ಚಿತ್ರ ರಂಗ ಕಂಡ ಶ್ರೇಷ್ಠ ಪೋಷಕ ನಟ ಎಚ್.ಆರ್.ಶಾಸ್ತ್ರಿ

  ಚಿತ್ರರಂಗ ಕಂಡ ಅತ್ಯುತ್ತಮ ಪೋಷಕ ನಟರಲ್ಲಿ ಎಚ್.ಆರ್.ಶಾಸ್ತ್ರಿ ಒಬ್ಬರಾಗಿದ್ದು ಸಂಗೀತ ಮತ್ತು ಸಾಹಿತ್ಯವೇ ನನ್ನ  ಉಸಿರು ಎಂದು ಜೀವಿಸಿದ ಪುಣ್ಯವಂತರು ಆಗಿದ್ದರು.

     ಎಚ್.ಆರ್.ಶಾಸ್ತ್ರಿ ನವೆಂಬರ್ ೨,೧೯೦೫ ರಂದು ಮೇಲುಕೋಟೆ ಸಮೀಪದ ಹಳೇಬೀಡು ಎಂಬ ಊರಿನಲ್ಲಿ ಜನಿಸಿದ ಇವರು ಪೂರ್ಣ ಹೆಸರು ಎಚ್.ರಾಮಚಂದ್ರ ಶಾಸ್ತ್ರಿ. ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಅತೀವ ಆಸಕ್ತಿಯನ್ನು  ಹೊಂದಿದ್ದ ಇವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದರೂ ಜೀವನ ನಿರ್ವಹಣೆಗೆ ರೈಲ್ವೆ ವರ್ಕ್ ಶಾಪ್ ನಲ್ಲಿ ಕೂಲಿಯಾಗಿ ಕೆಲಸಕ್ಕೆ ಸೇರಿದ್ದರು. ಆದರೆ ಸಾಹಿತ್ಯ ಇವರನ್ನು ಬಿಡಲಿಲ್ಲ. ಕೆಲಸದ ಬಿಡುವಿನ ನಂತರ ತನ್ನ ಸ್ನೇಹಿತರ ಜೊತೆಗೆ ಚಿಕ್ಕ ನಾಟಕಗಳಲ್ಲಿ ಪಾತ್ರವನ್ನು ಮಾಡುತ್ತಿದ್ದರು.

ನಿಸ್ವಾರ್ಥ ಅಭಿನಯದ ಸೆಳೆತ ಇವರನ್ನು ಅಂದಿನ ರಂಗಭೂಮಿಯ ಪ್ರಸಿದ್ಧ ಕಲಾವಿದರಾದ ಎ.ವಿ.ವರದಾಚಾರ್ಯರ ರತ್ನಾವಳಿ ನಾಟಕ ಮಂಡಳಿಯಲ್ಲಿ ಪ್ರವೇಶ ದೊರಕಿತು. ಅಲ್ಲಿಯು ಕೂಡ ಕೆಲವು ನಾಟಕಗಳಲ್ಲಿ ಅಭಿನಯಿಸುವುದರ ಮೂಲಕ ತಮ್ಮ ಕಲಾ ಜೀವನವನ್ನು ಆರಂಭಿಸಿದರು. ಹಲವು ತಿಂಗಳುಗಳ ನಂತರ ರತ್ನಾವಳಿ ನಾಟಕ ಮಂಡಳಿಯನ್ನು ತ್ಯಜಿಸಿ ಭಾರತ ಜನ ಮನೋವಿಲಾಸಿನಿ ಸಭಾ ಮಂಡಳಿ ಮತ್ತು ಪೀರರವರ ನಾಟಕ ಮಂಡಳಿಯನ್ನು ಸೇರಿ ಅನೇಕ ನಾಟಕಗಳಲ್ಲಿ ಕೆಲಸ ಮಾಡಿ ಅಪಾರ ಅನುಭವದೊಂದಿಗೆ ಆರ್.ನಾಗೇಂದ್ರ ರಾಯ್ ನಿರ್ದೇಶನದ ಭಕ್ತ ಅಂಬರೀಷ ಎಂಬ ತಮಿಳು ಚಿತ್ರದಲ್ಲಿ ಪೋಷಕ ನಟನಾಗಿ ಚಿತ್ರರಂಗವನ್ನು ಪ್ರವೇಶಿಸಿದ್ದರು.

ತಮಿಳು ಚಿತ್ರವಲ್ಲದೇ ಕನ್ನಡದಲ್ಲಿ ಗುಬ್ಬಿ ವೀರಣ್ಣ ನಿರ್ದೇಶನದ ಸುಭದ್ರ, ಬೇಡರ ಕಣ್ಣಪ್ಪ,ನಟ ಶೇಖರ ಮತ್ತು ಭಕ್ತಿ ಕನಕದಾಸ ಹಾಗೂ ಕೃಷ್ಣ ಪ್ರೇಮ ಎಂಬ ತೆಲುಗು ಚಿತ್ರದಲ್ಲಿಯೂ ನಟಿಸಿದ್ದರು. ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಇವರ ಅಮೋಘ ಪಾತ್ರದ ನಿರ್ವ‌ಹಣೆಯನ್ನು ಚಿತ್ರ ಪ್ರೇಮಿಗಳು ಮರೆಯಲು ಸಾಧ್ಯವಿಲ್ಲ.

ಸಾಹಿತ್ಯವೇ ನನ್ನ ಉಸಿರು ಎಂದು ಜೀವಿಸಿದ ಎಚ್.ಆರ್.ಶಾಸ್ತ್ರಿಯವರು ಡಿಸೆಂಬರ್ ೧೨,೧೯೭೬ ರಂದು ತಮ್ಮ ೭೧ ನೇ ವಯಸ್ಸಿನಲ್ಲಿ ನಿಧನರಾದರು.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply