ಗಮ್ಯ ಅದಮ್ಯ

vijayanand

V.R.L( ವಿಜಯಾನಂದ ರೋಡ್ ಲೈನ್ಸ್) ಸಂಸ್ಥೆಯ ಹೆಸರನ್ನ ಯಾರು ತಾನೆ ಕೇಳಿಲ್ಲ! ಈ ಸ್ಸಂಸ್ಥೆಯ ಹಲವು ಸೇವೆಗಳನ್ನ ಉಪಯುಕ್ತ ಪಡಿಸಿಕೊಳ್ಳುವುದರ ಜೊತೆಗೆ ಇವರ ಬಸ್ಸುಗಳಲ್ಲಿ ಪ್ರಯಾಣಿಸದಿರುವವರು ಬಹುಶಹ ಕರ್ನಾಟಕದಲ್ಲೆ ಯಾರು ಇಲ್ಲಾ! ಯಶಸ್ಸಿನ ಕೋಟೆಗೆ ಅನ್ವರ್ಥನಾಮವಾಗಿರುವ VRL ಸಾಮ್ರಾಜ್ಯದ ಸಂಸ್ಥಾಪಕರು, ಮಾಲೀಕರು ಆಗಿರುವಂತ “ಡಾ. ವಿಜಯ ಸಂಕೇಶ್ವರ” ಅವರು ನಡೆದು ಬಂದ ಹಾದಿ, ಹಾದಿಯಲ್ಲಿ ಇಟ್ಟ ದಿಟ್ಟ ಹೆಜ್ಜೆಗಳು ಅದರ ಗುರುತುಗಳು ಈಗ ಸಿನಿಮಾ ರೂಪದಲ್ಲಿ ಹೊರಬರಲಿದೆ, ” ವಿಜಯಾನಂದ”. ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ, ಸಮಾಜಮುಖಿಯಾಗಿ ಹಲವರ ಬದುಕಿಗೆ ನೆರವು-ನೆರಳಾಗುವಂತೆ ಕಟ್ಟಿಕೊಂಡು ಇವರ ಜೇವನದ “ಗಮ್ಯ ನಿಜಕ್ಕೂ ಅದಮ್ಯ”. ಮನೋರಂಜನೆ ಅನ್ನೋದಕ್ಕಿಂತ ಮನಸ್ಸಿಗೆ ಚೇತನ ಭರಿಸುವ ಪ್ರಯತ್ನ ಈ ಸಿನಿಮಾ ಮಾಡಲಿದೆ, ” ಸಾಮಾನ್ಯನು ಸನ್ಮಾನ್ಯದ ಕಥೆಯಿದು. ಏರ್ ಡೆಕ್ಕನ್ ವಿಮಾನ ಸಂಸ್ಥೆಯ ಸ್ಥಾಪಕರು, ನಮ್ಮ ಕನ್ನಡದವರೆಯಾದ ಕ್ಯಾಪ್ಟನ್ ಗೋಪಿನಾಥರ ಜೇವನಚರಿತ್ರೆ ಆಧರಿಸಿದ ಸಿನಿಮಾ ತಮಿಳಿನಲ್ಲಿ ” ಸೂರರೈ ಪೊಟ್ರು” ಅಂತ ಬಂದಿದ್ದು, ಎಲ್ಲರ ಪ್ರೀತಿ ಪ್ರಶಂಸೆಯ ಕೇಂದ್ರ ಬಿಂದುವಾಯ್ತು.. “ವಿಜಯಾನಂದ” ಕೂಡ ಅಂತದ್ದೇ ಒಂದಾಗಲಿ.

“ಹೊಸಬರ ತಂಡ ಹುರುಪು ಅಖಂಡ”!

ನಿಹಾಲ ಎನ್ನುವ ನವ ಕಲಾವಿದ ವಿಜಯ ಸಂಕೇಶ್ವರರಾಗಿ ಕಾಣಲಿದ್ದು, ಯುವ ನಿರ್ದೇಶಕಿ “ರಿಷಿಕಾ ಶರ್ಮ” ನಿರ್ದೇಶನದ ಹೊಣೆಗಾರಿಕೆಯನ್ನ ನಿಭಾಯಿಸುತ್ತ ವಿಜಯ್ ಸಂಕೇಶ್ವರ ಜೇವನದ ಪುಟಗಳನ್ನ ಭಾವಭರಿತವಾಗಿ ಪರಿಚಯಿಸಲಿದ್ದಾರೆ. ರಘು ನೀಡುವಳ್ಳಿ ಸಂಭಾಷಣೆ ಬರಿಯಲ್ಲಿದ್ದು, ಗೋಪಿ ಸುಂದರ್ ಸಂಗೀತ ಸಂಯೋಜಕರಾಗಿದ್ದರೆ.

ಗಿರಿ ಪರ್ವತದಂತೆ ಇರುವ ಬದುಕನ್ನ ಒಂದು ಸುಂದರ ಪರ್ವವಾಗಿಸುವ ಸುಯಜ್ಞಕ್ಕೆ ಕೈ ಜೋಡಿಸಿದೆ ಈ ಹೊಸಬರ ತಂಡ….

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply