ಮುಂದುವರಿದ ಭಾಗ….
ಶಿವಶಂಕರಿ ಶಿವಾನಂದನ ಲಹರಿ, ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ, ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ,ಏನಿದು ಗ್ರಹಚಾರವೋ ಏನಿದಿ ವನವಾಸವೋ, ಹೇ ಚಂದ್ರಚೂಡ ಮದಾನಂತಕಾ ಶೂಲಪಾಣಿ, ಬಾಳೊಂದು ನಂದನ ಅನುರಾಗ ಬಂಧನ, ದೇವಾ ದರುಶನವ ನೀಡೆಯಾ, ತಾಯಿ ತಂದೆಯ ಸೇವೆಯಾ ಯೋಗ, ಮೆಲ್ಲುಸಿರೇ ಸವಿಗಾನ, ಯಾವ ಕವಿಯ ಶೃಂಗಾರ ಕಲ್ಪನೆಯೋ, ಈ ದೇಹದಿಂದ ದೂರನಾದೆ ಏಕೆ ಆತ್ಮನೇ, ಯಾರಿಗೆ ಯಾರುಂಟು ಎರವಿನ ಸಂಸಾರ, ಏನೋ ಎಂತೋ ಜುಂ ಎಂದಿತು ತನುವು, ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು, ಆಹಾ ನನ್ನ ಮದುವೆಯಂತೆ ಓಹೋ ನನ್ನ ಮದುವೆಯಂತೆ, ಹನುಮನ ಪ್ರಾಣ ಪ್ರಭೋ ರಘುರಾಮ ಸೇರಿ ಕನ್ನಡದಲ್ಲಿ 60 ಕ್ಕೂ ಹೆಚ್ಚು ಚಿತ್ರಗಳನ್ನು ಹಾಡಿದ್ದಾರೆ. ಅಲ್ಲದೇ ಇವರ ಪ್ರತಿ ಗೀತೆಗಳು ಕನ್ನಡದಲ್ಲಿ ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಮತ್ತು ವೀರಕೇಸರಿ, ವಾಲ್ಮೀಕಿ ಸೇರಿ ಅನೇಕ ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ.
ಕನ್ನಡ, ತೆಲುಗು ಮತ್ತು ತಮಿಳು ಸೇರಿ 8 ಭಾಷೆಗಳಲ್ಲಿ 10,000 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರಲ್ಲದೇ 87 ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಅಲ್ಲದೇ ಇವರು ತೆಲುಗಿನಲ್ಲಿ ಹಾಡಿದ್ದ ಜಗಮೇ ಮಾಯಾ ಗೀತೆಯು ಸಾರ್ವಕಾಲಿಕವಾಗಿ ಪ್ರಸಿದ್ಧಿಯನ್ನು ಪಡೆದಿದೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋದರೆ ಅಲ್ಲಿಯೂ ಇವರ ಹೆಸರೇ ನೆನಪಿಗೆ ಬರುತ್ತದೆ. ಇವರು ಹಾಡಿದ ತಿರುಮಲ ಒಡೆಯ ಶ್ರೀನಿವಾಸನ ಕುರಿತ ಪ್ರತಿ ಹಾಡನ್ನು ಕೇಳಿದರೆ ಅಮೃತವನ್ನು ಕುಡಿದಷ್ಟೇ ಆನಂದವಾಗುತ್ತದೆ. ಮುಖ್ಯವಾಗಿ ಭಗವದ್ಗೀತೆಯನ್ನು ಮನೆ ಮನೆಗೂ ತಮ್ಮ ವಿಶಿಷ್ಟ ಧ್ವನಿಯ ಮುಖಾಂತರ ತಲುಪಿಸಿದವರಲ್ಲಿ ಇವರೇ ಮೊದಲಿಗರು ಕೂಡ ಆಗಿದ್ದರು. ಇದೇ ರೀತಿ ರಾಮದಾಸರ ಕೃತಿ, ಜಯದೇವ ಕವಿಯ ಅಷ್ಟಪದಿ ಹೀಗೆ ಅಸಂಖ್ಯಾತ ಶಾಸ್ತ್ರೀಯ ಗೀತೆಗಳು ಕೂಡ ಇವರ ಧ್ವನಿಯ ಮೂಲಕ ಬಂದಿದ್ದು ಜನರ ಮಾನಸಕ್ಕೆ ಹತ್ತಿರದಲ್ಲೇ ನಿಂತಿವೆ. ಇಂತಹ ವಿಶಿಷ್ಟ ಧ್ವನಿಯ ಪ್ರತಿಭೆಯನ್ನು ಹೊಂದಿದ್ದ ಇವರು ಫೆಬ್ರುವರಿ 11, 1974 ರಂದು ತಮ್ಮ 52 ನೇ ವಯಸ್ಸಿನಲ್ಲಿ ಮರಣವನ್ನು ಹೊಂದಿದರು. ಆದರೆ ಇವರು ಹಾಡಿದ ಹಾಡುಗಳು ಮತ್ತು ಇವರ ಹೆಸರು ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ ಎಂದು ಹೇಳುತ್ತ ನನ್ನ ಈ ಲೇಖನವನ್ನು ಮುಗಿಸುತ್ತೇನೆ.