ಡಾಕ್ಟರ್ ಕಮ್ ಸಿಂಗರ್ – ಶಮಿತಾ ಮಲ್ನಾಡ್

( ಮುಂದುವರೆದ ಭಾಗ )

“ಸ್ವರ ಸನ್ನಿಧಿ ಟ್ರಸ್ಟ್ ” ಸಂಸ್ಥೆಯ ನಿಮಾ೯ತೃ, ಈಗಿನ ಪೀಳಿಗೆಯ ಗಾಯಕರಿಗೆ, ನೃತ್ಯಗಾರರಿಗೆ, ಮತ್ತು ಸಂಗೀತ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಉತ್ತಮ ವೇದಿಕೆ ನಿಮಾ೯ಣ ಮಾಡಿರೋದು ಶ್ಲಾಘನೀಯ ಅಂದ ಹಾಗೆ ಇವರು ನೃತ್ಯ ಕೂಡ ಕಲಿತಿದ್ದಾರೆ . ಈ ಟ್ರಸ್ಟ್ನಲ್ಲಿ  ವೈದ್ಯಕೀಯ ಮತ್ತು ದಂತ ಶಿಬಿರ ವಿಶೇಷವಾಗಿ ಅಂಗವಿಕಲ ಮಕ್ಕಳಿಗೆ ಸಹಾಯ ಮಾಡುವುದು. “ಸ್ವರ ಸನ್ನಿಧಿ ಸಂಗೀತ ಶಾಲೆ ” ಸ್ಥಾಪಿಸಿ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ.

ಇವರು ಹಾಡಿರುವ ಚಿತ್ರಗಳು ಹಲವಾರು ಅವುಗಳಲ್ಲಿ ಕೆಲವು ನೋಡೋದಾದರೆ :

ಕರಿಯ, ಗೋಕಣ೯,ಕುಟುಂಬ ,ಲಾಲಿ ಹಾಡು , ಪಾಥ೯,ರಂಗ ಎಸ್ ಎಸ್ ಎಲ್ ಸಿ , ರಾಮ ಶಾಮ ಭಾಮ , ಚೆಲ್ಲಾಟ, ಗಜ, ಅಜು೯ನ್, ಜುಗಾರಿ, ಚೆಲುವೆಯೇ ನಿನ್ನೆ ನೋಡಲು, ಕೆಂಪೇಗೌಡ, ಸೂಪರ್, ಆಪ್ತರಕ್ಷಕ, ಮೈಲಾರಿ, ಸಾರಥಿ, ಜರಾಸಂಧ, ಮುದ್ದು ಮನಸೆ, ರಾಂಬೊ 2 ಹೀಗೆ ಪಟ್ಟಿ ಹೋಗುವುದು.

ಗಜ ಚಿತ್ರದ “ಐತಲಕಡಿ.. ಜಲಜಲಜಲಜಾಕ್ಷಿ” ಶಂಕರ್ ಮಹದೇವನ್ ಜೊತೆ ಹಾಡಿದ ಟಪಾಂಗುಚ್ಚಿ ಹಾಡು ಭಾರೀ ಜನಪ್ರಿಯ ಗೀತೆ ಅನ್ನಿಸಿದೆ. ಕೇಳುಗರೇ ಈ ಹಾಡಿಗೆ ಕುಣಿಯಬೇಕು ಅಂತ ಅನ್ನಿಸಿದ್ದು ನಿಜ.

“ರಾಮ ಶಾಮ ಭಾಮ” ಚಿತ್ರದ “ಗುರುಕಿರಣ್” ಜೊತೆ ಹಾಡಿದ “ಜೋಪಾನ ರಾತ್ರಿಯಾಯ್ತು ” ಉತ್ತರ ಕನ್ನಡ ಶೈಲಿಯ ಗೀತೆ.

“ಚೆಲ್ಲಾಟ” ಚಿತ್ರದ “ಅಲೆಲೆ ತುಂಟು ಕಣ್ಣ ಸುಂದರ” ಹಾಡು ಜನಪ್ರಿಯತೆ ಗಳಿಸಿದೆ.

ಸಾರಥಿ ಚಿತ್ರದ “ಕಿಟ್ಟಪ್ಪ ಕಿಟ್ಟಪ್ಪ ನಿನ್ ಫ್ಲೂಟು ಎಲ್ಲಪ್ಪ ಹಾಡು ಕೂಡ.

ಇವರು ಹೆಸರಾಂತ ಗಾಯಕರ ಜೊತೆ ಹಾಡಿದ್ದಾರೆ ಡಾ ಎಸ್ ಪಿ ಬಾಲಸುಬ್ರಹ್ಮಣ್ಯಂ, ಹೇಮಂತ್, ಉದಿತ್ ನಾರಾಯಣ್, ಸುದೀಪ್, ರಾಜೇಶ್ ಕೃಷ್ಣನ್ ಮುಂತಾದವರ ಜೊತೆ ಹಾಡಿದ್ದಾರೆ.

ಅರುಣ್ ಕುಮಾರ್ ಡಿ ಕೆ ರವರೊಂದಿಗೆ ಮದುವೆಯಾಗಿ ಇಬ್ಬರು ಮಕ್ಕಳು ಒಂದು ಗಂಡು ಮತ್ತು ಇನ್ನೊಂದು ಹೆಣ್ಣು.

🎭ಮಧುರ ಪಿಸು ಮಾತಿಗೇ ಗೀತೆಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಫಿಲಂ ಫೇರ್ 2009 ರಲ್ಲಿ ನೀಡಲಾಗಿದೆ.

🎸ಮತ್ತೆ ಇದೇ ಹಾಡಿಗೆ ಸುವಣ೯ ಫಿಲಂ ಪ್ರಶಸ್ತಿ ಲಭಿಸಿದೆ.

🌹ಮತ್ತೊಮ್ಮೆ ಈ ಹಾಡಿಗೆ ಸೌತ್ ಸ್ಕೋಪ್ ಸಿನಿಮಾ ಪ್ರಶಸ್ತಿ ನೀಡಿದ್ದಾರೆ.

👑ಬೆಕ್ಕು ಚಿತ್ರದ “ತಳಮಳದ ಮಳೆಯಲ್ಲಿ ” ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಎಂದು ಗುರುತಿಸಿ ಕರ್ನಾಟಕ ರಾಜ್ಯ ಸಕಾ೯ರ ಪ್ರಶಸ್ತಿ ನೀಡಿದೆ.

🥳ಉತ್ತರ ಕನ್ನಡ ಶೈಲಿಯಲ್ಲಿ ಹಾಡಿದ ಮತ್ತೊಂದು ಗೀತೆ “ಚುಟು ಚುಟು ಅನ್ತೈತೆ ” ಎಷ್ಟು ಜನಪ್ರಿಯತೆ ಗಳಿಸಿದೆ ಯಾರ ಬಾಯಲ್ಲೂ ಗುನುಗಿರೋ ಹಾಡು ವಿಶಿಷ್ಟ ಸಾಹಿತ್ಯ ಎಲ್ಲರೂ ಇಷ್ಟಪಡುವ ಹಾಗಿತ್ತು ಮತ್ತು ಈ ಹಾಡಿನ ವಿಡಿಯೋ ವೀಕ್ಷಣೆ 100 ಮಿಲಿಯನ್ ಆಗಿದ್ದು ದಾಖಲೆ. ಶರಣ್ ಮತ್ತು ಆಶಿಕಾ ರಂಗನಾಥ್ ನಟಿಸಿದ ಚಿತ್ರ “ರಾಂಬೊ 2”. ಅಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲಿ ಟಾಪ್ 25 ರ ಪಟ್ಟಿಯಲ್ಲಿ ಈ ಹಾಡು ಇರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ.

ಇಂಥ ಅಮೋಘ ಗಾಯಕಿ ಭೇಟಿ ಮಾಡುವ ಸೌಭಾಗ್ಯ ಒಂದು ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರು ಸಮಾರಂಭಕ್ಕೆ ಬಂದಾಗ ಮಾತನಾಡಿಸಿದೆ, ಚೆನ್ನಾಗಿ ಮಾತನಾಡಿದರು ತುಂಬಾ ಖುಷಿಯಾಯ್ತು, ಕೆಲವರಿಗೆ ಸ್ವಲ್ಪ ಜನಪ್ರಿಯ ಬಂದರೆ ಯಾರ ಜೊತೆಗೂ ಅಷ್ಟಾಗಿ ಮಾತಾಡೋಕೆ ಇಷ್ಟ ಪಡಲ್ಲ ಆದರೆ ಇವರು ಹಾಗಲ್ಲ, ಅಭಿಮಾನಿಗಳಿಗೆ ಗೌರವ ನೀಡುವ ಒಳ್ಳೆಯ ಗುಣ ಇವರದು.

ಇವರ ಮುಂಬರುವ ಎಲ್ಲಾ ಹಾಡುಗಳೂ ಸೂಪರ್ ಹಿಟ್ ಆಗಲಿ ಮತ್ತೆ ದಾಖಲೆ ಮಾಡಿರುವ ರೀತಿ ಇನ್ನೂ ದೊಡ್ಡ ಹೆಸರು ಮಾಡಲಿ ಅಂತ ಹೇಳಿ ನನ್ನ ಈ ಸಣ್ಣ ಲೇಖನ ಮುಗಿಸುವೆ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply