ನಾದಮಯ ಈ ಲೋಕವೆಲ್ಲಾ ನಾದಮಯ….. ಈ ಹಾಡನ್ನು ಕೇಳಿದಾಕ್ಷಣ ನೆನಪಿಗೆ ಬರೋದು ನಮ್ಮ ಆರಾಧ್ಯ ದೈವರು ಗಾನ ಗಂಧವ೯ರು ಡಾ ರಾಜ್ ಕುಮಾರ್ ಸರ್ ರವರ ಗಾಯನಕ್ಕೆ “ರಾಷ್ಟ್ರ ಪ್ರಶಸ್ತಿ” ತಂದುಕೊಟ್ಟ ಚಿತ್ರ ಅದುವೇ “ಜೀವನ ಚೈತ್ರ”
ಇಂದು ಈ ಚಿತ್ರ ಬಿಡುಗಡೆಯಾಗಿ 28 ವಷ೯ಗಳು. ಇದು ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಅನ್ನಬಹುದು ಹೇಗೆ ಬಂಗಾರದ ಮನುಷ್ಯ ಚಿತ್ರವು ಅಧ್ಭುತ ದಾಖಲೆ ಬರೆದಿತ್ತೋ ಹಾಗೆ ಈ ಚಿತ್ರವೂ ಕೂಡ ಭಾರಿ ಯಶಸ್ಸನ್ನು ಕಂಡಿತು. ಚಿತ್ರದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಒಂದು ಸಂಸಾರದಲ್ಲಿ ಹೇಗೆಲ್ಲ ಕಷ್ಟಗಳು ಬರುತ್ತವೆ ಅದನ್ನು ಹೇಗೆ ಎದುರಿಸಬೇಕು ಎಂದು ತುಂಬಾ ಚೆನ್ನಾಗಿ ತೋರಿಸಿದ್ದಾರೆ ಅಣ್ಣಾವ್ರ ನಟನೆಯನ್ನು ವಣಿ೯ಸೋಕೆ ಪದಗಳೇ ಸಾಲೋಲ್ಲ ಅವರ ಉಡುಗೆ ತೊಡುಗೆಗಳು ನೋಡುಗರ ಕಣ್ಣು ಕುಕ್ಕಿಸಿದ್ದಂತೂ ನಿಜ ಸಾರಾಯಿ ಅಂಗಡಿ ತಮ್ಮೂರಿನಲ್ಲಿ ಇರೋದನ್ನ ಜನಗಳು ಕೇಳಿಕೊಂಡ ಕ್ಷಣ ಅವರು ಅದನ್ನು ಹೇಗೆ ತೆಗೆಸುತ್ತಾರೆ ನ್ಯಾಯ ರೀತಿಯಿಂದ ಬದುಕುವುದು ಹೇಗೆ ಅನ್ನೋದನ್ನು ತುಂಬಾ ಚೆನ್ನಾಗಿ ನಟನೆ ಮಾಡಿ ತೋರಿಸಿದ್ದಾರೆ ಶಿಸ್ತು ಬಧ್ಧಿನಿಂದ ಮಕ್ಕಳನ್ನು ಬೆಳೆಸಿದ ಮೇಲೆ ತಮ್ಮ ಹೆಂಡತಿಯನ್ನು ಕಳೆದುಕೊಂಡು ಪಡುವ ವನವಾಸ ಅಷ್ಟಿಷ್ಟಲ್ಲ ತಾವು ತೀಥ೯ಯಾತ್ರೆಗೆ ಹೋದಾಗ ಆಕಸ್ಮಿಕವಾಗಿ ಬಸ್ ದುರಂತದಲ್ಲಿ ತೀರೋಗಿತಾ೯ರೆ ಅಂತ ನಂಬಿ ಮಕ್ಕಳು ತಮ್ಮಿಷ್ಟಕ್ಕೆ ತಕ್ಕ ಹಾಗೆ ಮಜಾ ಮಾಡುತ್ತಿರುವಾಗ ಅವರು ಬಂದು ಮಾತನಾಡುವ ಸನ್ನಿವೇಶ ನಿಜಕ್ಕೂ ಮೈ ನವಿರೇಳಿಸುತ್ತದೆ.
ಅವರ ಚಿತ್ರ ಸಂಭಾಷಣೆ “ಗುರುದತ್ ಅಣ್ಣಾವ್ರನ್ನ ನೋಡಿ ಅಪ್ಪ ನಾನಪ್ಪ ಪ್ರತಾಪ ಅಂತ ಹೇಳಿದಾಗ ಅಣ್ಣಾವ್ರ ಉತ್ತರ ಪ್ರತಾಪ ಪ್ರಕಾಶ ನರಹರಿ ಯಾರ್ ಮಕ್ಳನ್ನ ..
ಅಣ್ಣಾವೃ “ಮೀನಾಕ್ಷಿ ಮೀನಾಕ್ಷಿ ಎಂಥಾ ಮಕ್ಕಳಿಗೆ ಜನ್ಮ ಕೊಟ್ಟೆ ಒಂದೊಂದು ಒಂದು ಮುತ್ತು ಕಣೆ , ತಪಸ್ಸು ಮಾಡಿ ಪಡಿಬೇಕು ಇಂಥ ಮಕ್ಕಳನ್ನ, ನಿನಗ್ ಅದೃಷ್ಟ ಇಲ್ಲ, ಕಣ್ಮುಚ್ಕೊಬುಟ್ಟೆ ,ಇವತ್ತು ನೀನಿರ್ಬೇಕಾಗಿತ್ತು, ಇವತ್ ನೀನ್ ಬದ್ಕಿರ್ಬೇಕಾಗಿತ್ತು ಈ ದೃಶ್ಯನ ಕಣ್ಣಿಂದ ನೋಡ್ಬೇಕಾಗಿತ್ತು, ನಿನ್ ಜನ್ಮ ಪಾವನವಾಗ್ಹೋಗ್ತಿತ್ತು, ಯಾವ್ ಮನೇಲಿ ನಿತ್ಯ ಮಂತ್ರ ಘೋಷ ಕೇಳ್ತಾಯಿತೊ, ಯಾವ್ ಮನೆಲಿ ಜಪ ತಪ ಘಂಟಾನಾದಗಳು ಮೊಳುಗ್ತಾಯ್ತೊ ಆ ಮನೆಲಿವತ್ತು ಕುಡುಕರ ಕುಣ್ತ, ಕುಡುಕರ ವೈಭವ, ಕುಡುಕರ ಸಮಾರಾಧನೆ ಸಾಥ೯ಕವಾಯ್ತು, ಸಾಥ೯ಕವಾಯ್ತು,ಥೂ..ಥೂ ನಿಮ್ ಜನ್ಮಕಿಷ್ಟು ಬೆಂಕಿಹಾಕ…
ಮತ್ತು ತನ್ನ ತಾಯಿಯನ್ನು ಹೊರಗಿಟ್ಟಿರೋದನ್ನ ಗಮನಿಸಿ ಕೆಂಡಾಮಂಡಲವಾಗೊ ದ್ರುಶ್ಯವಂತೂ ಮರೆಯೋದಕ್ಕೆ ಸಾಧ್ಯವಿಲ್ಲ.
( ಮುಂದುವರೆಯುವುದು )