ಜೀವನ ಚೈತ್ರ @ 28 ವಷ೯ಗಳು

ಇನ್ನೂ” ನಾದಮಯ” ಹಾಡು ಮೊಟ್ಟ ಮೊದಲ ಬಾರಿಗೆ ಹರಿದ್ವಾರ ಕೇದಾರನಾಥ ದೇವಾಲಯಗಳನ್ನು ನಮಗೆ ದಶ೯ನ ಮಾಡಿಸಿದ ಹೆಗ್ಗಳಿಕೆ ನಿದೇ೯ಶಕರಾದ ಎಸ್. ಕೆ. ಭಗವಾನ್ ರಿಗೆ ಸಲ್ಲಬೇಕು ರಮಣೀಯವಾಗಿ ಸ್ಥಳಗಳನ್ನು ಚಿತ್ರೀಕರಿಸಿದ್ದಾರೆ ಅಣ್ಣಾವ್ರ ತಾವು ಮಲಗಿದ್ದಾಗ ಮಂಜಿನಹನಿ ಬಿದ್ದು ಕಣ್ಣು ತೆರೆದಾಕ್ಷಣ ನೋಡುವ ಸುಂದರ ಬೆಟ್ಟ ಗುಡ್ಡಗಳ ನಡುವಿನ ದೇವಾಲಯವನ್ನು ಅಲ್ಲಿಯ ಪರಿಸರ ಕಂಡು ಮಗುವಿನಂತೆ ಮೈಮರೆತು ಹಾಡುವ ಸನ್ನಿವೇಶ, ಇಲ್ಲಿ ಟೆನ್ನಿಸ್ ಕೃಷ್ಣ ಅವರ ಮನೆಯಲ್ಲಿ ಕೆಲಸ ಮಾಡುವಾಗ ಚೆನ್ನಾಗಿ ನೋಡಿಕೊಂಡರೂ ಹಣದ ಆಸೆಗೆ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡು ಅಣ್ಣಾವೃ ಅವರನ್ನು ಆಚೆ ಕಳಿಸಿ ಎಲ್ಲಾದರೂ ಬದುಕೊ ಹೋಗು ಎನ್ನುತ್ತಾರೆ, ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಟೆನಿಸ್ ಕೃಷ್ಣ ದೇವಾಲಯದಲ್ಲಿ ಪೂಜಾರಿ ಕೆಲಸ ಮಾಡುವ ಸಂದರ್ಭದಲ್ಲಿ ನಾದಮಯ ಹಾಡಿನ ಸನ್ನಿವೇಶ ನೋಡಿ ಅಣ್ಣಾವ್ರಿಗೆ ಈಗಿರುವ ಮನೆಯ ಸ್ಥಿತಿ ತಿಳಿದು ಅಣ್ಣಾವೃ ಹಿಂತಿರುಗಿ ಮನೆಗೆ ಬರುವರು.

ಮತ್ತೊಂದು ಹಾಡು “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ , ಇರೋದ್ರೊಳ್ಗೆ ಒಮ್ಮೆ ನೋಡು ಜೋಗದ್ ಗುಂಡಿ ” ಇದರಥ೯ ನಾವು ಮನುಷ್ಯನಾಗಿ ಹುಟ್ಟಿದ ಮೇಲೆ ಸಾಯೋದರೊಳಗೆ ಒಮ್ಮೆಯಾದರೂ ಜೋಗದ ಜಲಪಾತ ತಪ್ಪದೇ ನೋಡಬೇಕು.

ಕುಟುಂಬ ಸಮೇತರಾಗಿ ಜೋಗ ಜಲಪಾತ ವೀಕ್ಷಣೆಗೆ ಹೋಗುವುದು ಹಾಡಿ ಕುಣಿಯುವುದು ಮರೆಯಲಾದೀತೆ …

ಇನ್ನೊಂದು ಹಾಡು ಲಕ್ಷ್ಮಿ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ ಬೆಳಗಲು ಮನೆಯನ್ನು ಸಿರಿದೇವಿಯೇ ಅಣ್ಣಾವ್ರ ಮತ್ತು ಮಂಜುಳ ಗುರುರಾಜ್ ರವರ ಕಂಠ ಅಷ್ಟೇ ಹಾಡಿಗೆ ಸ್ಫೂರ್ತಿಯಾಯಿತು

ಈ ಚಿತ್ರದಲ್ಲಿ ದಿಗ್ಗಜ ಕಲಾವಿದರ ದಂಡೇ ಇದೆ “ಮಾಧವಿ ಪಂಡರೀಬಾಯಿ ಕೆ ಎಸ್ ಅಶ್ವಥ್  ತೂಗುದೀಪ ಶ್ರೀನಿವಾಸ್ ಗುರುದತ್ ಬಾಲರಾಜ್ ಟೆನ್ನಿಸ್ ಕ್ರಿಷ್ಣ ಸುಧಾರಾಣಿ “ಎಲ್ಲರೂ ಅಮೋಘವಾಗಿ ಅಭಿನಯಿಸಿದ್ದಾರೆ ಒಂದು ನೋವು ಕಾಡುತಿರುವುದು ಈಗ ಏಕೆ ಈ ರೀತಿ ಚಿತ್ರಗಳು ಬರುತ್ತಿಲ್ಲವೆಂದು ಸಂಗೀತ ಉಪೇಂದ್ರ ಕುಮಾರ್ ಛಾಯಾಗ್ರಹಣ ಎಸ್ ವಿ ಶ್ರೀಕಾಂತ್ ಸಾಹಿತ್ಯ ಚಿ. ಉದಯ್ ಶಂಕರ್  ರವರು .

ಈ ಚಿತ್ರದಲ್ಲಿ ದಿನಾ ಸಾರಾಯಿ ಕುಡಿದು ಹೆಂಡತಿ ಮಕ್ಕಳನ್ನು ಉಪವಾಸ ಕೆಡುವ ಜನರಿಗೆ ಬುಧ್ಧಿಕಲಿಸಲು ಸಾರಾಯಿ ಅಂಗಡಿ ಮುಚ್ಚಿಸುತ್ತಾರೆ, ಹಾಗೆ ಈ ಚಿತ್ರ ಬಿಡುಗಡೆಯಾದ ಮೇಲೆ ಕನಾ೯ಟಕ ರಾಜ್ಯದ 39 ಸಾರಾಯಿ ಅಂಗಡಿ ಮತ್ತು 19 ವೈನ್ ಸ್ಟೋರ್ , 03 ಡಿಸ್ಟಲರಿಗಳು ಮುಚ್ಚಲು ಕಾರಣವಾಯಿತು ಒಂದು ಚಿತ್ರದಿಂದ ಸಾಮಾಜಿಕ ಬೆಳವಣಿಗೆಯ ಮೂಲ ಇದು ಎಂದರೆ ತಪ್ಪಿಲ್ಲ ಇದಲ್ಲವೇ ಬದಲಾವಣೆ ಅಂದರೆ ಅಭಿಮಾನಿಗಳೇ….

ಇಂಥ ಚಿತ್ರಗಳು ಮತ್ತೆ ಬರಲಾರವು ನಾವಿದ್ದ ಕಾಲಘಟ್ಟದಲ್ಲಿ ಬಿಡುಗಡೆಯಾದಾಗ ನೋಡಿ ಖುಷಿ ಪಟ್ಟದ್ದು ನಮ್ಮ ಪುಣ್ಯ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply