ಗೂಢಚಾರಿ- ಕ್ಷಣಕ್ಕೊಮ್ಮೆ ಟ್ವಿಸ್ಟ್ ಕೊಡುವ ರೋಮಾಂಚಕ ತೆಲುಗು ಥ್ರಿಲ್ಲರ್ ( ರೇಟಿಂಗ್ *: 4/5)
IMDB=7.9/10
——————————~————————————–
ನಾನು ಬೇಬಿ, ರಾಜ಼ಿ (ಹಿಂದಿ) ನಂತರ ನೋಡಿದ ಉತ್ಕೃಷ್ಟ ದರ್ಜೆಯ ಸ್ಪೈ ಥ್ರಿಲ್ಲರ್ – ತೆಲುಗಿನ ” ಗೂಢಚಾರಿ” (2018).
https://www.primevideo.com/…/ref=sr_hom_c_unkc_1_1…
ಅಮೆಜ಼ಾನ್ ಪ್ರೈಮ್ ನಲ್ಲಿ ಅಧಿಕೃತವಾಗಿ ಒರಿಜಿನಲ್ ಚಿತ್ರ ನೋಡಬಹುದುಇದರಲ್ಲಿ ತಂದೆ ಮಕ್ಕಳ ದೇಶ ಪ್ರೇಮ, ಭಯೋತ್ಪಾದನೆಯ ದ್ವಂದ್ವದ ಹಿನ್ನೆಲೆಯ ಮೂಲ ಕತೆಯಲ್ಲಿ, ವೈಯಕ್ತಿಕ ಭಾವನೆ ವರ್ಸಸ್ ರಹಸ್ಯ ಏಜೆಂಟರ ಕರ್ತವ್ಯ, ಅವರು ಕಾಪಾಡುವ ಗೌಪ್ಯತೆ ಎಲ್ಲವನ್ನೂ ಹೊಸ ನಿರ್ದೇಶಕ ಸಶಿ ಕಿರಣ್ ಟಿಕ್ಕಾ ಬಹಳ ಸಮರ್ಥವಾಗಿ ಪ್ಯಾಕೇಜ್ ಮಾಡಿದ್ದಾರೆ. ನಾಯಕನಾಗಿ ಸಾಫ್ಟ್ ಮುಖಚರ್ಯೆಯೆ ಐ ಟಿ ಎಂಜಿನಿಯರ್ ಅಂತೆ ಕಾಣಿಸಿದರೂ ಪ್ರಬಲ ಸೀಕ್ರೆಟ್ ಏಜೆಂಟಿನ ಎಲ್ಲಾ ಯಶಸ್ವಿ ಲಕ್ಷಣಗಳನ್ನು ಅಭಿನಯಿಸುವ ಅಡಿವಿ ಸೇಶ್ ಎಂಬ ನಟನ ಪಾತ್ರ ತುಂಬಾ ರಂಜನೀಯವಾಗಿ ಮೂಡಿಬಂದಿದೆ. ನಾಯಕಿಯಾಗಿ ಓಹೋ ಎನ್ನುವ ಚೆಲುವೆಯಲ್ಲದಿದ್ದರೂ ಸೋಭಿತಾ ಧುಲಿಪಾಲ ನೆನೆಪಿನಲ್ಲಿಯುತ್ತಾಳೆ. ಪ್ರಮುಖ ಭಾವನಾತ್ಮಕ ಪಾತ್ರದಲ್ಲಿ ಪ್ರಕಾಶ್ ರಾಜ್ ಅಬಿನಯದ ಬಗ್ಗೆ ಎರಡು ಮಾತಿಲ್ಲ. ಮಿಕ್ಕ ಎಲ್ಲರೂ ಸಮರ್ಥವಾಗಿ ಬೆಂಬಲಿಸುತ್ತಾರೆ.ತ್ರಿನೇತ್ರ ಎಂಬ ಭಾರತೀಯ ಸೀಕ್ರೆಟ್ ಸರ್ವೀಸ್ ಮತ್ತು ಪಾಕ್- ಬಾಂಗ್ಲಾ ಭಯೋತ್ಪಾದಕರ ನಡುವಿನ ಸೆಣಸಾಟ, ತಂತ್ರ, ಪ್ರತಿ ತಂತ್ರ ಇವನ್ನು ಆಧುನಿಕ ಸಮಾಜದ ಸೆಟ್ಟಿಂಗಿನಲ್ಲಿ ಸಹಜವಾಗಿ ಕ್ಷಣಕ್ಕೊಮ್ಮೆ ನಮ್ಮ ಅಂದಾಜುಗಳನ್ನೂ ಊಹೆಗಳನ್ನು ಬುಡಮೇಲು ಮಾಡುತ್ತಾ ಹೊಸ ಹೊಸ ತಿರುವು ಕೊಡುತ್ತಾ ಹೋಗುವ “slick” ಚಿತ್ರಕತೆ ಮತ್ತು ನಿರ್ದೇಶನ ಬಹಳ ಪ್ರಿಯವಾಯಿತು. ಒಟ್ಟಿನಲ್ಲಿ ಯಾವುದೇ ಫಾರ್ಮ್ಯುಲಾಗೆ ಬಾಗದ ಹಾಲಿವುಡ್ ಚಿತ್ರದಂತಿದೆ.ಇದಕ್ಕೆ ಇಂಗ್ಲೀಷ್ ಸಬ್ ಟೈಟಲ್ಸ್ ಅಮೆಜ಼ಾನ್ ಪ್ರೈಮ್ ನಲ್ಲಿದೆ.ನಮ್ಮನ್ನು ಭಾರತೀಯ ಗೂಡಚಾರಿ ಲೋಕದ ಹೊಸಮುಖವನ್ನು ನೈಜವಾಗಿ ಪರಿಚಯಿಸಿದ ಖ್ಯಾತಿಯಂತೂ ಈ ವರ್ಷದ ಯಶ್ವಸಿ ಹಿಟ್ ಚಿತ್ರವೂ ಆದ ‘ಗೂಢಚಾರಿ’ಗೆ ಸಲ್ಲುತ್ತದೆ.ಸಾಧ್ಯವಾದರೆ ಮಿಸ್ ಮಾಡದೇ ಒಮ್ಮೆ ನೋಡಿ.