“ಕ್ಯಾ ಕೆಹನಾ?”

"ಕ್ಯಾ ಕೆಹನಾ?"

ನಿಜ… ಏನು ಹೇಳುವುದು?

ಒಬ್ಬ ಹೆಣ್ಣು ಮದುವೆಗೆ ಮುಂಚೆ ಬಸಿರಾದರೆ ಮನೆಯವರಿಗೆ ಮುಖ ತೋರಿಸಲಾಗದೇ, ಹೊರಗಿನ ಪ್ರಪಂಚವನ್ನು ಎದುರಿಸಲಾಗದೇ ಕ್ಷಣಕ್ಷಣವೂ ಮುಜುಗರದಿಂದ ನರಳುತ್ತಾ ಜೀವನ ಮಾಡಬೇಕು. ಸಮಾಜ ಆಕೆಯನ್ನು ಏನೋ ಮಾಡಬಾರದ ತಪ್ಪು ಮಾಡಿದ್ದಾಳೆ ಎಂಬಂತೆ ಕೀಳಾಗಿ ನೋಡುತ್ತದೆ.

ಅದೇ ಈ ಬಸಿರಿಗೆ ಕಾರಣನಾದ ಗಂಡಸಿಗೆ ಇದ್ಯಾವ ತೊಂದರೆಯೂ ಇಲ್ಲ. ಅವನ ಸಾಮಾಜಿಕ ಸ್ಥಾನಮಾನ, ವೈಯುಕ್ತಿಕ ಗೌರವ ಯಾವುದಕ್ಕೂ ಕುಂದು ಉಂಟಾಗುವುದಿಲ್ಲ. ಅಷ್ಟೇ ಅಲ್ಲ… ಆತ ಮತ್ತೊಂದು ಮದುವೆ ಸಹ ಆಗಬಹುದು.

ಈ ತಾರತಮ್ಯದ ಕುರಿತಾಗಿ ಮಾಡಿರುವ ಸಿನೆಮಾ ಇದು.

ಪ್ರೀತಿ ಜಿಂಟಾ ಮನೆಯ ಅಕ್ಕರೆಯ ಮುದ್ದಿನ ಮಗಳು. ಮನೆಯ ಸದಸ್ಯರೆಲ್ಲರೂ ಆಕೆಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿರುತ್ತಾರೆ.‌ ಆದರೆ ಆಕೆ ಮದುವೆಗೂ ಮೊದಲೇ ಬಸುರಿಯಾದಳು ಎಂಬ ಒಂದೇ ಕಾರಣಕ್ಕೆ ಆಕೆಯ ತಂದೆ ಅವಳನ್ನು ಮನೆಯಿಂದಾಚೆ ಹಾಕುತ್ತಾರೆ.

"ಕ್ಯಾ ಕೆಹನಾ?"
“ಕ್ಯಾ ಕೆಹನಾ?”

ಈವರೆಗೂ ಹೊರ ಪ್ರಪಂಚವನ್ನೇ ನೋಡಿರದ ಆಕೆ ಏನು ಮಾಡಬೇಕು….?

ಆಕೆ ಒಂಟಿಯಾಗಿ ದಿಕ್ಕುದೆಸೆಯಿಲ್ಲದೇ ಇದ್ದರೆ ಕಾಮುಕರು ಬಿಡುತ್ತಾರೆಯೇ….?

ಆಗ ಆಕೆಗೆ ರಕ್ಷಣೆ ಕೊಡುವವರು ಯಾರು….?

ಆದರೆ ಈ ಬಸಿರಿಗೆ ಕಾರಣನಾದ ಪುರುಷನನ್ನು ಯಾರೂ ಮನೆಯಿಂದಾಚೆ ಹಾಕುವುದಿಲ್ಲ. ಕಡೆಯ ಪಕ್ಷ ನೀನು ಮಾಡಿದ್ದು ತಪ್ಪು ಅಂತ ಸಹ ಯಾರೂ ಹೇಳುವುದಿಲ್ಲ. ಅವನಿಗೂ ಸಹ ಯಾವುದೇ ಗಿಲ್ಟ್ ಕಾಡುವುದಿಲ್ಲ.

ಪ್ರೀತಿಸಿ ಮೋಸ ಹೋದ ಹೆಣ್ಮಗಳ ಪಾತ್ರದಲ್ಲಿ ಪ್ರೀತಿ ಜಿಂಟಾರ ನಟನೆ ಹೃದಯವನ್ನು ಕಲಕಿ ಕಣ್ಣೀರು ತರಿಸುತ್ತದೆ. ತನ್ನ ಪಾಡಿಗೆ ತುಂಟಾಟವಾಡಿಕೊಂಡು ಇದ್ದ ಹೆಣ್ಣುಮಗಳೊಬ್ಬಳು ಪ್ರೀತಿಯ ನಶೆಗೆ ಬಿದ್ದು ತನ್ನ ಜೀವನವನ್ನೇ ಹೇಗೆ ಹಾಳು ಮಾಡಿಕೊಳ್ಳುತ್ತಾಳೆ ಅಂತ ತೋರಿಸಲಾಗಿದೆ.

ಯುವಜನಕ್ಕೆ ಎಚ್ಚರಿಕೆಯ ಗಂಟೆಯಂತಿದೆ ಸಿನೆಮಾ. ಒಂದು ಕ್ಷಣ ಮೈ ಮರೆತರೆ ಜೀವನ ಪೂರ್ತಿ ನರಳಬೇಕು.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

4 thoughts on ““ಕ್ಯಾ ಕೆಹನಾ?”

Leave a Reply