ಸ್ಯಾಂಡಲ್‍ವುಡ್‍ನ ಖ್ಯಾತ ವಾಲ್ ಪೋಸ್ಟರ್ ಡಿಸೈನರ್ ಮಸ್ತಾನ್ ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಇತ್ತೀಚೆಗಷ್ಟೇ ಇವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ರಾಜ್ ಕುಮಾರ್ ವಿಷ್ಣುವರ್ಧನ್ ಅಂಬರೀಷ್ ಕಾಲದ ಸಿನಿಮಾಗಳಿಂದಲೂ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸಿನಿಮಾ ಪೋಸ್ಟರ್ ಗಳಲ್ಲಿ ಮಸ್ತಾನ್ ಹೆಸರು ಅಚ್ಚಾಗಿದೆ. ಸುಮಾರು ನಲ್ವತ್ತು ವರ್ಷಗಳ ಕಾಲ ಸ್ಯಾಂಡಲ್ವುಡ್ ಗೆ ಅವಿರತ ಸೇವೆ ಸಲ್ಲಿಸಿದ್ದ ಇವರ ಸಾವು ನಿಜಕ್ಕೂ ಭರಿಸಲಾಗದ ನಷ್ಟ. ಶುಕ್ಲಾಮ್ ಭರಧರಂ, ಕಲ್ಲೇಶಿ ಮಲ್ಲೇಶಿ ಯಂತಹ ಸಿನಿಮಾಗಳನ್ನು ಕೂಡ ಇವರು ನಿರ್ದೇಶಿಸಿದ್ದರು. ಇವರ ಆತ್ಮಕ್ಕೆ ಆ ಭಗವಂತ ಶಾಂತಿಯನ್ನು ಕರುಣಿಸಲಿ ಎಂಬುದೇ ಚಿತ್ರೋದ್ಯಮ.ಕಾಂ ನ ಪಾರ್ಥನೆ.