ಕ್ರೇಜಿ ಸ್ಟಾರ್ ರವಿಚಂದ್ರನ್ ಹೊಸ ಸಿನಿಮಾ ಅನೌನ್ಸ್.

ravichandran

ಕ್ರೇಜಿ ಸ್ಟಾರ್ ರವಿಚಂದ್ರನ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ‘ದಿ ಜಡ್ಜ್‌ಮೆಂಟ್‌’ ಎಂದು ಹೆಸರಿಡಲಾಗಿದೆ. ಅಮೃತಾ ಅಪಾರ್ಟ್‌ಮೆಂಟ್‌ ಎಂಬ ಸಿನಿಮಾ ಮೂಲಕ ಪ್ರಸಿದ್ಧಿಯಾಗಿದ್ದ ನಿರ್ದೇಶಕ ಗುರುರಾಜ ಕುಲಕರ್ಣಿ ಅವರ ಸಾರಥ್ಯ ಈ ಸಿನಿಮಾಗೆ ಇದೆ.

ಈ ಚಿತ್ರದಲ್ಲಿ ‘ಕ್ರೇಜಿಸ್ಟಾರ್‌’ ರವಿಚಂದ್ರನ್‌ ತಮ್ಮ ಸಿನಿ ಕರಿಯರ್‌ನಲ್ಲಿ ಇದುವರೆಗೂ ನಿರ್ವಹಿಸದೇ ಇರುವಂತಹ ಪಾತ್ರದಲ್ಲಿ ನಟಿಸಿಲಿದ್ದಾರಂತೆ. ಒಂದಷ್ಟು ನೈಜ ಘಟನೆಗಳನ್ನು ಇಟ್ಟುಕೊಂಡು ಗುರುರಾಜ ಕುಲಕರ್ಣಿ ಈ ಸಿನಿಮಾದ ಕಥೆ ಬರೆದಿದ್ದಾರೆ.

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಜತೆ ಅನೇಕ ನಟ ನಟಿಯರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಧನ್ಯ ರಾಮ್‌ಕುಮಾರ್‌, ರಂಗಾಯಣ ರಘು, ದಿಗಂತ್‌, ಪ್ರಕಾಶ್‌ ಬೆಳವಾಡಿ, ಕೃಷ್ಣ ಹೆಬ್ಬಾಳೆ ಸೇರಿದಂತೆ ಅನೇಕ ನಟ ನಟಿಯರು ಇದರಲ್ಲಿ ನಟಿಸುತ್ತಿದ್ದಾರೆ. ಖುಷ್ಬೂ ಸಹ ಸಿನಿಮಾದ ಅತಿಥಿ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಿನಿಪ್ರಿಯರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಸಿನಿಮಾಗೆ ಚಿತ್ರೋದ್ಯಮ.ಕಾಂ ನಿಂದ ಶುಭಾಶಯಗಳು

Chitrodyama Updates

Chitrodyama Updates

Leave a Reply