ಚಿತ್ರವಿಮರ್ಶೆ- ಆಟೊಮೆಟಾ ( 2014)

– ಇಂಗ್ಲೀಷ್ ವೈಜ್ಞಾನಿಕ ಚಿತ್ರವಿನಾಶವಾದ ಲೋಕ ಅಥವಾ ಪ್ರಳಯಾನಂತರದ ಪ್ರಪಂಚದಲ್ಲಿ ಯಂತ್ರಗಳ ದರಬಾರು!

~~~~~~~~~~~~~~~~~~~~~~~~~~~~~~~~~~~~~~~~~~~

ಈ ಬಹಳ ಕುತೂಹಲಕಾರಿ ಚಿತ್ರಕಥೆಯ ಹಿನ್ನೆಲೆ ಹೀಗಿದೆ:

ಮುಂದೊಮ್ಮೆ ಸೌರ ಜ್ವಾಲೆಗಳು ( ಸೋಲಾರ್ ಫ಼್ಲೇರ್ಸ್) ಸೂರ್ಯನಿಂದ ಬಿದ್ದು ಬೆಂಕಿಯಂತೆ ಹರಡಿ ಭೂಮಿಯನ್ನು ಸುಟ್ಟು ಬರಡಾಗಿಸಿ ವಿನಾಶದತ್ತ ನೂಕಿದೆ. ಎಲ್ಲೆಲ್ಲೂ ಅಣುವಿಕಿರಣ ಹೆಚ್ಚಿ 99% ಜನಸಂಖ್ಯೆ ಅಳಿದುಹೋಗಿದೆ.ಇಂತದರಲ್ಲಿ ಕೆಲವು ಸಹಸ್ರ ಮಂದಿ ಹಾಗೂ ಹೀಗೂ ಬಚಾವಾದವರು ಕೋಟೆ ಕಟ್ಟಿಕೊಂಡು ಚಿಕ್ಕದಾಗಿ ವೈಜ್ಞಾನಿಕ ಯಂತ್ರ ಚಾಲಿತ ನಗರವನ್ನೇ ಬೆಳೆಸಿ ಹೇಗೋ ಅಲ್ಲಿ ಕಷ್ಟಪಟ್ಟು ಬಾಳುತ್ತಿದ್ದಾರೆ.

ಇದು ಒಂದು ಬದುಕುಳಿದವರ ಪಾಲಿನ ಡಿಸ್ಟೋಪಿಯನ್ ಪ್ರಪಂಚ , ಅಥವಾ ಪ್ರಳಯದ ನಂತರದ ಲೋಕ!(ನನಗೆ ಇದು ಪ್ರಿಯವಾದ ಕಥಾವಸ್ತು, ಇದರ ಬಗ್ಗೆ ಡಿಸ್ಟೋಪಿಯಾ, ವಿನಾಶ ಕಾಲೇ ಎಂಬ ಕಥೆಗಳನ್ನು ನಾನು ಬರೆದಿದ್ದೇನೆ)ಮಳೆಯಿಲ್ಲದ ಕಾದುಹೋಗುತ್ತಿರುವ ಒಣ ಭೂಮಿಗೆ ಯಾಂತ್ರಿಕ ಮೋಡ ಸೃಷ್ಟಿ ಮಾಡಿ ಮಳೆ ಕೃತಕವಾಗಿ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆಗಸದಲ್ಲಿ ಪ್ರೊಜೆಕ್ಟ್ ಆಗುವ ಆಡ್ ವಿಡಿಯೊಗಳು ಇವೆ!

ಉಳಿದಂತೆ ಎಲ್ಲರೂ ತಾವೇ ನಿರ್ಮಿಸಿದ ರೋಬೋಟುಗಳ ಸಹಾಯದಿಂದ ಮಿಕ್ಕ ಮನೆ ಕೆಲಸ , ಕಚೇರಿ ಕೆಲಸ ಮಾಡಿಕೊಂಡಿದ್ದಾರೆ. ಆ ಯಂತ್ರ ಮಾನವರಿಗೆ ಎರಡು ನಿಯಮದಿಂದ ತಯಾರು ಮಾಡಿದ್ದಾರೆ:1) ಅವು ಮಾನವನನ್ನು ಕೊಲುವಂತಿಲ್ಲ, ಹಾನಿ ಮಾಡುವಂತಿಲ್ಲ2) ತಾವಾಗಿಯೇ ಜಾಣತನ ತೋರಿಸಲು ಬೆಳೆಯುವಂತಿಲ್ಲ, ಅವರಲ್ಲಿರುವ ಸಾಫ್ಟ್ವೇರ್ ಅವರಿಗೆ ಕಲಿಸಿರುವ ಕೆಲಸ ಮಾತ್ರ ಮಾಡುತ್ತಿರಬೇಕು. ಇಂತಹಾ ಕೃತಕ ಬುದ್ದಿಮತ್ತೆ ( ಆರ್ಟಿಫಿಶಿಯಲ್ ಇಂಟೆಲಿಜೆನ್ಸ್- AI) ಮೂಲಕ ಸಹಾಯ ಮಾಡುವ ಯಂತ್ರಗಳನ್ನು ತಯಾರಿಸಿ ಜೀವ ವಿಮೆ ಸಹಾ ಮಾಡುತ್ತಿದೆ ಒಂದು ಖದೀಮ ಕಂಪನಿ!

ನಾಯಕ ಆಂಟೋನಿಯೋ ಬಾಂಡೆರಾಸ್ ( ಪಾತ್ರದ ಹೆಸರು ಜೇಕ್ ವಾನ್) ತನ್ನ ಕಂಪನಿಯ ರೋಬೋಟುಗಳು ಅದು ಹೇಗೋ ಬುದ್ದಿವಂತಿಕೆ ಹೆಚ್ಚಿಸಿಕೊಂಡು ಇನ್ನೂ ಜಾಣರಾಗಿ ತಾವು ತಾವೇ ನಿರ್ಧಾರ ತೆಗೆದುಕೊಳ್ಳುವುದನ್ನು ಗಮನಿಸಿ ಹೈರಾಣವಾಗುತ್ತಾನೆ. ಅವನಿಗೆ ಗರ್ಭಿಣಿ ಹೆಂಡತಿ, ನ್ಯಾಯವಂತ ಬಾಸ್ ಜೀವನದಲ್ಲಿ ಮುಖ್ಯವಾಗಿದ್ದಾರೆ.ಈ ರೋಬೋಟುಗಳು ಹೆಚ್ಚು ಜಾಣರಾಗಿ ತಾವೇ ಮಾನವರಂತೆ ಭಾವನೆಗಳು ಉಳ್ಳ “ಪ್ರಾಣಿ” ಗಳು ಹೇಗಾದವು ಎಂದು ಅವನು ಪತ್ತೇದಾರಿ ಶುರುಮಾಡುತ್ತಾನೆ.ಆದರೆ ಅವರ ಕಂಪನಿಯ ಕೆಟ್ಟ ಬಾಸುಗಳು ಆ ಸತ್ಯಾಂಶ ಹೊರಬರಲು ಬಿಡುವರೆ, ಅವನನ್ನೇ ಮುಗಿಸಲು ನೋಡುತ್ತಾರೆ. (ಇಂತಹ ಯಂತ್ರ ಮಾನವರು ಜಾಣರಾದ, ಕೆಟ್ಟವರಾದ ಕಥೆಯನ್ನು ರಜಿನಿಕಾಂತ್ ಚಿತ್ರ – ಎಂದಿರನ್ ಮತ್ತು 2.0 ದಲ್ಲಿ ಆಗಲೇ ಉಪಯೋಗಿಸಿದ್ದಾರೆ.

ಆದರೆ ಈ ಪಿಕ್ಚರ್ ಅವಕ್ಕಿಂತಾ ತುಂಬಾ ವಾಸಿ ಮತ್ತು ಬಹಳ ನೈಜವಾಗಿದೆ,. ರಜಿನಿ ಮಸಾಲೆ ಚಿತ್ರಕ್ಕೂ ಇದಕ್ಕೂ ಸಂಬಂಧವೇ ಇಲ್ಲ.)ಅಲ್ಲಿಂದ ಈ ಚಿತ್ರ ನಾಯಕನ ಕುಟುಂಬದ ಬಗ್ಗೆಯೇ ಭಾವನಾತ್ಮಕ ಥ್ರಿಲ್ಲರ್ ನಂತೆ ಸಾಗುತ್ತದೆ. ಆದರೆ ಬಹಳ ಡಿಶುಂ ಡಿಶುಂ ಏನೂ ಇಲ್ಲ! ಬೇಕಾದಷ್ಟು ಆ್ಯಕ್ಷನ್ ಮಾತ್ರ ಹದವಾಗಿ ಸೇರಿದೆ.ಅಲ್ಲಲ್ಲಿ ಭೂಮಿ, ಪರಿಸರ, ಟೆಕ್ನಾಲಜಿಯ ದುರುಪಯೋಗ, ನಿಯಂತ್ರಣವಿಲ್ಲದೇ ವಿಜ್ಞಾನ ಬೆಳೆದರೆ ಏನಾಗಬಹುದು ಎಂಬ ಉಪದೇಶಗಳೂ ಡೈಲಾಗ್ಸ್ ಮೂಲಕ ಕಾಣುತ್ತವೆ.ನಾಯಕನು ಶತ್ರುಗಳಿಂದ ಹೇಗೆ ಬಚಾವಾಗಲು ಸಾಧ್ಯ?ತನ್ನ ಪತ್ನಿ ಮತ್ತು ಹುಟ್ಟಿದ ಮಗುವನ್ನು ಕರೆದುಕೊಂಡು ಒಂದು ಆರೋಗ್ಯವಂತ ಕರಾವಳಿಗೆ ತಲುಪುವನೆ?ಈ ಭೂಮಿಗೆ ಮರುಜೀವ ಬರಲಿದೆಯೆ?ಅವನ ಸಾಥ್ ಕೊಡುವ ಯುವತಿ- ರೋಬೋಟ್ ಕ್ಲಿಯೋ ನಿಜಕೂ ಒಳ್ಳೆಯುದೇ, ಕೆಟ್ಟದೇ?

ನಿಜಕ್ಕೂ ಈ ಯಂತ್ರ ಮಾನವರೇ ಒಳ್ಳೆಯವರೇ, ನಮ್ಮ ಸಹಜ ಮಾನವರೇ ಸ್ವಾರ್ಥಿಗಳೆ?ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬ ಈ ತರ್ಕ ಸಹಾ ನಮ್ಮನ್ನು ಕಾಡುತ್ತವೆ.ಇದಂತೂ ಚಿತ್ರ ಮುಗಿಯುವವರೆಗೂ ಹೊಸ ರೀತಿಯ ಆಸಕ್ತಿ ಹುಟ್ಟಿ ಹಾಕಿತುಚಿತ್ರದ ಸ್ಪೆಶಲ್ ಎಫೆಕ್ಟ್ಸ್, ಗ್ರಾಫಿಕ್ಸ್, ತಾಂತ್ರಿಕ ಮೌಲ್ಯ ಬಹಳ ಸೂಕ್ತವಾಗಿವೆ..ಸದ್ಯದ ಕಾಲದಲ್ಲಿ ಮಾನವನ ಅಳಿವು ಉಳಿವು ಈಗ ಯೋಚಿಸಬೇಕಾದ ವಿಚಾರವಾದ್ದರಿಂದ, ಕೊರೋನಾ ಲಾಕ್ಡೌನಿನಲ್ಲಿ ಇದನ್ನು ನೋಡುವುದು ಸಮಯೋಚಿತ ಎಂದು ನನಗೆ ಅನಿಸಿತು.

ಜಾಣ ವೈಜ್ಞಾನಿಕ ಗಂಭೀರ ಚಿತ್ರವನ್ನು ಇಷ್ಟಪಡುವವರಿಗೆ ನಿಮ್ಮಲ್ಲೂ ಇಷ್ಟವಾಗಬಹುದು

ಅಮೆಜ಼ಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನವಿದೆ.ನನ್ನ ರೇಟಿಂಗ್: 4/

5https://www.primevideo.com/…/0JP5…/ref=atv_dp_share_cu_r

Nagesh Kumar C S

Nagesh Kumar C S

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ತೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು, ಕರಾಳ ಗರ್ಭ, ಅಬಲೆಯ ಬಲೆ, ಹಿಮಜಾಲ, ರಹಸ್ಯಾಯನ ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತಿಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ಇವರು ಪ್ರತಿಲಿಪಿ ವೇದಿಕೆಯಲ್ಲಿ 1.5 ಲಕ್ಷ ಓದುಗರನ್ನು ಪಡೆದಿದ್ದಾರೆ. ಚಿತ್ರವಿಮರ್ಶೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಚಿತ್ರರಸಿಕರೂ ಆಗಿ ಹಲವಾರು ಫೇಸ್ ಬುಕ್ ಗ್ರೂಪ್ಸ್ ನಲ್ಲಿ ಸಕ್ರಿಯರಾಗಿದ್ದು.,, ಕನ್ನಡ ಹಿಂದಿ ತಮಿಳು ಇಂಗ್ಲೀಷ್ ಚಿತ್ರವಿಮರ್ಶೆಗಳನ್ನು ಬ್ಲಾಗ್ ನಲ್ಲಿ ನಡೆಸುವುದಲ್ಲದೇ IMDB website ನಲ್ಲಿ ಇಂಗ್ಲೀಶ್ ವಿಮರ್ಶಕರಾಗಿ ಭಾಗಿಯಾಗಿದ್ದಾರೆ

Leave a Reply