ಇಂದು ಸ್ಯಾಂಡಲ್ ವುಡ್ನ್ ಸಿನಿ ಪ್ರಿಯರಿಗೆ ಖುಷಿ ತರುವ ಎರಡು ಸಂತಸದ ಸುದ್ದಿ ಹೊರ ಬಂದಿದೆ.
ಮೊದಲನೆಯದು ಚಾಲೆಂಜಿಂಗ್ ಸ್ಟಾರ ದರ್ಶನ್ ಅಭಿನಯದ,ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾದ ಚಿತ್ರೀಕರಣ ಇಂದಿಗೆ ಪೂರ್ಣಗೊಂಡಿದೆ. ಸ್ವತಃ ದರ್ಶನ್ ಅವರೇ ಚಿತ್ರ ತಂಡದ ಜೊತೆಗೆ ಸೆಲ್ಫ್ ಒಂದನ್ನು ತೆಗೆದು ಪೋಸ್ಟ್ ಮಾಡಿದ್ದಾರೆ. ಚಿತ್ರದ ಹಾಡೊಂದಕ್ಕೆ ಸ್ಪೇನ್ ದೇಶಕ್ಕೆ ತೆರಳ ಬೇಕಿತ್ತು ಆದರೇ ಎಲ್ಲೆಡೆ ಕೊರಾನ್ ಸೋಂಕಿನ ಭೀತಿ ಇರುವ ಸಲುವಾಗಿ, ಕರ್ನಾಟಕದಲ್ಲೇ ಹಾಡಿನ ಚಿತ್ರೀಕರಣ ಮುಗಿಸಿದ್ದಾರೆ.ಮತ್ತೊಂದೆಡೆ ಚಿತ್ರದ ಡಬ್ಬಿಂಗ್ ಮತ್ತು ತಾಂತ್ರಿಕ ಕೆಲಸ ಭರದಿಂದ ಸಾಗುತ್ತಿದ್ದು“ಮೆ” ತಿಂಗಳಲ್ಲಿ ಚಿತ್ರ ಜನರ ಮುಂದೆ ಬರಲಿದೆ.
ಭಾರತದಾದ್ಯಂತ ಸಂಚಲನ ಸೃಷ್ಟಿಸಿದ “ಕನ್ನಡದ ಮಕುಟ” ಕೆ.ಜಿ.ಫ್(K.G.F) ಚಿತ್ರದ ಮುಂದುವರಿದ ಭಾಗ KGF-2ನ ಬಿಡುಗಡೆಯ ದಿನಾಂಕ ಪ್ರಕಟ ವಾಗಿದೆ. ಭಾಗ ಒಂದು ಎಷ್ಟು ಖ್ಯಾತಿ ಪಡೆದಿತ್ತೋ,ಭಾಗ 2 ಯಾವಾಗ ಬಿಡುಗಡೆಯಾಗಲಿದೆ ಎಂಬ ಕಾತುರ ಅಷ್ಟೇ ಇತ್ತು, ಆ ಕುತೂಹಲಕ್ಕೆ ಚಿತ್ರ ಇವತ್ತು ತೆರೆ ಎಳೆದಿದ್ದಾರೆ. ಇದೇ 2020ರ ಅಕ್ಟೋಬರನ 23ನೆ ತಾರಿಕಿನಂದು 5 ಭಾಷೆಯಲ್ಲಿ- (ಕನ್ನಡ,ಹಿಂದಿ ತಮಿಳು,ತೆಲುಗು ಮತ್ತು ಮಲಯಾಳಂ) ಏಕಕಾಲಕ್ಕೆ ವಿಶ್ವದಾದ್ಯಂತ “ರಾಕಿ ಭಾಯ್” ನ ಅಬ್ಬರ ಶುರುವಾಗುತ್ತೆ.
ಪ್ರಶಾಂತ್ ನೀಲ್ ಮತ್ತೆ ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗಷ್ಟೇ ಒಂದು ಮಾತು ಹೇಳಿದ್ದಾರೆ , ಭಾಗ 2 ರಲ್ಲಿ ಆಕ್ಷನ್, ಫೈಟ್ಸ್, ಸನ್ನಿವೇಶಗಳಲ್ಲಿ ತಿರುವುಗಳು ಮತ್ತು ರಾಕಿಯ ದರ್ಬಾರ್ ಎಲ್ಲವೂ ಮೊದಲ ಭಾಗಕ್ಕಿಂತ ದುಪ್ಪಟ್ಟಾಗಿದೆ ಡಬ್ಬಲ್ ಧಮಾಕಾ ಅಂತ ಹೇಳಿದ್ದಾರೆ ಅದು ಪ್ರೇಕ್ಷಕರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಿದೆ.