ಚಿತ್ರರಂಗದಲ್ಲಿ ಹಲವಾರು ಹಿಟ್ ಗೀತೆಗಳನ್ನು ಹಾಡಿದ್ದಾರೆ ಕೆಲವು ನೆನಪಿಗೆ ಬರೋದು :
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮ, ದೀಪಾವಳಿ ದೀಪಾವಳಿ, ಒಳಗೆ ಸೇರಿದರೆ ಗುಂಡು, ಹೇಗಿದೆ ನಮ್ ದೇಶ, ಇವನ್ಯಾರ ಮಗನೋ ಹಿಂಗವ್ನಲ್ಲ, ಪ್ರೀತಿಯಲ್ಲಿ ಇರೋ ಸುಖ, ಚೆಲುವೆ ನೀನು ನಕ್ಕರೆ, ನಿಜವ ನುಡಿಯಲೆ, ಹೃದಯದಲಿ ಇದೇನಿದೂ, ಕಣ್ಣಲ್ಲಿ ಜ್ಯೋತಿ ತಂದೋನು ನೀನೆ, ಕೋಗಿಲೆ ಓ ಕೋಗಿಲೆ, ಮುಸ್ಸಂಜೇಲಿ ನಮ್ಮೂರಲ್ಲಿ, ಆಗುಂಬೆಯ ಪ್ರೇಮ ಸಂಜೆಯ, ದೈವದಾ ಕರುಣೆಯೋ, ಓಹೋ ಹಿಮಾಲಯ, ಗುಂಡಿಗೆ ಕಲ್ ಗುಂಡಿಗೆ, ಕೂಗೊ ಕೋಳಿಗೆ ಖಾರ ಮಸಲೆ, ವರವಾದೆ ನೀನು ನನ್ನ ಪ್ರೀತಿಗೆ, ಮನದಾಸೆ ಹಕ್ಕಿಯಾಗಿ, ಯಾರಮ್ಮ ಇವನೂ ನಶೆಯ ಹುಡುಗ ಇನ್ನೂ ಹಲವಾರು..
ಚಿತ್ರಗೀತೆಗಳಲ್ಲದೆ ಭಕ್ತಿ ಗೀತೆಗಳನ್ನು ಹಾಡಿದ್ದಾರೆ ಶರಣು ಶರಣಯ್ಯ, ಶುಕ್ಲಾಂ ಬರದರಂ ವಿಷ್ಣುಂ, ಶ್ವೇತಾಂಬರ ಧರಣಿ ಹೀಗೆ…
ಜಾನಪದ ಗೀತೆಗಳಲ್ಲಿ ತವರೂರ ಮನೆನೋಡ ಬಂದೆ, ಸೊಸೆ ಬಂದು ಒಂದು ವರುಷದಾಗ, ಪಂಚಮಿ ಹಬ್ಬ, ಯಾಕೆ ಬಡದಾಡ್ತಿ ತಮ್ಮ ಹೀಗೆ..
ಇವರು ಕಂಠದಾನ ನೀಡಿರುವ ನಟಿಯರಲ್ಲಿ ಕೆಲವರು ಸುಧಾರಾಣಿ, ಮಾಲಾಶ್ರೀ, ಗೀತ, ಶಿಲ್ಪ, ರಾಧಿಕ ಶರತ್ ಕುಮಾರ್, ಖುಷ್ಬು, ಮಾಧವಿ, ಪ್ರೇಮ, ನಿರೋಷ, ತಾರಾ, ಅನು ಪ್ರಭಾಕರ್ ಮುಂತಾದವರು.
ಇವರು ಯುಗಳ ಗೀತೆಗಳನ್ನು ಅಣ್ಣಾವೃ, ಎಸ್ ಪಿ ಬಾಲಸುಬ್ರಹ್ಮಣ್ಯಂ, ರಾಜೇಶ್ ಕೃಷ್ಣನ್, ಕೆ ಜೆ ಏಸುದಾಸ್, ಮನು, ಉದಿತ್ ನಾರಾಯಣ್ , ರಾಘವೇಂದ್ರ ರಾಜ್ ಕುಮಾರ್ ಜೊತೆ ಹಾಡಿದ್ದಾರೆ.
ಹಂಸಲೇಖ, ಇಳಯರಾಜ, ವಿ ಮನೋಹರ್, ಉಪೇಂದ್ರ ಕುಮಾರ್ ,ಮನೋಮೂತಿ೯, ಸಾಧುಕೋಕಿಲ ಮುಂತಾದ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.
🦆ಚಿನ್ನಾರಿ ಮುತ್ತ ಚಿತ್ರದ “ಮ್ಯಾಲೆ ಕುಂತವ್ನೆ ಮುಂಗಾರು ಮೋಡ ‘ ಗಾಯನಕ್ಕೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ರಾಜ್ಯ ಸರಕಾರದಿಂದ ನೀಡಿದ್ದಾರೆ.
🦜ಬೆಳದಿಂಗಳ ಬಾಲೆ ಚಿತ್ರದ ನಟಿ ಕಂಠದಾನಕ್ಕೆ ಕನಾ೯ಟಕ ಸಕಾ೯ರದಿಂದ ವಿಶೇಷ ತೀಪು೯ಗಾರರ ವತಿಯಿಂದ “ಅತ್ಯುತ್ತಮ ಕಂಠದಾನ ಪ್ರಶಸ್ತಿ” ನೀಡಲಾಗಿದೆ.
ಅಣ್ಣಾವ್ರ ಮತ್ತು ಇವರ ಯುಗಳ ಗೀತೆಗಳನ್ನು ಎಂದಿಗೂ ಮರೆಯಲಾಗದು ಆಕಸ್ಮಿಕ ಚಿತ್ರದ “ಆಗುಂಬೆಯ ಪ್ರೇಮ ಸಂಜೆಯ, ಜೀವನ ಚೈತ್ರ ಚಿತ್ರದ “ನಿನ್ನ ಚೆಲುವ ವರನ ಕಮಲ ನಯನ ” .
ಇವರು ಗಾಯನ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಬೆಳೆಯಲಿ ಎನ್ನೋಣ 🙏