1974 ರಲ್ಲಿ ಭಕ್ತಿಪ್ರಧಾನ ಚಿತ್ರ ಒಂದು ಬಿಡುಗಡೆಯಾದಾಗ ಆ ಚಿತ್ರದಲ್ಲಿ ನಟಸಾವ೯ಭೌಮ ಡಾ. ರಾಜ್ ಕುಮಾರ್ ರವರು, ಸರೋಜಾದೇವಿ, ಮಂಜುಳ ರವರು ಮುಖ್ಯ ಭೂಮಿಕೆಯಲ್ಲಿ, ಚಿತ್ರ ಭಜ೯ರಿ ಯಶಸ್ಸು ಕಾಣುತ್ತೆ ಆದರೆ ಆ ಚಿತ್ರದಲ್ಲಿ ಒಂದು ಜೋಗುಳ ಗೀತೆ ಭಕ್ತಿ ಗೀತೆ ಅದೂ ಶ್ರೀನಿವಾಸ ದೇವರನ್ನು ಕುರಿತು “ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ” ಈ ಹಾಡು ಹಾಡಿದವರು ಬೇರಾರೂ ಅಲ್ಲ ಹೊಸ ಗಾಯಕರಾಗಿ ಪರಿಚಯರಾದ “ಶ್ರೀ. ಎಸ್. ಪಿ. ಬಾಲಸುಬ್ರಹ್ಮಣ್ಯಂ ” (ಶ್ರೀಪತಿ ಪಂಡಿತಾರಾಧ್ಯ ಬಾಲಸುಬ್ರಹ್ಮಣ್ಯಂ) ಇಂದು ಇವರ ಜನುಮ ದಿನ. ಅವರಿಗೆ ಮೊದಲು ಶುಭಾಶಯಗಳು 🌹💜🌺
ಇವರು ಗಾಯಕರಾಗಿ, ಸಂಗೀತ ನಿದೇ೯ಶಕರಾಗಿ, ನಟರಾಗಿ, ಧ್ವನಿ ನೀಡುವ ಕಲಾವಿದರಾಗಿ, ಚಿತ್ರ ನಿಮಾ೯ಪಕರಾಗಿ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸೇವೆ ಮಾಡುತ್ತಿದ್ದಾರೆ , ಹತ್ತಿರ 16 ಭಾಷೆಗಳಲ್ಲಿ 40000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಇವರು ಮಾಡಿರುವ ಸಾಧನೆ ಅಷ್ಟಿಷ್ಟಲ್ಲ 21 ಹಾಡುಗಳು ಉಪೇಂದ್ರ ಕುಮಾರ್ ರವರ ಸಂಗೀತ ನಿದೇ೯ಶನದಲ್ಲೀ ಬೆಳಿಗ್ಗೆ 9 ರಿಂದ ಸಂಜೆ 9 ತನಕ ಕನ್ನಡ ಹಾಡು ಅದೂ ಬೆಂಗಳೂರಿನಲ್ಲಿ ಹಾಡಿರೋದು, ತಮಿಳು 19 ಮತ್ತು ಹಿಂದಿ 16 ಹಾಡಿ ಸಾವ೯ಕಾಲಿಕ ದಾಖಲೆ ಮಾಡಿದ್ದಾರೆ.
ಇವರು ಮೊದಲು ಹಾಡಿರೋ ಗೀತೆ ನಕ್ಕರೆ ಅದೇ ಸ್ವಗ೯ ಚಿತ್ರದಲ್ಲಿ ನರಸಿಂಹರಾಜ್ ರವರ ನಟನೆ. ಇವರು ಎಂ. ಎಸ್ ವಿಶ್ವನಾಥನ್ ರವರು ನಿದೇ೯ಶಿಸಿದ ನಟರುಗಳಾದ ಎಂ. ಜಿ. ಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ರವರಿಗೆ ಹಾಡಿದ್ದಾರೆ .ಯುಗಳ ಗೀತೆಗಳನ್ನು ಎಸ್. ಜಾನಕಿ, ಪಿ. ಸುಶೀಲ, ವಾಣಿ ಜಯರಾಂ ಮತ್ತು ಎಲ್ ಆರ್ ಈಶ್ವರಿ ಜೊತೆ ಹಾಡಿದ್ದಾರೆ, ಸಂಗೀತ ನಿರ್ದೇಶಕರು ಇಳಿಯರಾಜರಿಗೆ ಇವರ ಉತ್ತಮ ಬಾಂಧವ್ಯ ಇಬ್ಬರೂ ಜೊತೆಯಲ್ಲಿ ಬೆಳೆಯಲು ಸಾಧ್ಯವಾಗಿದೆ. ಇಡೀ ದಕ್ಷಿಣ ಭಾರತ ಸುತ್ತಾಡಿ ಸಂಗೀತ ಕಛೇರಿ ನೀಡುತ್ತಿದ್ದರು.
ಭಾರತ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರ ಜೊತೆ ಇವರು ಕೆಲಸ ಮಾಡಿದ್ದಾರೆ, ಜಿ. ಕೆ. ವೆಂಕಟೇಶ್, ವಿಜಯ ಭಾಸ್ಕರ್, ರಾಜನ್ ನಾಗೇಂದ್ರ, ಹಂಸಲೇಖ, ಎ. ಆರ್ ರೆಹಮಾನ್, ದೇವ, ಕೀರವಾಣಿ, ವಿದ್ಯಾಸಾಗರ್, ವಿಶಾಲ್ ಶೇಖರ್, ರಾಮ್ ಲಕ್ಷ್ಮಣ್ , ಶಂಕರ್ ಗಣೇಶ್ ಇನ್ನೂ ಹಲವಾರು..
ಇವರು ಬಹುಶಃ ಎಲ್ಲಾ ನಟರಿಗೆ ಹಾಡಿದ್ದಾರೆ ಡಾ. ರಾಜ್ ಕುಮಾರ್, ಶಿವರಾಜ್ ಕುಮಾರ್, ಶಶಿಕುಮಾರ್, ಕಮಲ್ ಹಾಸನ್,ರಜಿನಿಕಾಂತ್,ವಿಷ್ಣುವಧ೯ನ್, ಅಂಬರೀಷ್, ಅನಂತ್ ನಾಗ್, ಶಂಕರ್ ನಾಗ್, ಅನಿಲ್ ಕಪೂರ್, ರಮೇಶ್ ಅರವಿಂದ್, ರವಿಚಂದ್ರನ್, ಉಪೇಂದ್ರ, ಸಲ್ಮಾನ್ ಖಾನ್, ಅಜು೯ನ್ ಸಜಾ೯, ಶಾರುಕ್ ಖಾನ್, ರಘುವರನ್, ಪ್ರಭುದೇವ, ಅರವಿಂದ್ ಸ್ವಾಮಿ, ಚಿರಂಜೀವಿ ನಟರ ಹೆಸರು ಪಟ್ಟಿ ಮಾಡಬಹುದು…
ನಮ್ಮ ಕನ್ನಡದಲ್ಲಿ ಹಾಡಿರುವ ಕೆಲವು ಗೀತೆಗಳು “ಆಕಾಶ ದೀಪವು ನೀನು, ನಿನ್ನ ನೀನು ಮರೆತರೇನು ಸುಖವಿದೆ, ನಾ ಹಾಡಲು ನೀವು ಹಾಡಬೇಕು, ಕುಚ್ಚಿಕೂ ಕುಚ್ಚಿಕೂ, ಕುಚ್ಚಿಕೂ, ಈ ಕನ್ನಡ ಮಣ್ಣನು ಮರಿಬೇಡ, ಇದೇ ನೋಡು ಇದೇ ಭಾಷೆ, ಎಂಥ ಸೌಂದರ್ಯ ನೋಡು, ಭಲೆ ಭಲೆ ಚಂದದ ಚಂದುಳ್ಳಿ, ನಿನ್ನ ನಗುವೂ ಹೂವಂತೆ, ಕೆಣಕುತಿದೇ ನಿನ್ನ ಕಣ್ಣೋಟ , ಮಾರಿಕಣ್ಣು ಹೋರಿ ಮ್ಯಾಗೆ ಹೀಗೆ ಹಲವಾರು.
ಮುಂದುವರಿಯುವುದು
ಆತ್ಮೀಯ ಮಿತ್ರರೇ ಶ್ರೀನಿವಾಸ್ ಅವರಿಗೆ ಧನ್ಯವಾದಗಳು ನಮಸ್ಕಾರ ಇಂದಿನ ತಮ್ಮ ಲೇಖನದ ಕೇಂದ್ರ ಬಿಂದು ಭಾರತೀಯ ಹಾಗೂ ದಕ್ಷಿಣ ಭಾರತೀಯ ಚಿತ್ರ ರಂಗದ ಖ್ಯಾತ ಹಿನ್ನಲೆ ಗಾಯಕರು ಡಾಕ್ಟರ್ ಎಸ್ ಪಿ ಬಾಲು ಸುಬ್ರಹ್ಮಣ್ಯಮ್ ಅವರ ಹುಟ್ಟುಹಬ್ಬದ ಒಲವಿನ ಉಡುಗೊರೆ ಸಂಚಿಕೆ ಅಮೋಘ ವಿಶ್ವ ಡಾಕ್ಟರ್ ರಾಜಕುಮಾರ್ ಅಭಿಮಾನಿ ದೇವರು ಕಡೆಗೆ ಬಾಲು ಸರ್ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಮಿತ್ರರೇ ತಮ್ಮ ಲೇಖನ ಅತ್ಯುತ್ತಮ ಅದ್ಭುತ ನಿಜಕ್ಕೂ ಒಬ್ಬ ಒಳ್ಳೆಯ ಶ್ರೇಷ್ಠ ಲೇಖಕರು ಕನ್ನಡ ಸಾಹಿತ್ಯ ಲೋಕಕ್ಕೆ ಸಿಕ್ಕಿದಂತೆ ಆಯಿತು ತಮ್ಮ ಬರವಣಿಗೆ ಶೈಲಿ ಅದ್ಭುತ ಶ್ರೀನಿವಾಸ್ ಆವರೇ ತಮ್ಮ ಕಾಯಕ ಮುಂದುವರಿಯಲಿ ಇಂತಹ ಅದ್ಭುತ ಲೇಖನ ಕೊಟ್ಟ ತಮಗೆ ಕೋಟಿ ಧನ್ಯವಾದಗಳು ಅದರಲ್ಲೂ ಅಪ್ಪಾಜಿ ದೇವರು ರಾಜಕುಮಾರ್ ಅವರ ಬಗ್ಗೆ ಹೆಚ್ಚಿನ ಒಲವು ಪ್ರೀತಿ ಮಮತೆ ಶ್ರದ್ದೆ ಭಕ್ತಿ ಗೌರವ ಶ್ರೀ ಎಸ್ ಪಿ ಬಾಲು ಸುಬ್ರಮಣ್ಯಮ್ ಅವರಿಗೆ ಸರ್