ಗಾನ ಗಂಧರ್ವ ಡಾ. ಕೆ. ಜೆ. ಯೇಸುದಾಸ್

ಗಾನ ಗಂಧರ್ವ, ಭಾರತೀಯ ಚಿತ್ರರಂಗದ ಪ್ರಖ್ಯಾತ ಹಿನ್ನೆಲೆ ಗಾಯಕ, ಸ್ವರ ಮಾಂತ್ರಿಕ , ಭಕ್ತಿ ಗೀತೆಗಳ ವಾಹಕ ಡಾ. ಕೆ. ಜೆ. ಯೇಸುದಾಸ್ ಅವರು ಹುಟ್ಟಿದ್ದು ಜನವರಿ ೧೦, ೧೯೪೦ ರಂದು….

ದೇವರ ಅನುಸಂಧಾನದೊಂದಿಗೆ ಭಕ್ತಿ ಸುಧೆಯ ಹಾಡುಗಳಿಗೆ ಜೀವ ತುಂಬಿದವರು….ಸ್ವರ ಚಿಹ್ನೆಗಳಿಗೆ ಸಂಕೇತವಾದ ಸಂಗೀತ ಲೋಕದ ಸಂತ…. ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಹಾಡುವ ಗಾಯಕರ ಬಗ್ಗೆ ಅನೇಕ ಮಹಾನ್ ಸಂಗೀತ ಕಲಾವಿದರಿಗೆ ಒಂದು ಮಟ್ಟದ ಅಸಡ್ಡೆ ಇರುತ್ತದೆ….

ಶಾಸ್ತ್ರೀಯ ಸಂಗೀತದ ಬಗ್ಗೆಯಾಗಲಿ, ಕರ್ನಾಟಕ ಸಂಗೀತದ ಬಗ್ಗೆಯಾಗಲಿ ಚಲನಚಿತ್ರಗಳಲ್ಲಿ ಹಾಡುವ ಗಾಯಕ/ ಕಿಯರಿಗೆ ಜ್ಞಾನವೂ ಇರುವುದಿಲ್ಲ, ಹಿಡಿತವು ಇರುವುದಿಲ್ಲ ಎಂದು…. ಆದರೆ ಈ ಆಪಾದನೆಯನ್ನು ಸಮರ್ಥವಾಗಿ ಎದುರಿಸಿ, ಕರ್ನಾಟಕ ಸಂಗೀತದಲ್ಲೂ ಸಹ ತನ್ನ ಪ್ರತಿಭೆಯ ಮೇರುತನವನ್ನು ಅನಾವರಣಗೊಳಿಸಿದವರು ಡಾ. ಯೇಸುದಾಸ್ ಅವರು….

ಅವರದು ವಿಶಿಷ್ಟವಾದ, ಅನನ್ಯ ಕಂಠ..‌‌..ಅವರ ದೈವಿಕ ಕಂಠದಲ್ಲಿ ಸಂಗೀತ ಶಾಸ್ತ್ರದ ವಿವರಣೆಗಳನ್ನು ನಾವು ಅರಿತುಕೊಳ್ಳಬಹುದು ಎಂದರೆ ತಪ್ಪಾಗಲಾರದು….ಸಂಗೀತ ಸುಧೆಯ ಸ್ವರ ಮೇಳಗಳಲ್ಲಿ ದೇವಗಾನ ಸೃಷ್ಟಿಸಿದವರು….ಕ್ರಿಶ್ಚಿಯನ್ ಧರ್ಮದಲ್ಲಿ ಜನಿಸಿದ ಯೇಸುದಾಸ್ ಅವರು ಗಾಯಕನಾಗಲೇಬೇಕು ಎಂದು ಹಠ ತೊಟ್ಟು, ಭಾರತದ ಸಂಗೀತ ಕ್ಷೇತ್ರದಲ್ಲಿ ಮರೆಯಲಾಗದ ಮಾಣಿಕ್ಯ ನಾಗಿ ಹೊರಹೊಮ್ಮಿದರು….ಮೊಹಮ್ಮದ್ ರಫಿಯವರ ಕಟ್ಟಾ ಅಭಿಮಾನಿಯಾಗಿದ್ದ ಯೇಸುದಾಸ್ ಅವರು ಕಡು ಬಡತನದಲ್ಲಿಯೂ ಸಹ ತಮ್ಮ ಗುರಿಯನ್ನು ಸಾಧಿಸಿದವರು….ಭಕ್ತಿ ರಸದ ಹಾಡುಗಳಲ್ಲಿ ಅವರಿಗೆ ಅವರೇ ಸಾಟಿ….

ಅಯ್ಯಪ್ಪನ ಸನ್ನಿಧಿಯಲ್ಲಿ ಯೇಸುದಾಸ್ ಅವರ ಕಂಠವು ದೈವಿಕ ಭಾವನೆಯುಂಟುಮಾಡುತ್ತದೆ….ಹಿನ್ನೆಲೆ ಗಾಯನಕ್ಕಾಗಿ ಅತಿ ಹೆಚ್ಚು ಬಾರಿ, ೮ ಸಲ, ರಾಷ್ಟ್ರೀಯ ಪ್ರಶಸ್ತಿ ಪಡೆದ ಮಹಾನ್ ಗಾಯಕ….

೮೦ ರ ದಶಕದಲ್ಲಿಯೇ ನನಗೆ ಪ್ರಶಸ್ತಿ ಕೊಡುವುದನ್ನು ನಿಲ್ಲಿಸಿ, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಎಂದು ಸರ್ಕಾರವನ್ನು ಕೇಳಿಕೊಂಡರು…. ಕನ್ನಡದಲ್ಲಿ ನಾದ ಬ್ರಹ್ಮ ಹಂಸಲೇಖ- ರವಿಚಂದ್ರನ್- ಡಾ.ಯೇಸುದಾಸ್ ಅವರ ಜೋಡಿಗೆ ಬಹುಪರಾಕ್ ಹೇಳಲೇಬೇಕು….ಅವರ ಜೋಡಿಯಲ್ಲಿ ಮೂಡಿಬಂದ ಎಲ್ಲಾ ಹಾಡುಗಳು ಸಾರ್ವಕಾಲಿಕ ಜನಪ್ರಿಯ ಹಾಡುಗಳು….

ಯೇಸುದಾಸ್ ಅವರ ಪ್ರತಿಭೆಗೆ ಮಾರುಹೋಗಿದ್ದ ಖ್ಯಾತ ಸಾಹಿತಿ ಮತ್ತು ಸಂಗೀತ ನಿರ್ದೇಶಕ ರವೀಂದ್ರ ಜೈನ್ ಅವರು ಹಿಂದಿ ಚಿತ್ರರಂಗದಲ್ಲಿಯೂ ಯೇಸುದಾಸ್ ಅವರ ಪ್ರತಿಭೆಯನ್ನು ಅನಾವರಣಗೊಳಿಸಿದವರು….ಚಿತ್ ಚೋರ್ ಚಿತ್ರದ ಎಲ್ಲಾ ಹಾಡುಗಳಿಗೆ ತಮ್ಮ ದೈವಿಕ ಕಂಠದಿಂದ ಆ ಹಾಡುಗಳಿಗೆ ಜೀವ ತುಂಬಿದವರು….ಕುರುಡರಾಗಿದ್ದ ರವೀಂದ್ರ ಜೈನ್ ರವರು ಒಂದು ವೇಳೆ ನನಗೆ ಮತ್ತೊಮ್ಮೆ ದೃಷ್ಟಿ ಬಂದರೆ, ನಾನು ನೋಡ ಬಯಸುವ ಮೊಟ್ಟಮೊದಲ ವ್ಯಕ್ತಿ ಯೇಸುದಾಸ್ ಎಂದು ಹೇಳುತ್ತಾರೆ….

ನಿಸ್ಸಂಶಯವಾಗಿ ಡಾ.ಯೇಸುದಾಸ್ ಭಾರತದ ರತ್ನ ಗಳಲ್ಲಿ ಒಬ್ಬರು….

ಲೇಖಕರು: ಅರುಣ್ ಕುಮಾರ್ ಮೋಘಾ, ಕಲಬುರಗಿ ….ವೃತ್ತಿ- ಪ್ರೌಢಶಾಲಾ ಗಣಿತ ಶಿಕ್ಷಕ…. ಪ್ರವೃತ್ತಿ – ಹವ್ಯಾಸಿ ಬರಹಗಾರ ಹವ್ಯಾಸಗಳು – ಪುಸ್ತಕಗಳನ್ನು ಓದುವುದು , ಸಂಗೀತ ಆಲಿಸುವುದು, ಪ್ರಕೃತಿಯ ಆರಾಧಕ…

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply