ಹೌದು… ಇಲ್ಲಿ ಹೆದರಿಕೊಳ್ಳುವ ಹಾಗಿಲ್ಲ. ಯಾಕೆ….? ಯಾಕೆ ಹೆದರಿಕೊಳ್ಳಬಾರದು…? ಹೆದರಿಕೊಳ್ಳದೇ ಇರಲು ಕಾರಣವೇನು…? ಎನ್ನುವುದು ಸಿನೆಮಾದ ಕಡೆಯಲ್ಲಿ ನಮಗೆ ಗೊತ್ತಾಗುತ್ತದೆ. ಅಲ್ಲಿಯವರೆಗೂ ಕುತೂಹಲ ಮತ್ತು ಭಯದಿಂದ ಸಿನೆಮಾ ನೋಡಬೇಕು.
ಈ ಸಿನೆಮಾದಲ್ಲಿ ಒಟ್ಟು ಆರು ಕಥೆಗಳಿವೆ.
ಆ ಆರೂ ಕಥೆಗಳು ಒಂದಕ್ಕೊಂದು ಸಂಬಂಧ ಹೊಂದಿಲ್ಲವಾದರೂ, ಕಥೆ ಹೇಳುವವರು ಪರಸ್ಪರ ಸಂಬಂಧ ಹೊಂದಿದವರಾಗಿರುತ್ತಾರೆ. ಕಾಡಿನ ಮಧ್ಯೆ ಅದೂ ಮಧ್ಯರಾತ್ರಿಯಲ್ಲಿ ಅವರ ಕಾರ್ ಕೆಟ್ಟು ಹೋದಾಗ ಬೇಸರ ಕಳೆಯಲು ಒಬ್ಬೊಬ್ಬರು ಒಂದೊಂದು ದೆವ್ವದ ಕಥೆ ಹೇಳಬೇಕು ಅಂತ ಒಪ್ಪಂದ ಮಾಡಿಕೊಳ್ಳುತ್ತಾರೆ.
ಅದರಂತೆ ಒಬ್ಬರಿಗಿಂತಾ ಒಬ್ಬರು ವಿಭಿನ್ನವಾದ ದೆವ್ವದ ಕಥೆಗಳನ್ನು ಹೇಳುತ್ತಾರೆ. ಅವರ ಈ ಕಥೆಗಳಲ್ಲಿ ಹಿಂದಿಯ ಹೆಸರಾಂತ ನಟ-ನಟಿಯರೆಲ್ಲಾ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ, ಸೈಫ್ ಅಲಿ ಖಾನ್, ಅಂತರಾ ಮಾಲಿ, ರೇವತಿ, ಸಂಜಯ್ ಕಪೂರ್, ನಾನಾ ಪಾಟೇಕರ್, ವಿವೇಕ್ ಒಬೆರಾಯ್, ಇಶಾ ಕೊಪ್ಪಿಕರ್, ಅಫ್ತಬ್ ಮೊದಲಾದವರೆಲ್ಲಾ ಈ ಆರೂ ಕಥೆಗಳಿಗೆ ಜೀವ ತುಂಬಿದ್ದಾರೆ.
ಆರೂ ಭಯಾನಕ ಕಥೆಗಳು ಒಂದಕ್ಕಿಂತ ಒಂದು ಭಯಂಕರವಾಗಿದ್ದು ನಮ್ಮ ಭಯವನ್ನು ಹೆಚ್ಚಿಸುತ್ತವೆ. ಆದರೆ ಹೆದರುವಂತಿಲ್ಲ ಅಂತ ಮೊದಲೇ ಹೇಳಲಾಗಿದೆ. ಹಾಗಾಗಿ ಹೆದರದೇ ಸಿನೆಮಾ ಕೊನೆಯ ದೃಶ್ಯದವರೆಗೂ ಹೇಗೋ ಸಾಗುತ್ತೇವೆ. ಏಕೆಂದರೆ ಈ ಕಥೆಗಳು ಎಷ್ಟು ಅಷ್ಟೇ ಕತೂಹಲವನ್ನೂ ಸಹ ಹುಟ್ಟಿಸುತ್ತಿರುತ್ತವೆ.
ಆದರೆ ಕ್ಲೈಮ್ಯಾಕ್ಸಿನಲ್ಲಿ ನಮಗೆ ಷಾಕ್ ಆಗುವುದು ಗ್ಯಾರಂಟಿ…….!!!!
ಅಂತಹಾ “ಟ್ವಿಸ್ಟ್” ಬಹುಶಃ ಅಲ್ಲಿಯವರೆಗೂ ಯಾರೂ ನೀಡಿರಲಿಲ್ಲ. ಹಾಗಾಗಿ ಈ ಸಿನೆಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿತು. ಪ್ರೇಕ್ಷಕರು ಇದನ್ನು ಮುಕ್ತವಾಗಿ ಒಪ್ಪಿಕೊಂಡರು. ಹಾಂ…. ಭಯವಿಲ್ಲದೇ ಸ್ವೀಕರಿಸಿದರು.