ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸ್ತಿರೋ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಾಮ್ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ಅಭಿನಯಿಸಲಿದ್ದಾರಂತೆ.. ಅದು ವಿಶೇಷ ಪಾತ್ರವೋ ಅಥವಾ ಒಂದು ಐಟಂ ಹಾಡೋ ಆನ್ನುವ ಮಾಹಿತಿ ಇನ್ನು ತಿಳಿದಿಲ್ಲ ..
ಪಡ್ಡೆ ಹುಡುಗರ ಹಾಟ್ ಫೇವರೇಟ್, ಗ್ಲಾಮರ್ ಕ್ವೀನ್,ದೇಶದಾದ್ಯಂತ ಅಭಿಮಾನಗಳನ್ನ ಹೊಂದಿರುವ ಈಕೆ ನಮ್ಮ ಕನ್ನಡ ಸಿನಿಮಾವೊಂದರಲ್ಲಿ ನಟಿಸ್ತಿರೋದೆ ಒಂದು ಸಂತಸದ ಸುದ್ದಿ. ಕತ್ರಿನಾ ಕೈಫ್ ತಮಿಳ್ ಮತ್ತು ತೆಲುಗು ಸಿನಿಮಾಗಳಲ್ಲಿ ವ ಹಿಂದೆ ನಾಯಕಿಯಾಗಿ ನಟಿಸಿದ್ದು ನಂತರ ಬಾಲಿವುಡ್ನಲ್ಲಿ ನೆಲೆ ಊರಿದರು. ನಂತರ ಬಾಲಿವುಡ್ನಲ್ಲಿ ಅತ್ಯಂತ ಬೇಡಿಕೆಯುಳ್ಳ ನಟಿಯಾದ್ರು.

ಬಾಲಿವುಡ್ ನಟಿ ಮಣಿಯರು, ತಾರೆಯರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಹೊಸ ಪದ್ದತಿ ಏನಲ್ಲ, 60ರ ದಶಕದಿಂದ ಇಂದಿನವರೆಗೂ ನಟಿಸುರವ ಹೀರೋಯಿನ್ಗಳ ಪಟ್ಟಿ ದೊಡ್ಡದಾಗಿಯೇ ಇದೆ.ಇತ್ತೀಚೆಗಿನ ಕನ್ನಡ ಸಿನಿಮಾವನ್ನ ಪರಿಗಣಿಸಿದಾಗ ಐಟಂ ನಂಬರ್ ಸಲುವಾಗಿ ಕೇಲುವರು ಹಾರಿ ಬಂದಿದ್ದಾರೆ ಹೊರೆತು ಪರಿಪೂರ್ಣ ನಾಯಕಿಯ ಪಾತ್ರದಲ್ಲಿ ಯಾರು ಅಭಿನಯಿಸಿದ್ದಿಲ್ಲ.