ಚಿತ್ರದ ಮಧ್ಯದಲ್ಲಿ ಒಂದು ಹೆಣ್ಣನ್ನು ಮೂಢನಂಬಿಕೆಯಿಂದ ಕೊಲ್ಲುವ ಸನ್ನಿವೇಶ, ಪುನೀತ್ ರಾಜ್ ಕುಮಾರ್ ಒಂದು ಹಾಡಿಗೆ ಡ್ಯಾನ್ಸ್ ಮಾಡಿದ ನಂತರ ಒಂದು ಹೆಣ್ಣು ಜೋರಾಗಿ ಕಿರುಚಿಕೊಳ್ಳೋದು ನೋಡಿ ಅಲ್ಲೇ ಇದ್ದ ಕೆಟ್ಟವರೊಡನೆ ಫೈಟ್ ಮಾಡಿ ಆ ಹುಡುಗಿನ ಕಾಪಾಡ್ತಾರೆ, ಆ ಹೆಣ್ಣು ನಾಯಕಿ ಚಿತ್ರ (ಜಾಕಿ). ಭಾವನ ಮೆನನ್, ನಿಜ ಹೆಸರು ಕಾತಿ೯ಕ.ಬಿ , ಜನುಮ
ದಿನದ ಶುಭಾಶಯಗಳು ಮೇಡಂ 💐💜💐💙💐.
ಮಲಯಾಯಳಂ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ ನಟಿ, ಕನ್ನಡ ಹಾಗೂ ತಮಿಳಿನಲ್ಲೂ ನಟಿಸಿದ್ದಾರೆ.
ನೋಡೋಕೆ ಮುದ್ದು ಮುಖದ ಚೆಲುವೆ, ಸೌಂದಯ೯ವತಿ, ಯಾವುದೇ ಪಾತ್ರ ಕೊಟ್ಟರೂ ನಟನೆ ಮಾಡಿ ತೋರಿಸುವ ಚಾಣಾಕ್ಷ ನಟಿ. ಒಳ್ಳೆ ನತ೯ಕಿ ಕೂಡ.
ನಮ್ಮಾಳ್, ತಿಲಕ್ಕಂ, ಇವರ್, ಪರಾಯಂ, ಅಮೃತಂ, ಪೋಲೀಸ್, ಚೆಸ್, ಚೋಟ ಮುಂಬೈ, ಹ್ಯಾಪಿ ಹಸ್ಬಂಡ್ಸ್, ದಿ ಮೆಟ್ರೋ..
ತಮಿಳಿನಲ್ಲಿ ಚಿತ್ತಿರಂ ಪೇಸುದಡಿ, ದೀಪಾವಳಿ, ವೆಯಿಲ್, ರಾಮೇಶ್ವರಂ, ಜಯಂಕೊಂಡೇನ್, ಅಸಲ್.
ತೆಲುಗಿನಲ್ಲಿ ಒಂಟರಿ, ಹೀರೋ, ಮಹಾತ್ಮ, ನಿಪ್ಪು.. ಇನ್ನೂ ಕನ್ನಡದಲ್ಲಿ ಜಾಕಿ (ಪವರ್ ಸ್ಟಾರ್). ವಿಷ್ಣುವಧ೯ನ (ಕಿಚ್ಚ ಸುದೀಪ್). ರೋಮಿಯ್ (ಗಣೇಶ್). ಟೋಪಿವಾಲ (ಉಪೇಂದ್ರ). ಬಚ್ಚನ್ (ಕಿಚ್ಚ ಸುದೀಪ್). ಮೈತ್ರಿ (ಪುನೀತ್ ರಾಜ್ ಕುಮಾರ್). ಮುಕುಂದ ಮುರಾರಿ, ಸ್ಪೆಷಲ್ ಡಾನ್ಸ್, ಚೌಕ ,
ಟಗರು (ಶಿವರಾಜ್ ಕುಮಾರ್). ಯಾರೇ ಕೂಗಾಡಲಿ (ಪುನೀತ್ ರಾಜಕುಮಾರ್). 99 (ಗಣೇಶ್).
ಇನ್ಸ್ಪೆಕ್ಟರ್ ವಿಕ್ರಮ್ (ಪ್ರಜ್ವಲ್ ದೇವರಾಜ್).
💜ನಮ್ಮಾಳ್ ಚಿತ್ರದ ನಟನೆಗೆ ಅತ್ಯುತ್ತಮ ನಟಿ, ಕೇರಳ ಸಕಾ೯ರ ಪ್ರಶಸ್ತಿ.
☘️ದೈವನಮತಿಲ್ ಚಿತ್ರದ ನಟನೆಗೆ ಅತ್ಯುತ್ತಮ 2ನೇ ನಟಿ , ಕೇರಳ ಸಕಾ೯ರದ ಪ್ರಶಸ್ತಿ.
🌳ಚಿತ್ತಿರಂ ಪೇಸುದಡಿ ಅತ್ಯುತ್ತಮ ನಟಿ, ಫಿಲಂ ಫೇರ್ ಪ್ರಶಸ್ತಿ.
🦆ನಮ್ಮಾಳ್ ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಏಶ್ಯಾನೆಟ್ ಸುವಣ೯ ಚಾನೆಲ್ ವತಿಯಿಂದ.
ಯಾವುದೇ ಪಾತ್ರ ಇವರಿಗೆ ಹೇಳಿ ಮಾಡಿಸಿದ ಹಾಗಿದೆ, ಇವರನ್ನು ಕನ್ನಡಕ್ಕೆ ಕರೆತಂದ ಕ್ರೆಡಿಟ್ ಪಾವ೯ತಮ್ಮ ರಾಜ್ ಕುಮಾರ್ ಮತ್ತು ನಿದೇ೯ಶಕ ಸೂರಿ ರವರಿಗೆ ಸಲ್ಲುತ್ತದೆ.
ಭಜರಂಗಿ -2 ಭಾರೀ ನಿರೀಕ್ಷೆಯ ಚಿತ್ರ, ವಿಭಿನ್ನ ಪ್ರಮುಖ ಪಾತ್ರ, ಗೋವಿಂದ ಗೋವಿಂದಾ, ಶ್ರೀ ಕೃಷ್ಣ @ಜಿ ಮೇಲ್. ಕಾಂ ಚಿತ್ರಗಳಿಗೆ ಶುಭವಾಗಲಿ 💐💐.
“ಎರಡೂ ಜಡೆಯನ್ನು ಹಿಡಿದು ಕೇಳುವೆನು, ಸದಾ ನಿನ್ನ ಕಣ್ಣಲಿ ನನ್ನ ಬಿಂಬ ಕಾಣುವೆ, ಎವ್ರಿಬಡೀ ರಾಕ್ ಟು ದ ಬೀಟು, ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವು, ತುತಿ೯ನಲ್ಲಿ ಗೀಚಿದ ಅದ೯ಂಬಧ೯ ಕಾಗದ, ನನ್ನವಳೆ ನನ್ನವಳೆ ಪ್ರೀತಿಸು ಅಂದವಳೆ,
ಕೊನೆ ಮಾತು ಮಲಯಾಳಂ ಭಾಷೆಯಾದರೂ ಮತ್ತೊಂದು ಚಿತ್ರರಂಗದಲ್ಲಿ ನಟಿಸಲು ಬಂದ ಅವಕಾಶ ಸದುಪಯೋಗ ಮಾಡಿಕೊಳ್ಳುವುದು ಒಳ್ಳೆಯ ಕಲಾವಿದೆಯ ಲಕ್ಷಣ, ಇಲ್ಲೂ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ, ಯಾವುದೇ ಗಾಸಿಪ್ ಇಲ್ಲದ ನಟಿ, 2018 ರಲ್ಲಿ ನವೀನ್ ರವರ ಜೊತೆ ವಿವಾಹವಾಗಿ ಸುಖ ಜೀವನ ನಡೆಸುತ್ತಿದ್ದಾರೆ, ಕೆಲವರು ನಟಿ ಮದುವೆಯಾದ ಮೇಲೆ ನಟನೆ ಮಾಡಲು ಒಪ್ಪುವುದಿಲ್ಲ ಆದರೆ ಇವರು ಯಜಮಾನರು ಮದುವೆ ನಂತರವೂ ಚಿತ್ರಗಳಲ್ಲಿ ನಟಿಸಲು ಬಿಟ್ಟಿರುವುದು ಅಭಿಮಾನಿಗಳಿಗೆ ಸಂತಸದ ವಿಷಯ.
ಮತ್ತೆ ಹುಟ್ಟಿದ ಹಬ್ಬದ ಶುಭಾಶಯಗಳು ಭಾವನ ಮೇಡಂ 💐💜💐