ಜ್ವಾಲಾಮುಖಿ

ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ಈ 1985ರ ಚಿತ್ರದ ನಾಯಕಿ ಗಾಯತ್ರಿಯ ಪಾತ್ರವು ಮಿಸ್ಟೀರಿಯಸ್.
ಶಂತನುವನ್ನು ಮದುವೆ ಆಗುವಾಗ ಗಂಗೆ ಹಾಕಿದಂತಹ ಷರತ್ತು.
ಅಣ್ಣಾವ್ರು ಒನ್ ಲೈನರ್ಸ್ ಅದ್ಭುತವಾಗಿ ಹೇಳಿದ್ದಾರೆ. ಉದಾಹರಣೆಗೆ ತೇಜಸ್ವಿನಿ (ಗಾಯತ್ರಿ – ಬಿ. ಜಯಶ್ರೀ ಧ್ವನಿಯೊಂದಿಗೆ) ಈವತ್ತು ನಮ್ಮ ತಾಯಿ (ಲೀಲಾವತಿ) ಹತ್ರ ಮಾತಾಡ್ದೆ ಎಂದರೆ ಜಯಸಿಂಹ(ರಾಜ್ಕುನಮಾರ್) ಇಷ್ಟು ದಿನ ಮಾತು ಬಿಟ್ಟಿದ್ರಾ ಎಂದಾಗ ನಮಗೆ ನಗು ಸಹಜವಾಗಿ ಬರುತ್ತದೆ.


ಮೇಷ್ಟರಾಗಿದ್ದ ಜಯಸಿಂಹ ಗಲಾಟೆ ಮಾಡಿದ ವಿದ್ಯಾರ್ಥಿಗೆ ಹೊಡೆದಾಗ ಆ ಕಾಲೇಜಿನ ಕೆಲಸಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ರಾಮರಾಜ್ಯ ಪೇಪರಿನಲ್ಲಿ ಪತ್ರಕರ್ತ ಆಗಲು ಜಯಸಿಂಹ ಪಾಡು ಪಟ್ಟು ಮಟ್ಕಾ ಕಿಂಗ್ ರತನ್ ಲಾಲ್‌ನನ್ನು (ತೂಗುದೀಪ ಶ್ರೀನಿವಾಸ್) ಹೊಡೆದು ಅವನ ಗೆಳೆತನ ಸಂಪಾದಿಸುತ್ತಾನೆ. ಮೈಸೂರಿಗೆ ಹೋದಾಗ ತೇಜಸ್ವಿನಿಯನ್ನು ಪ್ರೇಮಿಸಿ ಮದುವೆ ಆಗುತ್ತಾನೆ. ಅವಳೊಂದಿಗೆ ಏಕೋ ಏನೋ ಈ ನನ್ನ ಮನವು (ರಾಜ್ಕುದಮಾರ್ ಬೆಂಗಳೂರು ಲತಾ) ಹಾಡಿದ ನಂತರ ಮದುವೆ ಆಗುತ್ತದೆ.

ಎಲ್ಲೋ ಒಂದು ಕಡೆ ತೇಜಸ್ವಿನಿಯನ್ನು ಕಣ್ಣಾರೆ ಕಂಡರೂ ಆಕೆ ಅದು ತಾನಲ್ಲ ಎಂದಾಗ ಹೇಳುವುದು ಒಂದೂ ಮಾಡುವುದು ಇನ್ನೊಂದು ಹಾಡು ಇಬ್ಬರೂ ಹಾಡುತ್ತಾರೆ (ರಾಜ್ಕು ಮಾರ್ ಬೆಂಗಳೂರು ಲತಾ). ಜಯಸಿಂಹನ ತಾಯಿ ಆದವಾನಿ ಲಕ್ಷ್ಮಿದೇವಿ ನೋಡಿ ನಗುತ್ತಾಳೆ. ಮುಖ್ಯಮಂತ್ರಿ ಚಂದ್ರು ನಗೆಮೊಗದ ವಿಲನ್ ಆಗಿರುವ ಈ ಚಿತ್ರದ ಕಥೆ ಪೊಲೀಸ್ ಅಧಿಕಾರಿ ವಿಜಯಾ ಸಾಸನೂರ. ರಂಗರಾವ್ ಸಂಗೀತ ನಿರ್ದೇಶನ. ನೋಡಿ ನೋಡಿ ಎಲ್ಲಾ ನೋಡಿ ಮತ್ತೊಂದು ಅಣ್ಣಾವ್ರ ಗೀತೆ. ಇನ್ನೊಂದು ಗೀತೆ ಬಾಳೇ ಪ್ರೇಮ ಗೀತೆ ಅಣ್ಣಾವ್ರು ಹಾಡಿರೋದು ತೆರೆ ಮೆರೆ ಸಪನೇ ಅಬ್ ಏಕ್ ರಂಗ್ ಹೈ ನೆನಪು ತಂದಿತು.
ಶನಿ ಮಹದೇವಪ್ಪ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಸದಾಶಿವ ಬ್ರಹ್ಮಾವರ ನಾನು ಗುರುತಿಸಿದ ಕೆಲವರು. ದಿವಂಗತ ಮೈಸೂರು ಲೋಕೇಶ್ ಡಿಫೆನ್ಸ್ ವಕೀಲನಾಗಿ ಸಖತ್ ಆ್ಯಕ್ಟಿಂಗ್.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply