ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ಕಾರಣದಿಂದ ಅದೆಷ್ಟೋ ಸಂಸಾರಗಳು ಬೀದಿಗೆ ಬಂದಿವೆ. ಲಾಕ್ ಡೌನ್ ನ ಪರಿಣಾಮದಿಂದಾಗಿ ವ್ಯಾಪಾರ, ವ್ಯವಹಾರಗಳಿಗ್ ಎದೊಡ್ಡ ಹೊಡೆತವೇ ಬಿದ್ದಿದೆ. ಅದರಲ್ಲೂ ವಿಶೇಷವಾಗಿ ವೃದ್ಧರ ಸ್ಥಿತಿಯಂತೂ ಇನ್ನೂ ದುಸ್ತರವಾಗಿದೆ. ಇದನ್ನು ಮನಗಂಡ ಹಾಲಿ ಯೋಧರು, ಮಾಜಿ ಯೋಧರು ಮತ್ತು ಯೋಧರ ಅಭಿಮಾನಿಗಳಿಂದ ಕೂಡಿದ ತಂಡವಾದ “ಟೀಮ್ ಯೋಧ ನಮನ” ದ ವತಿಯಿಂದ ಜೂನ್ 2 ರ ಬುಧವಾರ ಯಲಹಂಕ ಪ್ರದೇಶದಲ್ಲಿ ಜೀವನ ನಡೆಸಲು ಕಷ್ಟಪಡುತ್ತಿರುವ ಐವತ್ತು ಜನ ಬಡ ವೃದ್ಧರನ್ನು ಗುರುತಿಸಿ, ಅವರಿಗೆ ತಂಡದ ವತಿಯಿಂದ ಆಹಾರದ ಕಿಟ್ಟುಗಳನ್ನು ವಿತರಿಸಲಾಯಿತು. ತಂಡದ ಸದಸ್ಯರು ತಾವೇ ತಮ್ಮ ಕೈಲಾದಷ್ಟು ಹಣವನ್ನು ಹಾಕಿ ಈ ಕಿಟ್ಟುಗಳ ವ್ಯವಸ್ಥೆಯನ್ನು ಮಾಡಿದ್ದರು. ಇವರಿಗೆ ಸಹಾಯ ಮಾಡುವಂತೆ ಭಾರತದ ಗಡಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ಯೋಧರಿಂದ ಕೂಡ ಸಹಾಯ ಹರಿದು ಬಂದಿದ್ದು ವಿಶೇಷ. ಕೇವಲ ವೃದ್ಧರಿಗಷ್ಟೇ ಅಲ್ಲದೆ ಎರಡು ಅನಾಥಾಲಯಗಳಿಗೂ ಕೂಡ ಕಿಟ್ ಅನ್ನು ವಿತರಿಸಲಾಯಿತು. ಅಕ್ಕಿ,ಬೇಳೆ,ಅಡುಗೆ ಎಣ್ಣೆ ಸೇರಿದಂತೆ ಅತ್ಯಾವಶ್ಯಕ ದಿನಸಿ ಪದಾರ್ಥಗಳು, ತರಕಾರಿಗಳು, ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಒಳಗೊಂಡ ಈ ಕಿಟ್ ಅನ್ನು ಯೋಧ ನಮನದ ಮಾಜಿ ಯೋಧ ಜಯರಾಮ್, ನಿಖಿಲ್ ಗೌಡ, ದಾಮೋದರ್, ಪ್ಲಟೂನ್ ಕಮಾಂಡರ್ ರವೀಂದ್ರ ಆರ್.ಎನ್, ಗೃಹರಕ್ಷಕದಳದ ಅಧಿಕಾರಿ ಡಾ.ನಾಗರಾಜ್, ನರೇಶ್, ಬಾಬು ಪ್ರಸಾದ್, ಜಮುನಾ ಸೇರಿದಂತೆ ತಂಡದ ಸದಸ್ಯರು ಸಂಗ್ರಹಿಸಿ ಅಗತ್ಯವಿದ್ದ ಜನರ ಮನೆ ಮನೆಗೆ ತೆರಳಿ ವಿತರಿಸಿದರು.
ಟೀಮ್ ಯೋಧ ನಮನ ತಂಡದ ಈ ಮಹತ್ಕಾರ್ಯಕ್ಕೆ ಚಿತ್ರೋದ್ಯಮ.ಕಾಮ್ ತಂಡದಿಂದ ಒಂದು ನಮನ.