ಸಂಗ್ಯಾ ಬಾಳ್ಯ ಈ ನಾಟಕ ಯಾರು ತಾನೆ ನೋಡಿರೋಲ್ಲ, ದೂರದರ್ಶನದಲ್ಲಿ ನಮಗೆ ಮನೋರಂಜನೆ ಸಿಗುತ್ತಿದ್ದ ನಾಟಕ ಅಂದರೆ ಇದು.
ಕಥೆ,ಕವನ,ಕಾದಂಬರಿಗಳ ವಿಶೇಷ ವಿಷಯಗಳನ್ನು ಸಂಗ್ರಹಿಸಿ ಅದನ್ನು ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರು ಮೆಚ್ಚುವ ಹಾಗೆ ತೋರಿಸುವ ಕಲಾತ್ಮಕ ಮತ್ತು ಸೃಜನಶೀಲ ನಿದೇ೯ಶಕರಲ್ಲಿ ನಾಗಾಭರಣರು ಒಬ್ಬರು.
ಮೈಸೂರ ಮಲ್ಲಿಗೆ, ಬ್ಯಾಂಕರ್ ಮಾಗ೯ಯ್ಯ, ರಾಮರಾಜ್ಯ, ಚಿನ್ನಾರಿ ಮುತ್ತ, ಗ್ರಹಣ, ಅನ್ವೇಷಣೆ, ಆಸ್ಪೋಟ, ಸಾಗರ ದೀಪ, ಜನುಮದಾತ, ಸಿಂಗಾರವ್ವ, ಸಂತ ಶಿಶುನಾಳ ಶರೀಫ, ನಾಗಮಂಡಲ,ಕಲ್ಲರಳಿ ಹೂವಾಗಿ, ಚಿಗುರಿದ ಕನಸು, ಜನುಮದ ಜೋಡಿ, ಆಕಸ್ಮಿಕ , ಅಲ್ಲಮ ಇನ್ನೂ ಮುಂತಾದವು ಚಿತ್ರಗಳನ್ನು ನಿದೇ೯ಶಿಸಿದ ರಂಗಭೂಮಿ ಕಲಾವಿದರೂ, ನಿದೇ೯ಶಕರಾದ (ತಲಕಾಡು ಶ್ರೀನಿವಾಸಯ್ಯ ನಾಗಾಭರಣ- ಶ್ರೀ. ಟಿ. ಎಸ್ ನಾಗಾಭರಣ).
ಇವರು ನಿಮಿ೯ಸಿದ ಪ್ರತಿಯೊಂದು ಪಾತ್ರವೂ ವಿಭಿನ್ನವಾದುದು, ಕಲಾವಿದರು ಅಷ್ಟೇ ಇಷ್ಟ ಪಟ್ಟು ಅಭಿನಯಿಸುತ್ತಾರೆ, ಕನ್ನಡ ಭಾಷೆ, ಭಾವಗೀತೆ, ಕಲೆ ಮತ್ತು ಸಂಸ್ಕೃತಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಚಿತ್ರಗಳಲ್ಲಿ ತೋರಿಸಿದ್ದಾರೆ.
‘ಚಿಗುರಿದ ಕನಸು” ಚಿತ್ರವು ಖ್ಯಾತ ಕಾದಂಬರಿಕಾರರಾದ “ಶಿವರಾಂ ಕಾರಾಂತ” ರವರ ಕಾದಂಬರಿ ಆಧಾರಿತ ಚಿತ್ರ, ಒಬ್ಬ ಸಾಮಾನ್ಯ ಯುವಕ “ಬಂಗಾಡಿ “ಎಂಬ ಹಳ್ಳಿಗೆ ಬಂದು ಅಲ್ಲಿಯ ಜನರ ಕಷ್ಟವನ್ನು ಅರಿತು ನೀರಿಗೆ ಪರದಾಡುವ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವ ಚಿತ್ರವೇ ಚಿಗುರಿದ ಕನಸು, ಶಿವಣ್ಣ ರವರು ಪಾತ್ರಕ್ಕೆ ತಕ್ಕ ಹಾಗೆ ನಟನೆ ಮಾಡಿದ್ದಾರೆ.
ಒಂದು ಗಂಡು ಹೆಣ್ಣು ಇಬ್ಬರು ಪ್ರೀತಿ ಮಾಡುವಾಗ ಬಂದ ಸಮಸ್ಯೆಯನ್ನು ಎದುರಿಸಲು ನಾಯಕ ತನ್ನ ಪ್ರೀತಿಯ ತ್ಯಾಗ ಮಾಡುವ ಸಂದರ್ಭ ನಂತರ ಅವರ ನೆನಪಲ್ಲಿ ಉಳಿಯುವುದು ನಾಯಕಿಗೂ ಇಷ್ಟವಿರದೆ ಬಲವಂತವಾಗಿ ಮತ್ತೊಬ್ಬನನ್ನು ಮದುವೆಯಾಗಿ ಅನುಭವಿಸುವ ನೋವು ಕೊನೆಯಲ್ಲಿ ಪ್ರೇಮಿಗಳು ಒಂದಾಗುವುದು ನಿಜವಾದ ಪ್ರೀತಿ ಗೆಲ್ಲುವುದು ಎಂದು ತೋರಿಸಿಕೊಟ್ಟ ಚಿತ್ರ “ಜನುಮದ ಜೋಡಿ ” ಎಲ್ಲಾ ಹಾಡುಗಳೂ ಸೂಪರ್ ಹಿಟ್, ಇಲ್ಲಿ ಹೆಚ್ಚು ಜಾನಪದ ಗೀತೆಗಳಿಗೆ ಒತ್ತು ನೀಡಿದ್ದಾರೆ, ಖುಷಿಯ ವಿಚಾರ ಈ ಚಿತ್ರ ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ವಿಧ್ಯಾಥಿ೯ಗಳಿಗೆ ಒಂದು ಪಾಠವಾಗಿ ಮಾಡಿದ್ದಾರೆ, ನಮ್ಮ ಕನ್ನಡ ಚಿತ್ರ ನಮಗೆ ಹೆಮ್ಮೆ.
“ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣಲ್ ಮೆಟ್ಟಬೇಕು
ಬದುಕಿದು ಜಟಕ ಬಂಡಿ
ಇದು ವಿಧಿಯೋಡಿಸುವಾ ಬಂಡಿ
ಬದುಕಿದು ಜಟಕ ಬಂಡಿ
ವಿಧಿ ಗುರಿತೋರಿಸುವಾ ಬಂಡಿ “
ತ. ರಾ. ಸು ರವರ ಕಾದಂಬರಿ ಆಧಾರಿತ ಚಿತ್ರವೇ “ಆಕಸ್ಮಿಕ ” ಅಣ್ಣಾವ್ರ ನಿಶ್ಟಾವಂತ ಪೋಲೀಸ್ ಅಧಿಕಾರಿ ಪಾತ್ರ, ಮೊದಲನೆ ನಾಯಕಿ “ಗೀತ” ರವರನ್ನು ಖಳನಾಯಕ “ವಜ್ರಮುನಿ ” ರವರಿಂದ ಬಿಡಿಸುವುದು, ಐತಿಹಾಸಿಕ ಗೀತೆ “ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ” ಹಾಡಿನ ಸೃಷ್ಟಿ.
ಮಧ್ಯಂತರದಲ್ಲಿ ಎರಡನೇ ನಾಯಕಿ “ಮಾಧವಿ ” ದುಶ್ಚಟಗಳಿಗೆ ದಾಸಿಯಾಗಿರುವರನ್ನು ,ಪ್ರಿಯಕರನಿಂದ ಮೋಸ ಹೋಗಿರುವರನ್ನು ಸರಿದಾರಿಗೆ ತರಲು ಬುಧ್ಧಿ ಹೇಳುವುದು, ಆಕಸ್ಮಾತಾಗಿ ಆಗುಂಬೆಯ ಗೀತೆಯಲ್ಲಿ ಕಾಲುಜಾರಿ ಮಾಧವಿ ಪ್ರಾಣ ಕಳೆದುಕೊಳ್ಳುವುದು, ಪ್ರತಿಯೊಂದು ಸನ್ನಿವೇಶವನ್ನು ಎಳೆ ಎಳೆಯಾಗಿ ಬಿಡಿಸಿದ ನಿದೇ೯ಶಕರು ಟಿ. ಎಸ್ ನಾಗಾಭರಣ ರವರು.
ಇವರು ನಿದೇ೯ಶನವಲ್ಲದೆ ನಟರಾಗಿ ಸಹ ಅಭಿನಯಿಸಿದ್ದಾರೆ, ಅವುಗಳಲ್ಲಿ ಕೆಲವು ಹೆಸರಿಸುವುದಾದರೆ ಆದಿ ಶಂಕರಾಚಾರ್ಯ,ಆಕ್ಸಿಡೆಂಟ್, ನೀಲ, ಮಿ.ಗರಗಸ, ಕಿರಾತಕ, ಜೈ ಲಲಿತ, ಕೆ. ಜಿ. ಎಫ್ ಚಾಪ್ಟರ್ 1.
ಇವರು ಕನಾ೯ಟಕ ಚಲನಚಿತ್ರ ಅಕಾಡೆಮಿಯ ಛೇರ್ಮನ್ ಆಗಿ ಸೇವೆ ಸಲ್ಲಿಸಿದ್ದಾರೆ, ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಸೇವೆ ಮಾಡುತ್ತಿದ್ದಾರೆ. ಕನ್ನಡ ಕೆಲಸಗಳಿಗೆ ಸದಾ ಮುಂಚೂಣಿಯಲ್ಲಿದ್ದು ಕನ್ನಡ ಭಾಷೆಯ ಅಭಿವೃದ್ಧಿಗೆ ಸಾಕ್ಷಿಯಾಗಿದ್ದಾರೆ ಮತ್ತು “ಕನ್ನಡ ಕಾಯಕ ವಷ೯” ಅನ್ನೋ ಹೊಸ ಯೋಜನೆ ಸೃಷ್ಟಿಸಿ ಎಲ್ಲೆಲ್ಲೂ ಎಲ್ಲರಿಗೂ ಕನ್ನಡ ಭಾಷೆಯಲ್ಲಿ ಬೆಳೆಯುವಲ್ಲಿ ಕಾರಣಕತ೯ರು.
ನಾಗಿಣಿ ರವರ ಜೊತೆ ವಿವಾಹ, ಪನ್ನಗ ಭರಣ , ಮಗಳು ಶೃತಾಭರಣ, ಪನ್ನಗ ರವರು ನಟ ಮತ್ತು ನಿರ್ದೇಶಕ, ನಟರಾಗಿ ವಸುಂಧರ, ನೀನಾದೆ ನಾ, ಮೃಗಶಿರ, ಬದ್ಮಾಶ್, ವಿಶೇಷ ಮೃಗಶಿರ ಚಿತ್ರದ ನಟನೆಗೆ ಅತ್ಯುತ್ತಮ ನಟ ಸೈಮಾ ಪ್ರಶಸ್ತಿ (ಗೆಳೆಯ ಪ್ರಜ್ವಲ್ ದೇವರಾಜ್ ಇವರನ್ನು ಪರಿಚಯಿಸಿದವರು, ಈಗಲೂ ಒಳ್ಳೆಯ ಸ್ನೇಹಿತರು).
ಮಡದಿ ನಿಖಿತ ಒಂದು ಮುದ್ದಾದ ಗಂಡು ಮಗು ಸದಾ ಚೂಟಿ. ತಂದೆಗೂ ಮತ್ತು ತಾತಗೂ ಪೈಪೋಟಿ ಮಾಡ್ಬೋದೇನೋ, ತಾತ ಜೊತೆ ಖುಷಿಯಾಗಿ ಕಾಲ ಕಳೆಯೋ ಕಂದ, ಆ ಮಗು ನೋಡಿದ್ರೆ ಎಂಥವರಿಗೂ ಎತ್ತಿಕೊಂಡು ಮುದ್ದಾಡೋಣ ಅನ್ಸುತ್ತೆ.
ನಿದೇ೯ಶಕರಾಗಿ ಹ್ಯಾಪಿ ನ್ಯೂ ಇಯರ್, ಕಾನೂರಾಯಣ – ಚಿತ್ರಕಥೆ, ಸಹ ನಿದೇ೯ಶಕ, ಫ್ರೆಂಚ್ ಬಿರಿಯಾನಿ, ಮದುವೆ ಇಂಪಾಸಿಬಲ್ -ಹೆಸರಿಡಲಾಗಿದೆ.
ಜನುಮದ ಜೋಡಿ, ಚಿತ್ರಕಥೆ, ನಿದೇ೯ಶಕರ ಟಿಪ್ಪಣಿ ಮತ್ತು ಚಿತ್ರಕನ್ನಡ ವಿವರಗಳೊಂದಿಗೆ ಎಂಬ ಪುಸ್ಯಕಗಳು ನಾಗಾಭರಣ ರವರು ಬರೆದಿರೋದು.
ಇವರ ಚಿತ್ರರಂಗದ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
🌺09 ರಾಷ್ಟ್ರ ಪ್ರಶಸ್ತಿ
🍀14ರಾಜ್ಯ ಪ್ರಶಸ್ತಿ
🍁03 ರಾಷ್ಟ್ರೀಯಭಾವೈಕ್ಯತಾ
ಪ್ರಶಸ್ತಿ.
💐ಗ್ರಹಣ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ.
🌺ಬ್ಯಾಂಕರ್ ಮಾಗ೯ಯ್ಯ ಅತ್ಯುತ್ತಮ ಚಲನಚಿತ್ರ.
🏵ಮೈಸೂರು ಮಲ್ಲಿಗೆ ಅತ್ಯುತ್ತಮ ಚಲನಚಿತ್ರ.
🌻ಚಿನ್ನಾರಿ ಮುತ್ತ ಅತ್ಯುತ್ತಮ ಚಲನಚಿತ್ರ.
🍀ಸಿಂಗಾರವ್ವ ಅತ್ಯುತ್ತಮ ಚಲನಚಿತ್ರ.
🌿ಕಲ್ಲರಳಿ ಹೂವಾಗಿ ಅತ್ಯುತ್ತಮ ಭಾವೈಕ್ಯತೃ ಸಾರುವ ಚಲನಚಿತ್ರ.
ಇಂಥ ಸದಭಿರುಚಿಯ ನಿದೇ೯ಶಕರನ್ನು ಭೇಟಿ ಮಾಡಿದ ದಿನ ಎಂದಿಗೂ ಮರೆಯಲಾಗದು. ನಾನು ಅವರ ಬಗ್ಗೆ ಬರೆದಿರುವ ಲೇಖನ ಅವರಿಗೆ ಓದಿ ತೋರಿಸಿದೆ, ಅವರು ಹೇಳಿದ್ದು ಒಂದು ಮಾತು “ಬರೆಯೋದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ, ನಿಮಗೆ ಶುಭವಾಗಲಿ ಅಂತ ಆಶೀವಾ೯ದ ಮಾಡಿದರು ” ಇದಕ್ಕಿಂತ ಇನ್ನೇನು ಬೇಕು ಹೇಳಿ…
ಇವರ ಮುಂಬರುವ ಚಿತ್ರಗಳಿಗೆ ಆಲ್ ದಿ ಬೆಸ್ಟ್ 🌹