ಜನಪ್ರಿಯ ಸಂಗೀತ ನಿರ್ದೇಶಕರು ಮತ್ತು ಗಾಯಕರು ವಿ. ಹರಿಕೃಷ್ಣ

( ಮುಂದುವರೆದ ಭಾಗ )

ಪ್ರಶಸ್ತಿ ಮತ್ತು ಗೌರವದ ಒಂದು ನೋಟ….

❤ಗಾಳಿಪಟ – ಫಿಲ್ಮ್ ಫೇರ್ ಪ್ರಶಸ್ತಿ

💜ರಾಜ್ ದ ಶೋ ಮ್ಯಾನ್- ಫಿಲ್ಮ್ ಫೇರ್ , ಕನಾ೯ಟಕ ರಾಜ್ಯ ಸರ್ಕಾರ ಪ್ರಶಸ್ತಿ,  ಸುವಣ೯ ವಾಹಿನಿ ಪ್ರಶಸ್ತಿ.

💚ಜಾಕಿ – ಫಿಲಂ ಫೇರ್ ಪ್ರಶಸ್ತಿ.

💙ಸಾರಥಿ -ಸುವಣ೯ ವಾಹಿನಿ ಪ್ರಶಸ್ತಿ.

💕ಅಣ್ಣಾ ಬಾಂಡ್ -ಸೈಮಾ ಪ್ರಶಸ್ತಿ.

💝ಅಧ್ಧೂರಿ -ಉದಯ ವಾಹಿನಿ ಪ್ರಶಸ್ತಿ.

💘ಡ್ರಾಮ- ಫಿಲಂ ಫೇರ್ ಪ್ರಶಸ್ತಿ.

💖ಬುಲ್ ಬುಲ್ -ಸೈಮಾ ಪ್ರಶಸ್ತಿ.

👳ಮಿಸ್ಟರ್ ಆಂಡ್ ಮಿಸ್ಸಸ್ ರಾಮಾಚಾರಿ -ಸೈಮಾ ಪ್ರಶಸ್ತಿ.

ತಮ್ಮ 8ನೇ ವಯಸ್ಸಿನಲ್ಲಿ ಕೀಬೋರ್ಡ್ ನುಡಿಸುತ್ತಿದ್ದರು. ಅವರ ತಂದೆ ಇವರ ನುಡಿಸುವುದನ್ನು ನೋಡಿ ತಮ್ಮ ಮಗ ಒಳ್ಳೆ ಸಂಗೀತ ನಿರ್ದೇಶಕರು ಆಗಲಿ ಎಂದು ಬಯಸಿದ್ದರು ಅವರದ್ದು ಒಂದು ಮೆಕ್ಯಾನಿಕ್ ಅಂಗಡಿಯನ್ನು ತಮ್ಮ ತಂದೆಯ ಕಾಲವಾದ ನಂತರ ತಮ್ಮ ಕುಟುಂಬದ ಜವಾಬ್ದಾರಿ ಇವರ ಮೇಲಿತ್ತು ಮನೋರಂಜನ್ ಪ್ರಭಾಕರ್ ರವರ ಜೊತೆ ಕೆಲಸ ಮಾಡಿ ಮೆಕ್ಯಾನಿಕ್ ಅಂಗಡಿಯನ್ನು ನೋಡಿಕೊಂಡು ಜನಪ್ರಿಯ ಸಂಗೀತ ನಿರ್ದೇಶಕರು ಸಾಧು ಕೋಕಿಲ ರವರ ಸಹಾಯದಿಂದ ಸಂಗೀತ ಕ್ಷೇತ್ರಕ್ಕೆ ಬಂದರು.

ಒಂದು ಖಾಸಗಿ ವಾಹಿನಿಯಲ್ಲಿ ಹೇಳಿರುವ ಹಾಗೆ ಇವರಿಗೆ ಸಂಗೀತ ಬಿಟ್ಟು ಬೇರೇನೂ  ಗೊತ್ತಿಲ್ಲ ಕಾರಣ ಕೆಲಸದ ಹಸಿವು ಹಾಗಿತ್ತು ಎಲ್ಲರ ರೀತಿ ಆಟ ಆಡೋದು ಎಲ್ಲವನ್ನೂ ಬಿಟ್ಟು ತಮ್ಮ ಕುಟುಂಬದ ಜವಾಬ್ದಾರಿಯನ್ನು ತಮ್ಮ ಮೇಲಾಕಿಕೊಂಡು ತಮ್ಮಂದಿರ ವಿಧ್ಯಾಭ್ಯಾಸ ಮಾಡೋಕೆ ಇವರು ಮಾಡಿದ ಸಹಾಯ ಅಷ್ಟಿಷ್ಟಲ್ಲ.

ಇವರು ಸಂಗೀತ ಕ್ಷೇತ್ರದಲ್ಲಿ ದಿಗ್ಗಜರಾದ ದಿ. ಜಿ. ಕೆ. ವೆಂಕಟೇಶ್ ರವರ ಮೊಮ್ಮಗಳು ವಾಣಿ ರವರನ್ನು ಮದುವೆಯಾಗಿದ್ದಾರೆ ಇವರು ಕೂಡ ಒಳ್ಳೆಯ ಗಾಯಕಿಯರು ಅವರ ಚಿತ್ರಗಳಲ್ಲಿ ಕೆಲವು ಹಾಡುಗಳನ್ನು ಹಾಡಿದ್ದಾರೆ. ಇವರಿಗೆ ಒಬ್ಬ ಮಗರಿದ್ದಾರೆ (ಆದಿತ್ಯ) ಅವರಿಗೂ ಸಂಗೀತವೆಂದರೆ ತುಂಬಾ ಇಷ್ಟ.  ಹಿನ್ನೆಲೆ ಗಾಯಕರು ಕೂಡ. ಈ ಸಂಗೀತ ಕುಟುಂಬದವರಿಗೆ ಎಲ್ಲವೂ ಒಳ್ಳೆಯದನ್ನು ಮಾಡಲಿ ಎಂಬುದು ನಮ್ಮ ಆಶಯ. ಇವರು “ಡಿ ಬೀಟ್ಸ್ ” ಹೆಸರಲ್ಲಿ ಆಡಿಯೋ ಸಂಸ್ಥೆ ಸ್ಥಾಪಿಸಿದ್ದಾರೆ.

ಇದುವರೆಗೂ 110 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ, ಯಾವುದೇ ಚಿತ್ರಕ್ಕೆ ಕಥೆಗೆ ತಕ್ಕ ಹಾಗೆ ಸಂಗೀತ ನೀಡುವುದು ಇವರ ವೈಶಿಷ್ಟ್ಯ.

ನನ್ನ ಒಂದು ಆಶಯ ಇವರನ್ನು ಒಮ್ಮೆ ಭೇಟಿ ಮಾಡಬೇಕೆಂದು ನೋಡೋಣ ಯಾವಾಗ ಆಗುತ್ತೋ ಕಾಯುತ್ತೇನೆ ಬಹುಶಃ ಹರಿ ಸರ್ ಲೇಖನ ನೋಡಿ ಇಷ್ಟ ಪಟ್ಟರೆ ನಾನು ಬರೆದಿದ್ದಕ್ಕೆ ಸಾಥ೯ಕ ಎನ್ನಿಸುತ್ತಿದೆ.

ನಿಮ್ಮ ಸಂಗೀತ ಪಯಣ ಹೀಗೆ ಮುಂದುವರಿಯಲಿ

ಇಂತಿ ನಿಮ್ಮ ಬಂಧು…..

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply