ಕನ್ನಡ ಚಿತ್ರರಂಗದ ಶ್ರೇಷ್ಠ ಚತುರ ನಟ

( ಮುಂದುವರೆದ ಭಾಗ )

೨೦೦೨ ನೇ ಇಸ್ವಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಧಮ್ ಚಿತ್ರದಲ್ಲಿ ಮೊದಲ ಬಾರಿಗೆ ಖಳನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರದ ನಂತರ ತಮ್ಮ ಚಿತ್ರಗಳಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದರು. ಅದರಲ್ಲೂ  ೨೦೦೬ ರಲ್ಲಿ ತೆರೆ ಕಂಡ ನಕ್ಸ್ ಲೈಟ್ ಕುರಿತಾದ ಸೈನೈಡ್ ಚಿತ್ರದಲ್ಲಿ ಗಂಭೀರ ಪಾತ್ರದ ಅಭಿನಯವನ್ನು ಮರೆಯಲು ಸಾಧ್ಯವಿಲ್ಲ.

ಆದರೆ ೨೦೦೭ ನೇ ಇಸ್ವಿಯಲ್ಲಿ ತೆರೆ ಕಂಡ ಬ್ಲ್ಯಾಕ್ ಕೋಬ್ರಾ ವಿಜಯ್ ಅಭಿನಯದ ದುನಿಯಾ ಚಿತ್ರದಲ್ಲಿ ವಿಭಿನ್ನ ಶೈಲಿಯ ಹಾಸ್ಯ ಪಾತ್ರವನ್ನು ನಿರ್ವಹಿಸಿದ ನಂತರ ಇವರ ಅದೃಷ್ಟವೇ ಬದಲಾಯಿತು.

ಶ್ರೀರಾಮ್, ಹೃದಯವಂತ,ಧರ್ಮ, ಸಾಹುಕಾರ, ಭಗವಾನ್, ಓಂಕಾರ, ರಾಕ್ಷಸ, ವಾಲ್ಮೀಕಿ, ಸ್ವಾಮಿ, ತಂಗಿಗಾಗಿ, ರಂಗ ಎಸ್ಸೆಸ್ಸೆಲ್ಸಿ, ಸುಂಟರಗಾಳಿ ಇತ್ಯಾದಿ ಚಿತ್ರಗಳು ಸೇರಿದಂತೆ ತಮ್ಮ ಹತ್ತೊಂಬತ್ತು ವರ್ಷಗಳ ಚಿತ್ರ ರಂಗದ ಜೀವನದಲ್ಲಿ ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಮಣಿ ಮತ್ತು ದುನಿಯಾ ಚಿತ್ರಗಳ ನಟನೆಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸೈನೆಡ್, ರಾಮ್, ಮೊದಲ ಸಲಾ, ಒಲವೇ ಮಂದಾರ ಮತ್ತು ಜಯಮ್ಮನ ಮಗ ಚಿತ್ರಗಳ  ಅತ್ಯುತ್ತಮ ಪೋಷಕ ನಟನೆಗೆ ಐದು ಬಾರಿ ಫಿಲಂಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಸಂಜು ವೆಡ್ಸ್ ಗೀತಾ, ರೋಮಿಯೋ,ಶಿವ, ಜಯಮ್ಮನ ಮಗ ಮತ್ತು ಪವರ್ ಚಿತ್ರಗಳ ನಕಾರಾತ್ಮಕ ಪಾತ್ರದ ನಟನೆ, ಪೋಷಕ ನಟನೆ ಮತ್ತು ಹಾಸ್ಯ ನಟನೆಗೆ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದ ಕೀರ್ತಿಯು ಇವರದ್ದಾಗಿದೆ.

ಪ್ರಸ್ತುತ ೫೬ ವರ್ಷದ ಇವರು ಇಂದಿಗೂ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply