತ ನಿರ್ದೇಶಕರನ್ನು ಕನ್ನಡ ಚಿತ್ರ ರಂಗಕ್ಕೆ ಪರಿಚಯಿಸಿರದ್ದಲ್ಲದೆ  ಜೂಹಿ ಚಾವ್ಲಾ, ಮೂನ್ ಮೂನ್ ಸೇನ್, ಮಧುಬಾಲಾ,ಮೀನಾ,ರೋಜಾ,ಭಾನುಪ್ರಿಯ ಮತ್ತು ಬಾಲಿವುಡ್ ಸುಂದರಿ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಹೆಸರಾಂತ ಪರಭಾಷಾ ನಾಯಕಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

ಜಿ.ಎಸ್.ವಿ.ಸೀತಾರಾಂ ಅವರು ಇವರ ಬಹುತೇಕ ಚಿತ್ರಗಳಿಗೆ ಬಹುಕಾಲದ ಛಾಯಾಗ್ರಾಹಕ ರಾಗಿದ್ದಾರೆ.  ಇವರು ೧೯೮೧ ರಲ್ಲಿ ಸುಮಥಿ ಎಂಬುವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ ಇವರಿಗೆ ಮನೋರಂಜನ್ ಮತ್ತು ವಿಕ್ರಮ್ ಎಂಬ ಇಬ್ಬರು ಗಂಡು ಮಕ್ಕಳು ಇರುವರು.ಇವರು ಕೂಡ ಚಿತ್ರರಂಗದಲ್ಲಿ ಸಕ್ರೀಯವಾಗಿದ್ದಾರೆ. ಮತ್ತು ಇವರ ಮಗಳ ಹೆಸರು ಗೀತಾಂಜಲಿ. ತಮ್ಮ ೩೮ ವರ್ಷಗಳ ಬಣ್ಣದ ಬದುಕಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ಕೆಲಸಗಳನ್ನು ಕಲಿತು ಪಳಗಿರುವ ಇವರು ತಮ್ಮ ಪ್ರಸ್ತುತ ೫೮ ರ ಇಳಿ ವಯಸ್ಸಿನಲ್ಲಿ ಕೂಡ ಹೊಸ ಹೊಸ ಕೆಲಸಗಳನ್ನು, ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆದರೆ ಅರ್ಥ ವಯಸ್ಸು ದೇಹಕ್ಕೆ ಹೊರತು ಮನಸ್ಸಿಗೆ ಅಲ್ಲ. 

ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯವಿದೆ ಎನ್ನುವುದಕ್ಕೆ ನಮ್ಮ ಕ್ರೇಜಿಸ್ಟಾರ್ ಸಾಕ್ಷಿ. ಇಂತಹ ಅಗಾಧವಾದ ಪ್ರತಿಭೆಯ ಸಾಮರ್ಥ್ಯ ಹೊಂದಿರುವ ಇವರು ಇನ್ನೂ ಉತ್ತಮ ವಿಭಿನ್ನ ಶೈಲಿಯ ಚಿತ್ರಗಳನ್ನು ನೀಡಿ ಕನ್ನಡ ಚಿತ್ರರಂಗವನ್ನು ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಸಬೇಕಾಗಿ ನಿಮ್ಮ ಅಭಿಮಾನಿಯಾಗಿ ಮತ್ತು ಅಭಿಮಾನಿಗಳ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಯಾಕೆಂದರೆ ನಮ್ಮ ಕ್ರೇಜಿಸ್ಟಾರ್ ಗೆ ಕ್ರೇಜಿಸ್ಟಾರ್ ಮಾತ್ರ ಸಾಟಿ ಹೊರತು ಇನ್ಯಾರು ಆಗಲು ಸಾಧ್ಯವಿಲ್ಲ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply