ಜೀವನ ತರಂಗ

ಕಪ್ಪು ಬಿಳುಪು ಪಾತ್ರಗಳ ಕಥೆಗಳ ಸಿನಿಮಾಗಳ ಸರಮಾಲೆಯಲ್ಲಿ ಇದೊಂದು.
ಡಿಕ್ಕಿ ಮಾಧವರಾವ್ ಹಳ್ಳಿಯಲ್ಲಿ ಗೌರವದಿಂದ ಬಾಳುವಾತ. ಆತನ ಹೆಂಡತಿ ಜಯಶ್ರೀ. ಅವರಿಬ್ಬರ ಮಗಳು ಹದಿನೈದರ ಬಾಲೆ (ಚಂದ್ರಕಲಾ). ಡಿಕ್ಕಿಯ ತಮ್ಮ ಕೆ. ಎಸ್ ಅಶ್ವತ್ಥ್ ಪಟ್ಟಣದಲ್ಲಿ ಡಾಕ್ಟರು. ಆತನ ಹೆಂಡತಿ ಆದವಾನಿ ಲಕ್ಷ್ಮೀದೇವಿ (ಈ ಮಹಾತಾಯಿ ಹೆಚ್ಚು ಸೌಮ್ಯ ಪಾತ್ರಗಳನ್ನು ವಹಿಸಿದಾಕೆ. ಇದರಲ್ಲಿ ಮನೆ ಮುರಿಯುವ ಮಂಥರಾ ಪಾತ್ರ). ಆ ಮನೆಯ ಮೂರನೇ ಮಗ ಕುಮಾರ್ (ರಾಜ್‍ಕುಮಾರ್). ಇವರ ಮುದ್ದು ತಂಗಿ ಜ್ಯೂ. ರೇವತಿ. ಇವಳಿಗೆ ತಾಳಿ ಕಟ್ಟಿ ಅಪ್ಪನ ಭಯಕ್ಕೆ ಅವಳನ್ನು ಬಿಟ್ಟು ಹೋಗುವ ರಾಜಾಶಂಕರ್ ನಂತರ ಜಮೀನುದಾರ ಎಂಬ ಸೋಗುಹಾಕಿ ಸುಮತಿಯ(ಲೀಲಾವತಿ) ಮೇಲೆ ಕಣ್ಣು ಹಾಕುತ್ತಾನೆ. ಈಕೆ ಕುಮಾರ್ ಪ್ರೇಮಿ. ಈಕೆಯ ತಂದೆಯ ಬಳಿ ಕುಮಾರ್ ಇಂಜಿನಿಯರ್.

ಆದವಾನಿ ಲಕ್ಷ್ಮೀದೇವಿಯಿಂದಾಗಿ ಮನೆ ಛಿದ್ರಗೊಂಡು ದಿಕ್ಕಾಪಾಲಾಗುತ್ತಾರೆ ಎಲ್ಲರೂ. ಬಾಲಕೃಷ್ಣ ಆ್ಯಸ್ ಯೂಶುವಲ್ ಮನೆ ಮುರುಕ ನಂಬರ್ ಟೂ. ರಮಾದೇವಿ ಮತ್ತು ನರಸಿಂಹರಾಜು ಇದ್ದಾರೆ.

ಚಂದ್ರಕಲಾ ಜೀವನ ತರಂಗದಲ್ಲಿ ರಾಜ್‌ಗೆ ಅಣ್ಣನ ಮಗಳಾಗಿ, ರೌಡಿ ರಂಗಣ್ಣದಲ್ಲಿ ತಂಗಿಯಾಗಿ, ಮಾರ್ಗದರ್ಶಿಯಲ್ಲಿ ಪ್ರೇಯಸಿ – ಪತ್ನಿಯಾಗಿ ಬೆಳೆದ ನಟಿ.
ಅಣ್ಣಾವ್ರು ಪ್ರೇಮ ವಾತ್ಸಲ್ಯ ಕ್ರೋಧ ಹೀಗೆ ಅನೇಕ ರಸ ಪ್ರದರ್ಶನ ಮಾಡಿರುವ 1963ರ ಈ ಚಿತ್ರದಲ್ಲಿ ಹಾಡುಗಳು ‘ಮನದೆ ಮುನಿದೆ’ ರಾಜ್ ಲೀಲಾ ಡ್ಯೂಯೆಟ್… ‘ಆನಂದ ತುಂಬಿ ತಂದೆ’ ಕೃಷ್ಣ ರಾಧಾ ನೃತ್ಯ… ರಾಜಾಶಂಕರ್ ಹಾಡುವ ‘ಬಂತು ನವಜೀವನ’  ಮುಂತಾದವು.

ಲೇಖಕರು: ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply