ಯಾರಿಗೆ ಸಾಲುತ್ತೆ ಸಂಬಳ ಚಿತ್ರದಲ್ಲಿ ಉಮಾಶ್ರೀ ನಟಿಯ ಜೊತೆ ಕಾಮಿಡಿ ಸೇರಿ ಗಂಡ ಹೆಂಡತಿ ಜಗಳವಾಡೋ ದೃಶ್ಯ ಎಲ್ಲರೂ ನೋಡಿತಾ೯ರೆ, ಆ ದೃಶ್ಯದಲ್ಲಿ ಅಧ್ಬುತ ನಟನೆ ಮಾಡಿ ಪ್ರೇಕ್ಷಕರನ್ನು ನಕ್ಕು ನಗಿಸಿದ ಹಾಸ್ಯ ಕಲಾವಿದರು ಕರಿಬಸವಯ್ಯ ರವರು.
ನೋಡೋಕೆ ಕಪ್ಪಗಿದ್ದರೂ ಅವರ ನಟನೆಯ ಪಾತ್ರ ಅಪಾರ, ಬಹುಶಃ ಕಪ್ಪಿಗಿದ್ದಕ್ಕೆ ಅವರಿಗೆ ಕರಿಬಸವಯ್ಯ ಅಂತ ಹೆಸರಿಟ್ಟಿರಬೇಕು. ಇವರು ಹುಟ್ಟಿದ್ದು 1959 ರಲ್ಲಿ ಕೊಡಿಗೇಹಳ್ಳಿ, ತ್ಯಾಮಗೊಂಡ್ಲು ಹೋಬಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಮೂಲತಃ ಕುರುಬ ಗೌಡ ಕುಟುಂಬ.
ಚಿಕ್ಕ ಮಗುವಿನಿಂದ ಕಂಸಾಳೆ, ಡೊಳ್ಳು ಕುಣಿತ ಹಾಗೂ ಹರಿಕಥೆ ಕಲಿತರು, ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಶೇಷಾದ್ರಿಪುರಂ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದರು, ದೊಡ್ಡಮನೆ ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನೆ ಪ್ರಾರಂಭಿಸಿದರು,
ಖ್ಯಾತ ನಿದೇ೯ಶಕರಾದ ನಾಗತಿಹಳ್ಳಿ ಚಂದ್ರಶೇಖರ್ ರವರು ಇವರನ್ನು ಚಿತ್ರರಂಗಕ್ಕೆ “ಉಂಡುಹೋದ ಕೊಂಡುಹೋದ ” ಚಿತ್ರದಲ್ಲಿ ಅವಕಾಶ ನೀಡಿ ಪರಿಚಯಿಸಿದರು.
ಇದುವರೆಗೂ ಸರಿಸುಮಾರು 120 ಚಿತ್ರಗಳಲ್ಲಿ ಹಾಸ್ಯ ನಟರಾಗಿ ನಮ್ಮನ್ನೆಲ್ಲ ರಂಜಿಸಿದ್ದಾರೆ.
ಇವರ ನಟನೆ ನೋಡುಗರಿಗೆ ತುಂಬಾ ನಗು ತರಿಸಿದೆ ಕೆಲವು ಚಿತ್ರಗಳು ಯಾರಿಗೆ ಸಾಲುತ್ತೆ ಸಂಬಳ, ಮುಂಗಾರಿನ ಮಿಂಚು, ಉಲ್ಟಾ ಪಲ್ಟ, ಗಲಾಟೆ ಅಳಿಯಂದಿರು .
ಇವರು ನಟಿಸಿದ ಚಿತ್ರಗಳು ಹೆಸರಿಸುವುದಾದರೆ ಜನುಮದ ಜೋಡಿಯ ಕುಂಟ ಪಾತ್ರ, ಕೊಟ್ರೇಶಿ ಕನಸು, ಮತದಾನ, ದುಗಿ೯,ಮ್ಯಾಜಿಕ್ ಅಜ್ಜಿ, ಮೂಖ೯, ರವಿಶಾಸ್ತ್ರಿ, ಪೋಲಿಸ್ ಸ್ಟೋರಿ 2, ಜನಪದ, ರೈಟ್ ಆದ್ರೆ, ಅರಮನೆ, ತಾಯಿ, ಪರಿಚಯ, ಕ್ರೇಜಿ ಕುಟುಂಬ, ಐತಲಕಡಿ, ಉಲ್ಲಾಸ ಉತ್ಸಾಹ, ಪ್ರೀತಿ ನೀ ಹೀಗೇಕೆ, ಹೋಳಿ, ನೂರು ಜನ್ಮಕೂ, 5ಇಡಿಯಟ್ಸ್ , ಬ್ರೇಕಿಂಗ್ ನ್ಯೂಸ್, ಸಂಗೊಳ್ಳಿ ರಾಯಣ್ಣ, ಬೆಳಕಿನೆಡೆಗೆ ಇನ್ನೂ ಹಲವಾರು ಚಿತ್ರಗಳಲ್ಲಿ ಅಭಿನಯ ನೀಡಿದ್ದಾರೆ, ನಟನೆಯ ಜೊತೆಗೆ ಇವರು ಕಲಿತ ಜಾನಪದ ಕಲೆ, ಮಾತನಾಡುವ ಶೈಲಿ, ಹಾಡುಗಾರಿಕೆ, ಗ್ರಾಮೀಣ ಸೊಗಡಿನ ಭಾಷೆ ಇವರಿಗೆ ಚಿತ್ರಗಳಲ್ಲಿ ಅಭಿನಯಿಸಲು ಸಾಧ್ಯವಾಯಿತು ಎಂಬುದು ನನ್ನ ಅಭಿಪ್ರಾಯ.
ಇವರ ಮತ್ತು ನಟಿ ಉಮಾಶ್ರೀ ಜೋಡಿ ತೆರೆಯ ಮೇಲೆ ಜನಪ್ರಿಯ ಜೋಡಿ ಎಂದು ಹೆಸರಾಗಿತ್ತು .
ಟಿ ಎಸ್ ನಾಗಾಭರಣ, ಎಸ ನಾರಾಯಣ್, ರಾಜೇಂದ್ರ ಸಿಂಗ್ ಬಾಬು, ಎಂ ಎಸ್ ರಾಜಶೇಖರ್, ದಿನೇಶ್ ಬಾಬು, ಥ್ರಿಲ್ಲರ್ ಮಂಜು, ನಾಗಶೇಖರ್, ಬರಗೂರು ರಾಮಚಂದ್ರಪ್ಪ, ಜೆ ಜಿ ಕೃಷ್ಣ, ಆನಂದ್, ನಾಗಣ್ಣ ನಿದೇ೯ಶಕರ ಚಿತ್ರಗಳಲ್ಲಿ ನಟನೆಯ ಕೈ ಚಳಕ ತೋರಿಸಿದ್ದಾರೆ.
ಇವರಿಗೆ ಒಬ್ಬ ತಮ್ಮ, ಮಡದಿ ಹೆಸರು ಶಾಂತ ಮಗಳು ರಾಧ ಆದರೆ ಅವರ ಮಗಳು ಅನಿವಾರ್ಯ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಾಗ ತುಂಬಾ ಖಿನ್ನತೆಗೆ ಒಳಗಾದರು.
ತಾನೊಂದು ಬಗೆದರೆ ವಿಧಿಯೊಂದು ಬರೆದಂತೆ ಅನ್ನೋ ಹಾಗೆ ಜನವರಿ 31, 2012 ರಂದು ಬ್ರೇಕಿಂಗ್ ನ್ಯೂಸ್ ಚಿತ್ರೀಕರಣ ಮುಗಿಸಿಕೊಂಡು ಬರುವಾಗ ರಸ್ತೆ ಅಪಘಾತದಲ್ಲಿ ತುಂಬಾ ಏಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಎಷ್ಟು ಹೋರಾಡಿದರೂ ಜೀವ ಉಳಿಯದೆ ಅಸುನೀಗಿದರು.
ಅಂದಿನ ದಿನ ಅವರ ಸರಸ್ಶತಿಪುರಂ ನಿವಾಸಕ್ಕೆ ಪಾಥೀ೯ವ ಶರೀರ ತಂದಾಗ ನಾನೂ ಕೂಡ ಹೋಗಿ ಅಂತಿಮ ದರ್ಶನ ಮಾಡಿ ಬಂದೆ.
ಇವರ ಆಸ್ಪತ್ರೆಯ ಖಚು೯ ವೆಚ್ಚಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ರವರ ಸಂಘದಿಂದ ಭರಿಸಿದರು, ನಟನೆಗೆ ಪರಿಚಯಿಸಿದವರು ಕೊನೆ ಕಾಲದಲ್ಲಿ ಕೈ ಬಿಡದೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
ಇಂಥ ಅಮೋಘ ಪ್ರತಿಭೆ ನಮ್ಮ ಕಣ್ಣ ಮುಂದಿಲ್ಲ ಆದರೆ ಇವರು ನಟಿಸಿದ ಪಾತ್ರಗಳು ಎಂದಿಗೂ ಜೀವಂತ.
ಪಾತ್ರ ಮಾಡುವುದಕ್ಕೆ ಬಣ್ಣ ಬೇಕಿಲ್ಲ ನಟಿಸುವ ಗುಣ ಮತ್ತು ಛಲವಿದ್ದರೆ ಸಾಕು ಎಂದು ತೋರಿಸಿಕೊಟ್ಟ ಕಲಾವಿದರಿಗೆ ನಮ್ಮ ನಮನಗಳು, ಮತ್ತೊಮ್ಮೆ ಹುಟ್ಟಿ ಬರಲಿ 🙏