ಗಾನಗಾರುಡಿಗ ಡಾ ಸಿ ಅಶ್ವಥ್‌ ನೆನಪು 🌹

C Ashwath

ಸುಗಮ ಸಂಗೀತ, ಜಾನಪದ ಗೀತೆ, ಭಾವಗೀತೆ ಮತ್ತು ಚಲನಚಿತ್ರ ಗೀತೆಗಳನ್ನು ತಮ್ಮ ಕಂಚಿನ ಕಂಠದ ಮೂಲಕ ಸುಶ್ರಾವ್ಯವಾಗಿ ಹಾಡಿ ಅಭಿಮಾನಿಗಳ ಪ್ರೀತಿಯನ್ನು ಸಂಪಾಜಿಸಿರುವ ನಮ್ಮ ಕನ್ನಡ ನಾಡಿನ ಹೆಮ್ಮೆಯ ಗಾಯಕರಾದ ಡಾ. ಶ್ರೀ. ಸಿ. ಅಶ್ವಥ್ ರವರಿಗೆ ನೆನ್ನೆ (29.12.2019) ಜನುಮ ದಿನದ ಜಯಂತಿಯ ನಮನಗಳು 🙏

ಹುಟ್ಟಿದ ದಿನದ ದಿನಾಂಕದಂದೇ ಸ್ವಗ೯ವಾಸಿಯಾಗುವುದಕ್ಕೆ ಪುಣ್ಯ ಮಾಡಿರಬೇಕು, ಈ ಒಂದು ಭಾಗ್ಯ ಎಷ್ಟು ಜನರಿಗೆ ಸಿಗುತ್ತೆ ಹೇಳಿ ನೀವೇ….

ಇವರು ಮಹಾನ್ ಚೇತನ ಮತ್ತು ಸಾಹಿತಿಗಳಾದ ಶ್ರೀ. ಕುವೆಂಪು, ಕೆ. ಎಸ್. ನರಸಿಂಹ ಸ್ವಾಮಿ, ಹೆಚ್. ಎಸ್. ವೆಂಕಟೇಶ್ ಮೂತಿ೯, ದ. ರಾ. ಬೇಂದ್ರೆ, ಜಿ. ಎಸ್. ಶಿವರುದ್ರಪ್ಪ ಮುಂತಾದವರು ರಚಿಸಿದ ಕವನಗಳನ್ನು ತಮ್ಮ ಅಧ್ಬುತ ರಾಗ ಸಂಯೋಜನೆ ಮಾಡಿ ತಾವು ಹಾಡುತ್ತಿದ್ದರು, ಇವರ ಕೆಲವು ಹಾಡುಗಳನ್ನು ಎಂದಿಗೂ ಮರೆಯಲಾಗದು, ಶುರು ಮಾಡುವ ಮೊದಲಿನಿಂದ ಕೊನೆಯ ಭಾಗದಲ್ಲಿ ಅವರು ಹಾಡುವ ಚಾಕಚಕ್ಯತೆ ಮೆಚ್ಚಲೇಬೇಕು.

❤ಇವರಿಗೂ ಮತ್ತು ನಮ್ಮ ಕರುನಾಡ ಕಲಾ ಪುತ್ರ ಡಾ. ರಾಜ್ ಕುಮಾರ್ ರವರಿಗೂ ಗಾಯನ ಕ್ಷೇತ್ರದಲ್ಲಿ ಅವಿನಾಭಾವ ಸಂಬಂಧ,‌ ಇವರು ಸಂಗೀತ ನಿದೇ೯ಶಿಸಿದ ಆಯ್ದ ಕನ್ನಡ ಭಾವಗೀತೆಗಳ ಸಂಗ್ರಹ “ಕನ್ನಡವೇ ಸತ್ಯ ” ಯಾವುದೇ ಕನ್ನಡ ಕಾಯ೯ಕ್ರಮದಲ್ಲಿ “ಎಲ್ಲಾದರೂ ಇರು ಎಂತಾದರೂ ಇರು ” ಹಾಡು ಕೇಳುತ್ತೇವೆ, ಈ ಹಾಡಿನ ಸಂಗೀತ ನಿರ್ದೇಶಕರು ಇವರೆ, ಇದಲ್ಲದೆ ಅಣ್ಣಾವ್ರ ಗಾಯನದಲ್ಲಿ ಮೂಡಿ ಬಂದ “ಹೊತ್ತಿತೋ ಹೊತ್ತಿತೂ ಕನ್ನಡದ ದೀಪ, ಸಂಜೆಗೆನ್ನ ಪಯಣವೆಂದು, ಅಮೃತವಾಹಿನಿಯೊಂದು ಹರಿಯುತಿದೆ ಮಾನವನ, ಲಘುವಾಗೆಲೆ ಮನ ” ಹಾಡುಗಳು ಎಷ್ಟು ಕೇಳಿದರೂ ಸಾಲದು❤.

ಡಾ. ರಾಜ್ ಕುಮಾರ್ ರವರ ಕಾಮನಬಿಲ್ಲು ಚಿತ್ರದ ರೈತರ ಕುರಿತಾದ “ಉಳುವಾ ಯೋಗಿಯ ನೋಡಲ್ಲಿ ” ಗೀತೆಗೆ ಅಷ್ಟೇ ಜೀವ ತುಂಬಿ ಹಾಡಿರುವುದನ್ನು ಸ್ಮರಿಸಬಹುದು.

ಇವರು ಹಾಡಿರುವ ಎಷ್ಟೋ ಹಾಡುಗಳು ತುಂಬಾ ಜನಪ್ರಿಯವಾಗಿವೆ, ಕೆಲವು :-

ಶ್ರಾವಣ ಬಂತು ಕಾಡಿಗೆ, ನಿನ್ನೊಲುಮೆಯಿಂದಲೇ, ಸೋರುತಿಹುದು ಮನೆಯ ಮಾಳಿಗಿ, ನೀ ಹಿಂಗ ನೋಡಬೇಡ ನನ್ನ, ಎಲ್ಲೋ ಹುಡುಕಿದೆ ಇಲ್ಲದ ದೇವರ, ಅಮ್ಮ ನಿನ್ನ ಎದೆಯಾಳದಲ್ಲಿ.

ಇವರ ಗಾಯನ ಪಯಣ ಚಲನಚಿತ್ರ ರಂಗದಲ್ಲಿ ಹಲವಾರು ವಿವಿಧ ಪ್ರಕಾರಗಳ ಗೀತೆಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದರಲ್ಲಿ ಸಾಧ್ಯವಾಯಿತು.

👉ಸಂತ ಶಿಶುನಾಳ ಶರೀಫ, ನಾಗಮಂಡಲ, ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ಕಾಕನ ಕೋಟೆ, ಆಲೆಮನೆ,ಕೊಟ್ರೇಶಿ ಕನಸು, ಸಿಂಗಾರವ್ವ, ಮತದಾನ, ಅನುಪಮ, ಹೊಂಗಿರಣ, ಒಂದು ಮುತ್ತಿನ ಕಥೆ, ಕಾಮನಬಿಲ್ಲು, ಅಮೃತಧಾರೆ, ಸ್ಪಷ೯,ತುತ್ತಾ ಮುತ್ತಾ, ಹೂವು ಹಣ್ಣು, ಹಟವಾದಿ, ಮಾತಾಡ್ ಮಾತಾಡ್ ಮಲ್ಲಿಗೆ, ಮರಣ ಮೃದಂಗ, ಕೋಣ ಈದೈತೆ, ಶಿಷ್ಯ ಮುಂತಾದವು..

🌹ಕಾಣದಾ ಕಡಲಿಗೇ ಹಂಬಲಿಸಿದೇ ಮನ
ಕಾಣಬಲ್ಲೆನೇ ಒಂದು ದಿನ
ಕಡಲನೂ ಕೂಡಬಲ್ಲೆನೇ ಒಂದು ದಿನ 🌹

ಈ ಹಾಡು ಕೇಳ್ತಿದ್ರೇ ನಮ್ಮನ್ನೇ ನಾವು ಮರೆಯೋದು ಖಂಡಿತ..

🌻ಸ್ಪಂದನ ಚಿತ್ರ ಸಂಗೀತಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಕನಾ೯ಟಕ ಸಕಾ೯ರ.

🌲ಮೈಸೂರು ಮಲ್ಲಿಗೆ ಚಿತ್ರ ಸಂಗೀತ ನಿದೇ೯ಶನಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ಫಿಲಂ ಫೇರ್ ಪ್ರಶಸ್ತಿ.

🌺ಚಿನ್ನಾರಿ ಮುತ್ತ ಚಿತ್ರ ಸಂಗೀತ ನಿದೇ೯ಶನಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ಕನಾ೯ಟಕ ಸಕಾ೯ರ ಪ್ರಶಸ್ತಿ.

🎓ರಾಜ್ಯೋತ್ಸವ ಪ್ರಶಸ್ತಿ ಕನಾ೯ಟಕ ಸಕಾ೯ರ ಗೌರವ.

🍀ತಪ್ಪು ಮಾಡದವ್ರ್ ಯಾರವ್ರೆ
ತಪ್ಪೇ ಮಾಡದವ್ರ್ ಎಲ್ಲವ್ರೆ
ಅಪ್ಪಿ ತಪ್ಪಿ ತಪ್ಪಾಗುತ್ತೆ
ಬೆಳ್ಳಿ ಕೂಡ ಕಪ್ಪಾಗುತ್ತೆ
ತಿದ್ಕೊಳಕೇ ದಾರಿ ಐತೇ… “ತಪ್ಪು ಮಾಡದವ್ರ್ “🍀

🌺ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚಂದ ನಿನಗಾವುದೆಂದೂ
ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ
ಚಂದ ನಿನಗಾವುದೆಂದೋ
ನಮ್ಮೂರು ಚಂದವೋ, ನಿಮ್ಮೂರು ಚಂದವೋ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರೀ ಎಂದಳಾಕೆ🌺

ಪ್ಯಾಲೇಸ್ ಮೈದಾನದಲ್ಲಿ ನಡೆದ ಅವಿಸ್ಮರಣೀಯ ಸಂಗೀತ ಸಂಜೆ ಮೇಲ್ವಿಚಾರಣೆ ಇವರದೇ, ಬರೊಬ್ಬರಿ ಒಂದು ಲಕ್ಷಕ್ಕಿಂತ ಹೆಚ್ಚಿನ ಅಭಿಮಾನಿಗಳು ಭಾಗವಹಿಸಿದ್ದು, ಇದು ಮೊದಲ ಕನ್ನಡ ರಸಸಂಜೆ ಎಂಬ ಹೆಗ್ಗಳಿಕೆ.

ಇಷ್ಟು ಹೊತ್ತು ನನಗೆ ತೋಚಿದ ಹಾಗೆ ಬರೆದಿದ್ದೇನೆ ಅವರನ್ನು ಭೇಟಿ ಮಾಡಲಾಗಲಿಲ್ಲ ಆದರೆ ಅವರ ಸಾಧನೆಗಳ ಕುರಿತು ಒಂದು ಸಣ್ಣ ಲೇಖನ ಪ್ರಯತ್ನ ಮಾಡಿದ್ದೇನೆ.

“💜ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ
ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರಾ
ಹೆಣ ಅನ್ನುತಾರಾ, ಮಣ್ಣಾಗ ಹೂಳುತಾರಾ
ಚಟ್ಟ ಕಟ್ಟುತಾರಾ ನಿನ್ನ ಸುಟ್ಟು ಹಾಕುತಾರಾ
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ 💜”

ಮತ್ತೊಮ್ಮೆ ಹುಟ್ಟಿ ಬನ್ನಿ ಸುಗಮ ಸಂಗೀತದ ದಿಗ್ಗಜ ಮಹನೀಯರೆ.. 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply