ಭಾರತದ ಹೆಸರಾಂತ ನಿದೇ೯ಶಕರ ಜೊತೆಗೂ ಕೆಲಸ ಮಾಡಿದ್ದಾರೆ, ಮಣಿ ರತ್ನಂ, ಎಸ್ ಎಸ್ ರಾಜಮೌಳಿ, ಎಸ್ ಶಂಕರ್, ಕೆ ಬಾಲಚಂದರ್, ಭಾರತೀರಾಜ್, ಕೆ. ಎಸ್ ರವಿಕುಮಾರ್, ಬಾಲಾ, ಸುನೀಲ್ ಕುಮಾರ್ ದೇಸಾಯಿ, ಭಾಗ೯ವ, ದೊರೆ ಭಗವಾನ್, ಸುಂದರ್ ಸಿ, ಶಂಕರ್ ನಾಗ್, ಪುಟ್ಟಣ್ಣ ಕಣಗಾಲ್ ಹೀಗೆ..
ತಮಿಳಿನಲ್ಲಿ “ವಂದೇಂಡ ಪಾಲ್ಕಾರ, ನಾ ಆಟೋಕಾರ ಆಟೋಕಾರ, ಒರುವನ್ ಒರುವನ್ ಮುದಲಾಳಿ, ಅಯ್ಯಯ್ಯೋ ನೆಂಜು ವಳಯುದಡಿ, ಉನ್ನೈ ಪಾತ೯ ಪಿಂಡ್ರು ನಾಳ್, ಎಂಪೇರು ಪಡೆಯಪ್ಪ, ಮಣ್ಣಿಲಿಂದ ಕಾದಲಂಡ್ರೀ, ಪಾಟ್ಟು ಒಣ್ಣು ತಟ್ಟು ತಟ್ಟು, ವಾ ವೆಣ್ಣಿಲಾ ಉನ್ನೈತಾನೆ ಹೀಗೆ ..
ಹಿಂದಿಯಲ್ಲಿ “ಮೆರೆ ರಂಗು ಮೇ, ತೆರೆ ಮೆರೆ ಬೀಚುಮೆ, ಪೆಹೆಲಾ ಪೆಹೆಲಾ ಪ್ಯಾರ್, ಬಹೊತು ಪ್ಯಾರ್ ಕತೀ೯ ಹೈ, ದೀದಿ ತೇರ ದೇವರ್ ದಿವಾನ ಇನ್ನೂ ಹಲವಾರು..
ಇವರು ನಟಿಸಿದ ಚಿತ್ರಗಳು ನೋಡೋದಾದರೆ ಬಾಳೊಂದು ಚದುರಂಗ, ಪಕ್ಕಿಂಟಿ ಅಮ್ಮಾಯಿ, ತಿರುಗು ಬಾಣ (ಅತಿಥಿ ಪಾತ್ರ), ಕೇಳಡಿ ಕಣ್ಮಣಿ, ಸಿಗರಂ, ಗುಣ, ಭರತನ್, ತಿರುಡ ತಿರುಡ, ಕಾದಲನ್, ಕಾದಲ್ ದೇಶಂ , ಪವಿತ್ರ ಬಂಧಂ, ಅವ್ವೈ ಶಣ್ಮುಖಿ (ಅತಿಥಿ ಪಾತ್ರ), ಮಿನ್ಸಾರ ಕಣವು, ಪ್ರಿಯಮಾನವಳೆ, ಮಹಾ ಎಡಬಿಡಂಗಿ, ಮಾಯಾಬಜಾರ್ – ತೆಲುಗು, ಕಲ್ಯಾಣೋತ್ಸವ, ದೇವದಾಸ್ – ತೆಲುಗು ಇನ್ನೂ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಒಬ್ಬ ಲೆಜೆಂಡ್ ಬಗ್ಗೆ ಮಾತಾಡುವಾಗ ಇನ್ನೊಬ್ಬರು ಲೆಜೆಂಡ್ ಕುರಿತು ಹೇಳಬೇಕಾದು “ಮುದ್ದಿನ ಮಾವ “ಚಿತ್ರಕ್ಕೆ 2 ಹಾಡು ಹಾಡಿದವರು ಅಣ್ಣಾವೃ, ನಟನೆ ಮಾತ್ರ ಸೂಪರ್, ದೀಪಾವಳಿ ಮತ್ತು ಕಣ್ಣಪ್ಪ ಕೊಡುವನು ಕಣ್ಣನು ಈ ಹಾಡುಗಳಿಗೆ ಅವರ ನಟನೆ ಶ್ಲಾಘನೀಯ. ಮೊದಲು ಅವರು ಅಣ್ಣಾವ್ರ ಹತ್ತಿರ ಹಾಡಿಸಬೇಕೆಂದಾಗ ಅಣ್ಣಾವೃ ಹೃದಯದಿಂದ ಒಪ್ಪಿಕೊಳ್ತಾರೆ, ನಂತರ ಒಡಹುಟ್ಟಿದವರು ಶಬ್ದವೇಧೀ ಹಾಡುಗಳಲ್ಲಿ ಎಸ್. ಪಿ. ಬಿ ರವರ ಹಾಡುಗಳನ್ನು ನಾವು ಕೇಳಬಹುದು.
ಕಂಠದಾನ ಕಲಾವಿದರಾಗಿ ಗಿರೀಶ್ ಕಾರ್ನಾಡ್, ಸುಮನ್, ಮೋಹನ್ ಲಾಲ್, ನಾಜರ್, ರಜಿನಿಕಾಂತ್, ಕಮಲ್ ಹಾಸನ್, ನಂದಮೂರಿ ಬಾಲಕೃಷ್ಣ ರವರಿಗೆ ಧ್ವನಿ ನೀಡಿದ್ದಾರೆ.
ಇವರ ಮಡದಿ ಹೆಸರು ಸಾವಿತ್ರಿ , ಇಬ್ಬರು ಮಕ್ಕಳು ಎಸ್. ಪಿ. ಚರಣ್ (ಗಾಯಕರು, ನಿಮಾ೯ಪಕರು), ಪಲ್ಲವಿ ಮಗಳು.