ಪ್ರಣಯ ನಾಯಕ, ” ಗೋಲ್ಡನ್ ಸ್ಟಾರ್ ಗಣೇಶ್” ಅವರು ಇಂದಿಗೆ 40ನೆ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ನಟ ಗಣೇಶ್ ಅವರಿಗೆ ಮುಂಬರುವ ದಿನಗಳು ಬಹಳ ಅದ್ಧುರಿಯಾಗಿರಲಿದೆ, ಅದಕ್ಕೆ ಕಾರಣ ಅವರ ಬಳಿ ಇರುವ ಸಿನಿಮಾಗಳು ಚಮಕ ಅನ್ನೋ ರೋಮ್ಯಾನ್ಸ್ ಡ್ರಾಮಾ ಸಿನಿಮಾದ ಗೆಲುವಿನ ಬಳಿಕ ಮತ್ತೆ ಸುನಿ ಗಣಿ ಜೋಡಿಯಾಗಿ 2 ಸಿನಿಮಾಗಳನ್ನ ಮಾಡಲಿದ್ದಾರೆ, ಅವುಗಳಿಗೆ “ಸಕ್ಕತ್”,” ದ ಸ್ಟೋರಿ ಆಫ್ ರಾಯ್ಘಡ್” ಅಂತ ನಾಮಕರಣ ಮಾಡಿ ಸೋಶಿಯಲ್ ಮೀಡಿಯಗಳಲ್ಲಿ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದಾರೆ.
ಝೋಮ್, ಆರೆಂಜ್ ನಿರ್ದೇಶಿಸಿದ “ಪ್ರಶಾಂತ್ ರಾಜ್“, ಗಣೇಶ ಗೆ ಮತ್ತೊಂದು ಸಿನಿಮಾ ಮಾಡಿ ಹಾಟ್ ಟ್ರಿಕ್ ಬಾರಿಸಲಿದ್ದಾರೆ. ಜೋತೆಯಲ್ಲೇ ಗುರುಗಳಾದ ಯೋಗರಾಜ್ ಭಟ್ಟರು ನಿರ್ದೇಶನದ ಗಾಳಿಪಟ 2 ಕೊಡ ಸಿದ್ಧವಾಗ್ತಾ ಇದೆ.
ಪತ್ನಿ ಶಿಲ್ಪ ಗಣೇಶ್ ಹಾಗೂ ಮಕ್ಕಳು ಅಪ್ಪನ ಕೈಯಲ್ಲಿ ಕೇಕೆ ಕಟ್ ಮಾಡಿಸುವ ಮೂಲಕ,ಮನೆಯಲ್ಲೇ ಹುಟ್ಟಿದ ಹಬ್ಬ ಆಚರಿಸಿಕೊಂಡ್ರು ಗೋಳ್ಡೆನ್ ಸ್ಟಾರ್ ಗಣೇಶ..