ಗಂಧವ೯ ಗಾಯಕರ ಜನುಮ ದಿನ 💐💜🎶💙💐

spb

1974 ರಲ್ಲಿ ಭಕ್ತಿಪ್ರಧಾನ ಚಿತ್ರ ಒಂದು ಬಿಡುಗಡೆಯಾದಾಗ ಆ ಚಿತ್ರದಲ್ಲಿ ನಟಸಾವ೯ಭೌಮ ಡಾ. ರಾಜ್ ಕುಮಾರ್ ರವರು, ಸರೋಜಾದೇವಿ, ಮಂಜುಳ ರವರು ಮುಖ್ಯ ಭೂಮಿಕೆಯಲ್ಲಿ, ಚಿತ್ರ ಭಜ೯ರಿ ಯಶಸ್ಸು ಕಾಣುತ್ತೆ ಆದರೆ ಆ ಚಿತ್ರದಲ್ಲಿ ಒಂದು ಜೋಗುಳ ಗೀತೆ ಭಕ್ತಿ ಗೀತೆ ಅದೂ ಶ್ರೀನಿವಾಸ ದೇವರನ್ನು ಕುರಿತು “ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ” ಈ ಹಾಡು ಹಾಡಿದವರು ಬೇರಾರೂ ಅಲ್ಲ ಹೊಸ ಗಾಯಕರಾಗಿ ಪರಿಚಯರಾದ “ಶ್ರೀ. ಎಸ್. ಪಿ. ಬಾಲಸುಬ್ರಹ್ಮಣ್ಯಂ ” (ಶ್ರೀಪತಿ ಪಂಡಿತಾರಾಧ್ಯ ಬಾಲಸುಬ್ರಹ್ಮಣ್ಯಂ) ಇಂದು ಇವರ ಜನುಮ ದಿನ. ಅವರಿಗೆ ಮೊದಲು ಶುಭಾಶಯಗಳು 

ಇವರು ಗಾಯಕರಾಗಿ, ಸಂಗೀತ ನಿದೇ೯ಶಕರಾಗಿ, ನಟರಾಗಿ, ಧ್ವನಿ ನೀಡುವ ಕಲಾವಿದರಾಗಿ, ಚಿತ್ರ ನಿಮಾ೯ಪಕರಾಗಿ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸೇವೆ ಮಾಡುತ್ತಿದ್ದಾರೆ , ಹತ್ತಿರ 16 ಭಾಷೆಗಳಲ್ಲಿ 40000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

spb
spb

ಇವರು ಮಾಡಿರುವ ಸಾಧನೆ ಅಷ್ಟಿಷ್ಟಲ್ಲ 21 ಹಾಡುಗಳು ಉಪೇಂದ್ರ ಕುಮಾರ್ ರವರ ಸಂಗೀತ ನಿದೇ೯ಶನದಲ್ಲೀ ಬೆಳಿಗ್ಗೆ 9 ರಿಂದ ಸಂಜೆ 9 ತನಕ ಕನ್ನಡ ಹಾಡು ಅದೂ ಬೆಂಗಳೂರಿನಲ್ಲಿ ಹಾಡಿರೋದು, ತಮಿಳು 19 ಮತ್ತು ಹಿಂದಿ 16 ಹಾಡಿ ಸಾವ೯ಕಾಲಿಕ ದಾಖಲೆ ಮಾಡಿದ್ದಾರೆ.

ಇವರು ಮೊದಲು ಹಾಡಿರೋ ಗೀತೆ ನಕ್ಕರೆ ಅದೇ ಸ್ವಗ೯ ಚಿತ್ರದಲ್ಲಿ ನರಸಿಂಹರಾಜ್ ರವರ ನಟನೆ. ಇವರು ಎಂ. ಎಸ್ ವಿಶ್ವನಾಥನ್ ರವರು ನಿದೇ೯ಶಿಸಿದ ನಟರುಗಳಾದ ಎಂ. ಜಿ. ಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ರವರಿಗೆ ಹಾಡಿದ್ದಾರೆ .ಯುಗಳ ಗೀತೆಗಳನ್ನು ಎಸ್. ಜಾನಕಿ, ಪಿ. ಸುಶೀಲ, ವಾಣಿ ಜಯರಾಂ ಮತ್ತು ಎಲ್ ಆರ್ ಈಶ್ವರಿ ಜೊತೆ ಹಾಡಿದ್ದಾರೆ, ಸಂಗೀತ ನಿರ್ದೇಶಕರು ಇಳಿಯರಾಜರಿಗೆ ಇವರ ಉತ್ತಮ ಬಾಂಧವ್ಯ ಇಬ್ಬರೂ ಜೊತೆಯಲ್ಲಿ ಬೆಳೆಯಲು ಸಾಧ್ಯವಾಗಿದೆ. ಇಡೀ ದಕ್ಷಿಣ ಭಾರತ ಸುತ್ತಾಡಿ ಸಂಗೀತ ಕಛೇರಿ ನೀಡುತ್ತಿದ್ದರು.

ಭಾರತ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರ ಜೊತೆ ಇವರು ಕೆಲಸ ಮಾಡಿದ್ದಾರೆ, ಜಿ. ಕೆ. ವೆಂಕಟೇಶ್, ವಿಜಯ ಭಾಸ್ಕರ್, ರಾಜನ್ ನಾಗೇಂದ್ರ, ಹಂಸಲೇಖ, ಎ. ಆರ್ ರೆಹಮಾನ್, ದೇವ, ಕೀರವಾಣಿ, ವಿದ್ಯಾಸಾಗರ್, ವಿಶಾಲ್ ಶೇಖರ್, ರಾಮ್ ಲಕ್ಷ್ಮಣ್ , ಶಂಕರ್ ಗಣೇಶ್ ಇನ್ನೂ ಹಲವಾರು..

ಇವರು ಬಹುಶಃ ಎಲ್ಲಾ ನಟರಿಗೆ ಹಾಡಿದ್ದಾರೆ ಡಾ. ರಾಜ್ ಕುಮಾರ್, ಶಿವರಾಜ್ ಕುಮಾರ್, ಶಶಿಕುಮಾರ್, ಕಮಲ್ ಹಾಸನ್,ರಜಿನಿಕಾಂತ್,ವಿಷ್ಣುವಧ೯ನ್, ಅಂಬರೀಷ್, ಅನಂತ್ ನಾಗ್, ಶಂಕರ್ ನಾಗ್, ಅನಿಲ್ ಕಪೂರ್, ರಮೇಶ್ ಅರವಿಂದ್, ರವಿಚಂದ್ರನ್, ಉಪೇಂದ್ರ, ಸಲ್ಮಾನ್ ಖಾನ್, ಅಜು೯ನ್ ಸಜಾ೯, ಶಾರುಕ್ ಖಾನ್, ರಘುವರನ್, ಪ್ರಭುದೇವ, ಅರವಿಂದ್ ಸ್ವಾಮಿ, ಚಿರಂಜೀವಿ ನಟರ ಹೆಸರು ಪಟ್ಟಿ ಮಾಡಬಹುದು…

ನಮ್ಮ ಕನ್ನಡದಲ್ಲಿ ಹಾಡಿರುವ ಕೆಲವು ಗೀತೆಗಳು “ಆಕಾಶ ದೀಪವು ನೀನು, ನಿನ್ನ ನೀನು ಮರೆತರೇನು ಸುಖವಿದೆ, ನಾ ಹಾಡಲು ನೀವು ಹಾಡಬೇಕು, ಕುಚ್ಚಿಕೂ ಕುಚ್ಚಿಕೂ, ಕುಚ್ಚಿಕೂ, ಈ ಕನ್ನಡ ಮಣ್ಣನು ಮರಿಬೇಡ, ಇದೇ ನೋಡು ಇದೇ ಭಾಷೆ, ಎಂಥ ಸೌಂದರ್ಯ ನೋಡು, ಭಲೆ ಭಲೆ ಚಂದದ ಚಂದುಳ್ಳಿ, ನಿನ್ನ ನಗುವೂ ಹೂವಂತೆ, ಕೆಣಕುತಿದೇ ನಿನ್ನ ಕಣ್ಣೋಟ , ಮಾರಿಕಣ್ಣು ಹೋರಿ ಮ್ಯಾಗೆ ಹೀಗೆ ಹಲವಾರು.

spb
spb

ಭಾರತದ ಹೆಸರಾಂತ ನಿದೇ೯ಶಕರ ಜೊತೆಗೂ ಕೆಲಸ ಮಾಡಿದ್ದಾರೆ, ಮಣಿ ರತ್ನಂ, ಎಸ್ ಎಸ್ ರಾಜಮೌಳಿ, ಎಸ್ ಶಂಕರ್, ಕೆ ಬಾಲಚಂದರ್, ಭಾರತೀರಾಜ್, ಕೆ. ಎಸ್ ರವಿಕುಮಾರ್, ಬಾಲಾ, ಸುನೀಲ್ ಕುಮಾರ್ ದೇಸಾಯಿ, ಭಾಗ೯ವ, ದೊರೆ ಭಗವಾನ್, ಸುಂದರ್ ಸಿ, ಶಂಕರ್ ನಾಗ್, ಪುಟ್ಟಣ್ಣ ಕಣಗಾಲ್ ಹೀಗೆ..

ತಮಿಳಿನಲ್ಲಿ “ವಂದೇಂಡ ಪಾಲ್ಕಾರ, ನಾ ಆಟೋಕಾರ ಆಟೋಕಾರ, ಒರುವನ್ ಒರುವನ್ ಮುದಲಾಳಿ, ಅಯ್ಯಯ್ಯೋ ನೆಂಜು ವಳಯುದಡಿ, ಉನ್ನೈ ಪಾತ೯ ಪಿಂಡ್ರು ನಾಳ್, ಎಂಪೇರು ಪಡೆಯಪ್ಪ, ಮಣ್ಣಿಲಿಂದ ಕಾದಲಂಡ್ರೀ, ಪಾಟ್ಟು ಒಣ್ಣು ತಟ್ಟು ತಟ್ಟು, ವಾ ವೆಣ್ಣಿಲಾ ಉನ್ನೈತಾನೆ ಹೀಗೆ ..

ಹಿಂದಿಯಲ್ಲಿ “ಮೆರೆ ರಂಗು ಮೇ, ತೆರೆ ಮೆರೆ ಬೀಚುಮೆ, ಪೆಹೆಲಾ ಪೆಹೆಲಾ ಪ್ಯಾರ್, ಬಹೊತು ಪ್ಯಾರ್ ಕತೀ೯ ಹೈ, ದೀದಿ ತೇರ ದೇವರ್ ದಿವಾನ ಇನ್ನೂ ಹಲವಾರು..

ಇವರು ನಟಿಸಿದ ಚಿತ್ರಗಳು ನೋಡೋದಾದರೆ ಬಾಳೊಂದು ಚದುರಂಗ, ಪಕ್ಕಿಂಟಿ ಅಮ್ಮಾಯಿ, ತಿರುಗು ಬಾಣ (ಅತಿಥಿ ಪಾತ್ರ), ಕೇಳಡಿ ಕಣ್ಮಣಿ, ಸಿಗರಂ, ಗುಣ, ಭರತನ್, ತಿರುಡ ತಿರುಡ, ಕಾದಲನ್, ಕಾದಲ್ ದೇಶಂ , ಪವಿತ್ರ ಬಂಧಂ,  ಅವ್ವೈ ಶಣ್ಮುಖಿ (ಅತಿಥಿ ಪಾತ್ರ),  ಮಿನ್ಸಾರ ಕಣವು, ಪ್ರಿಯಮಾನವಳೆ, ಮಹಾ ಎಡಬಿಡಂಗಿ, ಮಾಯಾಬಜಾರ್ – ತೆಲುಗು, ಕಲ್ಯಾಣೋತ್ಸವ, ದೇವದಾಸ್ – ತೆಲುಗು ಇನ್ನೂ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಒಬ್ಬ ಲೆಜೆಂಡ್ ಬಗ್ಗೆ ಮಾತಾಡುವಾಗ ಇನ್ನೊಬ್ಬರು ಲೆಜೆಂಡ್ ಕುರಿತು ಹೇಳಬೇಕಾದು “ಮುದ್ದಿನ ಮಾವ “ಚಿತ್ರಕ್ಕೆ 2 ಹಾಡು ಹಾಡಿದವರು ಅಣ್ಣಾವೃ, ನಟನೆ ಮಾತ್ರ ಸೂಪರ್, ದೀಪಾವಳಿ ಮತ್ತು ಕಣ್ಣಪ್ಪ ಕೊಡುವನು ಕಣ್ಣನು ಈ ಹಾಡುಗಳಿಗೆ ಅವರ ನಟನೆ ಶ್ಲಾಘನೀಯ. ಮೊದಲು ಅವರು ಅಣ್ಣಾವ್ರ ಹತ್ತಿರ ಹಾಡಿಸಬೇಕೆಂದಾಗ ಅಣ್ಣಾವೃ ಹೃದಯದಿಂದ ಒಪ್ಪಿಕೊಳ್ತಾರೆ, ನಂತರ ಒಡಹುಟ್ಟಿದವರು ಶಬ್ದವೇಧೀ ಹಾಡುಗಳಲ್ಲಿ ಎಸ್. ಪಿ. ಬಿ ರವರ ಹಾಡುಗಳನ್ನು ನಾವು ಕೇಳಬಹುದು.

ಕಂಠದಾನ ಕಲಾವಿದರಾಗಿ ಗಿರೀಶ್ ಕಾರ್ನಾಡ್, ಸುಮನ್, ಮೋಹನ್ ಲಾಲ್, ನಾಜರ್, ರಜಿನಿಕಾಂತ್, ಕಮಲ್ ಹಾಸನ್, ನಂದಮೂರಿ ಬಾಲಕೃಷ್ಣ ರವರಿಗೆ ಧ್ವನಿ ನೀಡಿದ್ದಾರೆ.

ಇವರ ಮಡದಿ ಹೆಸರು ಸಾವಿತ್ರಿ , ಇಬ್ಬರು ಮಕ್ಕಳು ಎಸ್. ಪಿ. ಚರಣ್ (ಗಾಯಕರು, ನಿಮಾ೯ಪಕರು), ಪಲ್ಲವಿ ಮಗಳು.

ಧಾರಾವಾಹಿಯ ಟೈಟಲ್ ಸಾಂಗ್ ಕೂಡ ಹಾಡಿದ್ದಾರೆ ಕುಂಕುಮ ಭಾಗ್ಯ, ಸೊಂದಮ್, ನಿಮ್ಮದಿ ನಿಮ್ಮದಿ ಉಂಗಳ್ ಚಾಯ್ಸ್, ಸೊಗ೯ಂ,ಟಿವಿ ಶೋನ “ಎದೆ ತುಂಬಿ ಹಾಡುವೆನು ” ಶೀಷಿ೯ಕೆ ಗೀತೆ ಮತ್ತು ಮುಖ್ಯ ತೀಪು೯ಗಾರರಾಗಿ ಮತ್ತು ತೆಲುಗಿನ “ಪಾಡುತ ತೀಯಗ”  ದಲ್ಲಿ ತೀಪು೯ಗಾರರಾಗಿ ನಡೆಸಿಕೊಟ್ಟಿದ್ದಾರೆ, ಎದೆ ತುಂಬಿ ಹಾಡುವೆನು ಯಾವುದೇ ಕಾರಣಕ್ಕೂ ನೋಡಲು ಮರೆಯುತ್ತಿರಲಿಲ್ಲ…

ಇವರ ಈ ಅನನ್ಯ ಸಾಧನೆಯ ಗುರುತಾಗಿ ಹಲವಾರು ಪ್ರಶಸ್ತಿಗಳು ಬಯಸಿ ಬಂದಿವೆ, ಅವುಗಳಲ್ಲಿ ಕೆಲವು…

  • ಭಾರತ ಸರ್ಕಾರದ ವತಿಯಿಂದ ಪದ್ಮಶ್ರೀ ಮತ್ತು ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  • ಶಂಕರಾಭರಣಂ ಚಿತ್ರದ “ಓಂಕಾರ ನಾದನು” ಗೀತೆಗೆ ರಾಷ್ಟ್ರೀಯ ಪ್ರಶಸ್ತಿ.
  • ಎಕ್ ದೂಜೆ ಕೆ ಲಿಯೆ ಚಿತ್ರದ “ತೆರೆ ಮೆರೆ ಬೀಚು ಮೆ” ಹಾಡಿಗೆ ರಾಷ್ಟ್ರ ಪ್ರಶಸ್ತಿ.
  • ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ “ಉಮಂಡು ಘಮಂಡು ” ಹಾಡಿಗೆ ರಾಷ್ಟ್ರೀಯ ಪುರಸ್ಕಾರ.
  • ಮಿನ್ಸಾರ ಕನವು ಚಿತ್ರದ “ತಂಗ ತಾಮರೈ ” ಗೀತೆಗೆ ರಾಷ್ಟ್ರೀಯ ಪ್ರಶಸ್ತಿ.
  • ಮೈನೆ ಪ್ಯಾರ್ ಕಿಯಾ ಚಿತ್ರದ “ದಿಲ್ ದೀವಾನ “ಹಾಡಿಗೆ ಫಿಲಂ ಫೇರ್ ಪ್ರಶಸ್ತಿ.
  • ಜೀವಮಾನ ಸಾಧನೆಗೆ ಫಿಲಂ ಫೇರ್ ಪ್ರಶಸ್ತಿ ದಕ್ಷಿಣ ಭಾಗ.
  • ಅತ್ಯುತ್ತಮ ಹಿನ್ನೆಲೆ ಗಾಯಕ ಎಲ್ಲಾ ಭಾಷೆಯಲ್ಲಿ ಫಿಲಂ ಫೇರ್ ಪ್ರಶಸ್ತಿ.
  • ಆಪ್ತರಕ್ಷಕ ಚಿತ್ರದ “ಘರನೆ ಘರ ಘರನೆ ” ಹಾಡಿಗೆ ಫಿಲಂ ಫೇರ್ ಪ್ರಶಸ್ತಿ.
  • ಸೈಮಾ ಸಂಸ್ಥೆಯಿಂದ ಜೀವಮಾನ ಸಾಧನೆ ಪ್ರಶಸ್ತಿ.
  • ನಂದಿ ಪ್ರಶಸ್ತಿಗಳು ಲಭಿಸಿವೆ.
  • ಎನ್. ಟಿ. ಆರ್ ಪ್ರಶಸ್ತಿ ಕೂಡ ಪಡೆದಿದ್ದಾರೆ.
  • ತಮಿಳುನಾಡು ಸಕಾ೯ರ ನೀಡಿರುವ ಪ್ರಶಸ್ತಿಗಳು.
  • ಕನಾ೯ಟಕ ಸಕಾ೯ರ ಪ್ರಶಸ್ತಿ ಓ ಮಲ್ಲಿಗೆ, ಸೃಷ್ಟಿ, ಸವಿ ಸವಿ ನೆನಪು ಚಿತ್ರಗಳ ಹಿನ್ನೆಲೆ ಗಾಯನಕ್ಕೆ ನೀಡಿವೆ.

ಇವಲ್ಲದೆ ಇನ್ನೂ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಸಕಲಕಲಾವಲ್ಲಭರಿಗೆ ನನ್ನ ನಮನಗಳು 

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply