ಗಾಯನದಲ್ಲಿ ಮತ್ತೊಂದು ಕಂಠ ನಮಗೆ ಮುದ ನೀಡುವಂತೆ ಹಾಡುವ ಸಾಮಥ್ಯ೯ ಇದ್ದದ್ದು ಇವರಿಗೆ, ಹಿನ್ನೆಲೆ ಗಾಯಕಿಯಾಗಿ, ಕಂಠದಾನ ಕಲಾವಿದರಾಗಿ ಎಲ್ಲರ ಮನೆ ಮಾತಾದವರು ಶ್ರೀಮತಿ ಮಂಜುಳಾ ಗುರುರಾಜ್ ಅವರಿಗೆ ಜನುಮದಿನದ ಶುಭಾಶಯಗಳು. ಹುಟ್ಟಿದ್ದು ಮೈಸೂರಿನಲ್ಲಿ ಸೀತಾ ಲಕ್ಷ್ಮಿ ಮತ್ತು ಡಾ. ರಾಮಣ್ಣ ರವರ ಮಗಳು, ವಿಜ್ಞಾನ ಪದವೀಧರೆ ಬೆಂಗಳೂರು ಯೂನಿವರ್ಸಿಟಿ, ಕನಾ೯ಟಕ್, ಹಿಂದೂಸ್ಥಾನಿ ಮತ್ತು ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ.
07 ಭಾಷೆಯಲ್ಲಿ 2000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ, 12500 ಕ್ಕೂ ಹೆಚ್ಚು ಹಾಡುಗಳನ್ನು 09 ಭಾಷೆಯಲ್ಲಿ ಎಲ್ಲಾ ರೀತಿಯ ಅಂದರೆ ಭಕ್ತಿ ಗೀತೆ, ಶಾಸ್ತ್ರೀಯ, ಪಾಪ್ ಶೈಲಿಯಲ್ಲಿ ಹಾಡಿರೋದು ಗಮನಾರ್ಹ.
ಮೊದಲು ಕಂಠದಾನ ನೀಡಿದ ಕನ್ನಡದ ಚಲನಚಿತ್ರ “ಆಹುತಿ “.
ದೂರದಶ೯ನ ದಲ್ಲಿ ವಾತಾ೯ ಓದುಗರಾಗಿ 14 ವಷ೯ (1983 ರಿಂದ 1998) ಮತ್ತು ಆಕಾಶವಾಣಿಯಲ್ಲಿ ನಿರೂಪಕರಾಗಿ 02 ವಷ೯ ನಡೆಸಿಕೊಟ್ಟಿದ್ದಾರೆ.
“ಇವರನ್ನು ನೋಡುವ ಸುದಿನ ಒದಗಿಬಂದದ್ದು ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಸಮಾರಂಭದಲ್ಲಿ ಬಂದಿದ್ದರು ಮೊದಲು ಸಾಧ್ಯವಾಗಲಿಲ್ಲ ಕೊನೆಯಲ್ಲಿ ಅವರು ಹೊರಡುವಾಗ ಕಾರ್ ಹತ್ತಿರ ಒಂದು ಫೋಟೋ ತೆಗೆಸಿಕೊಂಡೆ”.
ಇವರು ಸಾಧನಾ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ, ಮೊದಲು ಉದ್ಘಾಟನೆ ಮಾಡಿರೋರು ಗಾನ ಕೋಗಿಲೆ ಎಸ್ ಜಾನಕಿ ರವರ ಅಮೃತ ಹಸ್ತದಿಂದ. ಜಯನಗರ ಮತ್ತು ಗಾಂಧಿ ಬಜಾರ್ ನಲ್ಲಿ ಇವರ ಶಾಖೆಗಳಿದ್ದು ಹಲವಾರು ವಿಧ್ಯಾಥಿ೯ಗಳು ಕಲಿತು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇವರು ಗುರುರಾಜ್ ರವರನ್ನು ಮದುವೆಯಾಗಿರುವರು, “ಗುರುರಾಜ್” ರವರು ಸ್ವಂತ ಸಂಗೀತ ನಿದೇ೯ಶಕರಾಗಿ ಹಲವು ಚಿತ್ರಗಳನ್ನು ನಿದೇ೯ಶಿಸಿ ಮೇಡಂ ರವರ ಜೊತೆಗೂಡಿ ಹಲವಾರು ಸಂಗೀತ ರಸಸಂಜೆ ನೀಡಿದ್ದಾರೆ. ಸಂಗೀತ ಶೋಗಳ ಆಯೋಜಕರೂ ಕೂಡ .ಇವರಿಗೆ ಇಬ್ಬರು ಮಕ್ಕಳು “ಸಂಗೀತ ಗುರುರಾಜ್” ಮಗಳು ಹಾಗೂ ಮಗ ಸಾಗರ್. ಸಂಗೀತ ಗುರುರಾಜ್ ರವರೂ ಸಹ ಗಾಯಕಿ, ನಿರೂಪಕಿ, ಇವರು ಪ್ರೀತಿಸಿ ಮದುವೆಯಾದವರು ಸಹ ಕಲಾವಿದರು, ಗಾಯಕರು ಆದ “ರವಿಶಂಕರ್ ಗೌಡ”, ಚಿತ್ರಗಳಲ್ಲಿ ಮತ್ತು ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಇವರ ಜನಪ್ರಿಯ ಧಾರಾವಾಹಿ “ಸಿಲ್ಲಿ ಲಲ್ಲಿ ” ಅಧ್ಭುತ ಮನೋರಂಜನೆ ನೀಡುವಲ್ಲಿ ಸಾಕ್ಷಿಯಾಗಿದೆ.
ಚಿತ್ರರಂಗದಲ್ಲಿ ಹಲವಾರು ಹಿಟ್ ಗೀತೆಗಳನ್ನು ಹಾಡಿದ್ದಾರೆ ಕೆಲವು ನೆನಪಿಗೆ ಬರೋದು :
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮ, ದೀಪಾವಳಿ ದೀಪಾವಳಿ, ಒಳಗೆ ಸೇರಿದರೆ ಗುಂಡು, ಹೇಗಿದೆ ನಮ್ ದೇಶ, ಇವನ್ಯಾರ ಮಗನೋ ಹಿಂಗವ್ನಲ್ಲ, ಪ್ರೀತಿಯಲ್ಲಿ ಇರೋ ಸುಖ, ಚೆಲುವೆ ನೀನು ನಕ್ಕರೆ, ನಿಜವ ನುಡಿಯಲೆ, ಹೃದಯದಲಿ ಇದೇನಿದೂ, ಕಣ್ಣಲ್ಲಿ ಜ್ಯೋತಿ ತಂದೋನು ನೀನೆ, ಕೋಗಿಲೆ ಓ ಕೋಗಿಲೆ, ಮುಸ್ಸಂಜೇಲಿ ನಮ್ಮೂರಲ್ಲಿ, ಆಗುಂಬೆಯ ಪ್ರೇಮ ಸಂಜೆಯ, ದೈವದಾ ಕರುಣೆಯೋ, ಓಹೋ ಹಿಮಾಲಯ, ಗುಂಡಿಗೆ ಕಲ್ ಗುಂಡಿಗೆ, ಕೂಗೊ ಕೋಳಿಗೆ ಖಾರ ಮಸಲೆ, ವರವಾದೆ ನೀನು ನನ್ನ ಪ್ರೀತಿಗೆ, ಮನದಾಸೆ ಹಕ್ಕಿಯಾಗಿ, ಯಾರಮ್ಮ ಇವನೂ ನಶೆಯ ಹುಡುಗ ಇನ್ನೂ ಹಲವಾರು..
ಚಿತ್ರಗೀತೆಗಳಲ್ಲದೆ ಭಕ್ತಿ ಗೀತೆಗಳನ್ನು ಹಾಡಿದ್ದಾರೆ ಶರಣು ಶರಣಯ್ಯ, ಶುಕ್ಲಾಂ ಬರದರಂ ವಿಷ್ಣುಂ, ಶ್ವೇತಾಂಬರ ಧರಣಿ ಹೀಗೆ…
ಜಾನಪದ ಗೀತೆಗಳಲ್ಲಿ ತವರೂರ ಮನೆನೋಡ ಬಂದೆ, ಸೊಸೆ ಬಂದು ಒಂದು ವರುಷದಾಗ, ಪಂಚಮಿ ಹಬ್ಬ, ಯಾಕೆ ಬಡದಾಡ್ತಿ ತಮ್ಮ ಹೀಗೆ..
ಇವರು ಕಂಠದಾನ ನೀಡಿರುವ ನಟಿಯರಲ್ಲಿ ಕೆಲವರು ಸುಧಾರಾಣಿ, ಮಾಲಾಶ್ರೀ, ಗೀತ, ಶಿಲ್ಪ, ರಾಧಿಕ ಶರತ್ ಕುಮಾರ್, ಖುಷ್ಬು, ಮಾಧವಿ, ಪ್ರೇಮ, ನಿರೋಷ, ತಾರಾ, ಅನು ಪ್ರಭಾಕರ್ ಮುಂತಾದವರು.
ಇವರು ಯುಗಳ ಗೀತೆಗಳನ್ನು ಅಣ್ಣಾವೃ, ಎಸ್ ಪಿ ಬಾಲಸುಬ್ರಹ್ಮಣ್ಯಂ, ರಾಜೇಶ್ ಕೃಷ್ಣನ್, ಕೆ ಜೆ ಏಸುದಾಸ್, ಮನು, ಉದಿತ್ ನಾರಾಯಣ್ , ರಾಘವೇಂದ್ರ ರಾಜ್ ಕುಮಾರ್ ಜೊತೆ ಹಾಡಿದ್ದಾರೆ.
ಹಂಸಲೇಖ, ಇಳಯರಾಜ, ವಿ ಮನೋಹರ್, ಉಪೇಂದ್ರ ಕುಮಾರ್ ,ಮನೋಮೂತಿ೯, ಸಾಧುಕೋಕಿಲ ಮುಂತಾದ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.
🦆ಚಿನ್ನಾರಿ ಮುತ್ತ ಚಿತ್ರದ “ಮ್ಯಾಲೆ ಕುಂತವ್ನೆ ಮುಂಗಾರು ಮೋಡ ‘ ಗಾಯನಕ್ಕೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ರಾಜ್ಯ ಸರಕಾರದಿಂದ ನೀಡಿದ್ದಾರೆ.
🦜ಬೆಳದಿಂಗಳ ಬಾಲೆ ಚಿತ್ರದ ನಟಿ ಕಂಠದಾನಕ್ಕೆ ಕನಾ೯ಟಕ ಸಕಾ೯ರದಿಂದ ವಿಶೇಷ ತೀಪು೯ಗಾರರ ವತಿಯಿಂದ “ಅತ್ಯುತ್ತಮ ಕಂಠದಾನ ಪ್ರಶಸ್ತಿ” ನೀಡಲಾಗಿದೆ.
ಅಣ್ಣಾವ್ರ ಮತ್ತು ಇವರ ಯುಗಳ ಗೀತೆಗಳನ್ನು ಎಂದಿಗೂ ಮರೆಯಲಾಗದು ಆಕಸ್ಮಿಕ ಚಿತ್ರದ “ಆಗುಂಬೆಯ ಪ್ರೇಮ ಸಂಜೆಯ, ಜೀವನ ಚೈತ್ರ ಚಿತ್ರದ “ನಿನ್ನ ಚೆಲುವ ವರನ ಕಮಲ ನಯನ ” .
ಇವರು ಗಾಯನ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಬೆಳೆಯಲಿ ಎನ್ನೋಣ