ಕಿಚ್ಚಾ ಸುದೀಪ್ ನಟಿಸ್ತಿರೋ , ಅನೂಪ್ ಭಂಡಾರಿ ನಿರ್ದೇಶನದ ಫಾಂಟಮ ಸಿನಿಮಾ ತಂಡ ಹೊಸ ಸುದ್ದಿ ತಿಳಿಸ್ತೀವಿ ಅಂದಿದ್ರು, ಇಂದು ನಾಲ್ಕು ಘಂಟೆ ಸಮಯಕ್ಕೆ 20 ಸೆಕೆಂಡ್ ವಿಡಿಯೋವೊಂದನ್ನು ಸಿನಿ ತಂಡ ಬಿಡುಗಡೆ ಮಾಡಿದ್ರು.. ಫಂಟಾಮ್ ಈಗ “ವಿಕ್ರಮ್ ರೋಣ”.. ಸಿನಿಮಾದ ಶೀರ್ಷಿಕೆಯನ್ನೇ ಬದಲಾಯಿಸಿದ್ದಾರೆ.
ಸಿನಿಮಾದ ಟೈಟಲನ್ನ ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾದಲ್ಲ ಅನಾವರಣಗೊಳಿಸಲಿದ್ದು, ಈ ಹಿಂದೆ ಪ್ರಪಂಚದ ಯಾವ ಸಿನಿಮಾನು ಈ ಕೆಲಸವನ್ನು ಮಾಡಿಲ್ಲದ ಕಾರಣ, ಇದೊಂದು ಹೊಸ ವಿಶ್ವ ದಾಖಲೆಯೇ ಸರಿ. ಜನವರಿ 31ಕ್ಕೆ ನಮ್ಮ 6 ಅಡಿ ಕಟ್ ಔಟ್ 2700 ಅಡಿಯ ಬಿಲ್ಡಿಂಗ್ ಮೇಲೆ ಮಿಂಚಲಿದೆ..
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಸರ್ಕಾರಿ ಕೆಲಸ ದೇವರ ಕೆಲಸ. ಸರ್ಕಾರ ಕೊಟ್ಟಿರುವ ಕೆಲಸವನ್ನು ಶ್ರಧ್ಧಾ-ಭಕ್ತಿಯಿಂದ ಮಾಡಿದರೆ ಸಿಗುವ ಉಡುಗೊರೆ ಕತ್ತು ಮುರಿತ. ಆಶ್ಚರ್ಯವಾಯ್ತೇ? ಚುನಾವಣಾ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುವ ನಮ್ಮ…