“ಜೋಗುಳ ” ಹಾಡಿದ ಗಾಯಕಿ ನಂದಿತ

ಆಕಾಶಕ್ಕೆ ಒಬ್ಬ ಸೂಯ೯ ಕಣೊ ಈ ಭೂಮಿಗೆ ಒಬ್ಬ ಚಂದ್ರ ಕಣೊ ಎಷ್ಟು ಮಧುರವಾಗಿದೆ ಅಲ್ವ ಕೇಳೋಕೆ ಈ ಹಾಡು ಹಾಡಿದವರು “ನಂದಿತ ” ಎಲ್ಲೋ ಹೆಸರು ಕೇಳಿತೀ೯ರಾ ಜೋಗುಳ ಚಿತ್ರದಲ್ಲಿ ಈ ಹಾಡಿದೆ.

ಕನ್ನಡ ಚಿತ್ರರಂಗದಲ್ಲಿ ಇವರನ್ನು ಅತ್ಯುತ್ತಮ ಹಿನ್ನೆಲೆ ಗಾಯಕಿ ಅಂತ ಕರಿತಾರೆ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಹ ಹಾಡಿದ್ದಾರೆ.

ಇವರು ಆರ್. ವಿ . ಕಾಲೇಜ್ ಇಂಜಿನಿಯರಿಂಗ್ ನಲ್ಲಿ ಬಿಇ ಪದವೀಧರರು, ಸಾಫ್ಟ್‌ವೇರ್ ಇಂಜಿನಯರ್, ಮೊದಲು ಇವರು ಖಾಸಗಿ ಸಂಸ್ಥೆಯಾದ ಸಿಸ್ಕೋ ಸಿಸ್ಟಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು, ಮೊದಲಿನಿಂದಲೂ ಇವರಿಗೆ ಸಂಗೀತದ ಕಡೆ ಒಲವು ಹೆಚ್ಚು, ವೀಣಾವಾದಕರು ಆಗಿ ವೀಣಾ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ, ಹೆಸರಾಂತ ಸಂಗೀತ ನಿರ್ದೇಶಕರು ಹಂಸಲೇಖ ರವರ ಹತ್ತಿರ ಸಂಗೀತ ಕಲಿತದ್ದು ಮುಂದೆ ಅವರೇ ಇವರನ್ನು ಚಿತ್ರರಂಗದಲ್ಲಿ ಹಾಡೋದಕ್ಕೆ ಅವಕಾಶ ನೀಡಿದರು “ಹಬ್ಬ ” ಚಿತ್ರದ ಮೂಲಕ.  ಈ ಚಿತ್ರಕ್ಕೆ ಟ್ರಾಕ್ ಗಾಯಕರಾಗಿ ಪರಿಚಿತರಾದರು.

ನಂದಿತ ರವರು ಹಲವು ದಿಗ್ಗಜ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ ಇಳಯರಾಜ, ಮನೋಮೂತಿ೯,ವಿ ಮನೋಹರ್, ರಾಜೇಶ್ ರಾಮನಾಥ್ ಮತ್ತಿತರರು.

ಚಿತ್ರಗೀತೆಯಲ್ಲದೆ ಹಿಂದೂಸ್ಥಾನಿ ಸಂಗೀತ ಮತ್ತು ಸುಗಮ ಸಂಗೀತವನ್ನು ಹಾಡಿರೋದು ಗಮನಾರ್ಹ.

ಮೊಟ್ಟ ಮೊದಲ ಬಾರಿಗೆ ಕಂಠದಾನ ಕಲಾವಿದರಾಗಿ ನನ್ನ ಪ್ರೀತಿಯ ಹುಡುಗಿ (ದೀಪ) ನಟಿಗೆ ಮತ್ತು ಪ್ಯಾರಿಸ್ ಪ್ರಣಯ (ಮಿನಾಲ್ ಪಟೇಲ್) ರವರಿಗೆ ಧ್ವನಿ ನೀಡಿದ್ದಾರೆ.

ಒಂದು ಹೆಣ್ಣು ನೋಡಿದಾಗ ಕೈ ಎತ್ತಿ ಮುಗಿಬೇಕು ಅನ್ಸುತ್ತೆ ಗಾಯಕಿ ನಂದಿತ ರನ್ನು ನೋಡಿ, ಅವರು ಕಲಿತ ನಯ, ವಿನಯ ,ಹಲವು ಮಹಿಳೆಯರು ಕಲಿಯಬೇಕು, ಇನ್ನೂ ಸ್ವಲ್ಪ ಹೊತ್ತು ಅವರ ಜೊತೆ ಮಾತನಾಡಬೇಕು ಅನ್ಸುತ್ತೆ,

ಹಲವಾರು ಹಿಟ್ ಗೀತೆಗಳನ್ನು ನಾವು ಕಾಣಬಹುದು

ಮೂಡಲ್ ಕುಣ್ಗಲ್ ಕೆರೆ ನನ್ನ ಪ್ರೀತಿಯ ಹುಡುಗಿ ಚಿತ್ರದು,ಎದೆ ತುಂಬಿ ಹಾಡಿದೆನು ಪ್ಯಾರಿಸ್ ಪ್ರಣಯ, ಮೊದ ಮೊದಲು ಭುವಿಗಿಳಿದ ಯಶ್ವಂತ್ ಚಿತ್ರದು, ಸಿಹಿ ಗಾಳಿ ಸಿಹಿ ಗಾಳಿ ಆ ದಿನಗಳು ಚಿತ್ರದು, ಹೂಕನಸ ಜೊಕಾಲಿ ಇಂತಿ ನಿನ್ನ ಪ್ರೀತಿಯ ಚಿತ್ರದು, ಸುಮ್ ಸುಮ್ನೆ ಯಾಕೋ ಗೂಳಿ ಚಿತ್ರದು, ಬಂಗಾರ ತೆನೆ ತೆನೆ ಚಿಗುರಿದ ಕನಸು ಚಿತ್ರದು, ನೀನು ಬಂದ ಮೇಲೆ ತಾನೆ  ಕೃಷ್ಣ ಚಿತ್ರದು, ಕರಿಯಾ ಐ ಲವ್ ಯೂ ದುನಿಯಾ ಚಿತ್ರದು ಮತ್ತು ಇನ್ನು ಹಲವು…

ನಂದಿತ ರವರು ರಾಕೇಶ್ ರವರ ಜೊತೆ ಮದುವೆಯಾಗಿ ಮುದ್ದಾದ ಮಗುವಿನೊಂದಿಗೆ ನೆಮ್ಮದಿಯ ಬದುಕು ಜೀವಿಸುತ್ತಿದ್ದಾರೆ.

ಕರಿಯಾ ಐ ಲವ್ ಯೂ ಗೀತೆ ಎಷ್ಟು ಜನಪ್ರಿಯತೆ ಪಡೆದಿತ್ತು ಅಂದರೆ ಪ್ರತಿಯೊಬ್ಬರ ಮೊಬೈಲ್ ಫೋನ್ ಕಾಲರ್ ಟ್ಯೂನ್ ಆಗಿತ್ತು. ಈ ಹಾಡಿಗೆ ಅಷ್ಟೇ ಜೀವ ತುಂಬಿದ್ದರು.

ಇವರ ಗಾಯನ ಯಶಸ್ಸಿಗೆ ಹಲವು ಪ್ರಶಸ್ತಿಗಳು ಲಭಿಸಿವೆ.

🦜ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ “ಎದೆ ತುಂಬಿ ಹಾಡಿದೆನು” ಗೀತೆಯ ಪ್ಯಾರಿಸ್ ಪ್ರಣಯ ಚಿತ್ರಕ್ಕೆ ರಾಜ್ಯ ಸಕಾ೯ರ ವತಿಯಿಂದ .

🦋ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ “ಆಕಾಶಕ್ಕೆ ಒಬ್ಬ ಸೂಯ೯” ಗೀತೆಯ ಜೋಗುಳ ಚಿತ್ರಕ್ಕೆ ರಾಜ್ಯ ಸರಕಾರದಿಂದ.

🦚ಕರಿಯಾ ಐ ಲವ್ ಯೂ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಫಿಲಂ ಫೇರ್ ಪ್ರಶಸ್ತಿ.

🐅ಉದಯ ಸಿನಿ ಪ್ರಶಸ್ತಿ ಕರಿಯಾ ಐ ಲವ್ ಯೂ ಹಾಡಿಗೆ ಲಭಿಸಿವೆ.

🦁ಸುವಣ೯ ಸಿನಿ ಪ್ರಶಸ್ತಿ ದುನಿಯಾ ಚಿತ್ರದ ಕರಿಯಾ ಐ ಲವ್ ಯೂ ಹಾಡಿಗೆ.

🐈ಕಲಾ ಪ್ರಶಸ್ತಿ “ಮೆಚ್ಚಿನ ಗಾಯಕಿ ” ನೀಡಿದ್ದಾರೆ.

ಕನಾ೯ಟಕದಲ್ಲಿ ಮನೆಮಾತಾದ ಮುದ್ದುಮೊಗದ ಗಾಯಕಿಯನ್ನು ತೀಪು೯ಗಾರರಾಗಿ ವಾಹಿನಿಯವರು ಏಕೆ ಕರೆಯಬಾರದು, ಇವರಿಗೆ ತೀಪು೯ಗಾರರಾಗಿ ನಡೆಸಿಕೊಡುವ ಅಹ೯ತೆ ಬಹಳಷ್ಟಿದೆ, ಕೆಲವರು ಕೆಲಸಕ್ಕೆ ಬಾರದವರು ಸಂಗೀತ ಘಂದ ಇರದವರು ಹೆಸರಿಗೆ ಮಾತ್ರ ತೀಪು೯ಗಾರರಾಗಿ ನಡೆಸಿಕೊಡೋದು ಎಷ್ಟು ಸರಿ….

ಇವರ ಮಾಧುರ್ಯ ಪ್ರಧಾನವಾದ ಗಾಯನ ಮತ್ತು ಸಂಗೀತ ಸೇವೆ ನಡೆಯುತಲಿರಲಿ ಎನ್ನುವುದು ನಮ್ಮ ಕೋರಿಕೆ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

One thought on ““ಜೋಗುಳ ” ಹಾಡಿದ ಗಾಯಕಿ ನಂದಿತ

  1. ಆತ್ಮೀಯ ಮಿತ್ರರೇ ರಾಜ್ ವಂಶ ಅಭಿಮಾನಿ ದೇವರು ಯುವ ಬರಹ ಗಾರರು ನಿಮಗೆ ಧನ್ಯವಾದಗಳು ನಿಮ್ಮ ಪ್ರತಿಯೊಂದು ಸಂಚಿಕೆ ತುಂಬಾ ವಿನೂತನ ಶೈಲಿ ಇಂದ ಕೊಡಿದೆ ನಂದಿತಾ ಕನ್ನಡ ಚಿತ್ರ ರಂಗದ ಕನ್ನಡ ನಾಡಿನ ಹೆಮ್ಮೆಯ ನಮ್ಮ ಕನ್ನಡ ಮಣ್ಣಿನ ಮಗಳು ನಂದಿತಾ ಚಲನಚಿತ್ರ ಭಾವಗೀತೆ ಮತ್ತು ಭಕ್ತಿ ಗೀತೆ ಹಾಡುಗಳನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ ಒಳ್ಳೆಯ ಅದ್ಭುತ ಗೀತೆ ಅದ್ಭುತ ಹಿನ್ನಲೆ ಗಾಯಕಿ ಅವರ ಬಗ್ಗೆ ಬಹಳ ಚೆನ್ನಾಗಿ ಸೊಗಸಾಗಿ ಲೇಖನ ಬರೆದ ತಮಗೆ ಕೋಟಿ ಧನ್ಯವಾದಗಳು ನಮಸ್ಕಾರ ಸರ್ ಜೈ ರಾಜವಂಶ

Leave a Reply