ಡಾ ರಾಜ್ ಪ್ರಶಸ್ತಿಗಳ ಒಂದು ನೋಟ

ಒಂಭತ್ತು ಬಾರಿ ಅತ್ಯತ್ತಮ ನಟ ರಾಜ್ಯ ಪ್ರಶಸ್ತಿ ಪಡೆದ ಏಕೈಕ ನಟ ಡಾ: ರಾಜ್

 ಡಾ: ರಾಜ್ ಕುಮಾರ್ ಕನ್ನಡ ಚಿತ್ರ ಜಗತ್ತಿನಲ್ಲಿ ತಮ್ಮ ಅಭಿನಯ ಸಾಮರ್ಥ್ಯದಿಂದ ಒಂಭತ್ತು ಬಾರಿ ಅತ್ಯತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದ ಏಕೈಕ ನಟ.

7) ದೇವತಾ ಮನುಷ್ಯ ಚಿತ್ರಕ್ಕೆ ಏಳನೇ ಬಾರಿ : ಡಾ: ರಾಜ್ ರವರು 200 ನೇ ಚಿತ್ರ ದೇವತಾ ಮನುಷ್ಯ ಚಿತ್ರದ ಮನೋಜ್ಞ ಅಭಿನಯಕ್ಕಾಗಿ 1988-89 ನೇ ಸಾಲಿನ ರಾಜ್ಯ ಸರಕಾರದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಏಳನೆ ಬಾರಿಗೆ ಅಭಿನಯಕ್ಕಾಗಿ ಪಡೆದುಕೊಂಡರು.

8) ಜೀವನ ಚೈತ್ರ ಚಿತ್ರಕ್ಕೆ ಎಂಟನೆ ಬಾರಿ : ಎರಡು ವರ್ಷಗಳ ನಂತರ ಚಿತ್ರಜೀವನದಿಂದ ದೂರ ಉಳಿದಿದ್ದ ಡಾ: ರಾಜ್ ರವರು 1992 ರಲ್ಲಿ ಅಭಿಮಾನಿಗಳ ಒತ್ತಾಯಕ್ಕೆ ಪುನ: ಚಿತ್ರಗಳಲ್ಲಿ ನಟಿಸಲು ಒಪ್ಪಿ, ಅಭಿನಯಿಸಿದ ಚಿತ್ರ ಜೀವನ ಚೈತ್ರ. 1992-93 ನೇ ಸಾಲಿನ ರಾಜ್ಯ ಸರಕಾರದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಜೀವನ ಚೈತ್ರ ಚಿತ್ರದ ಅಭಿನಯಕ್ಕಾಗಿ ಎಂಟನೆ ಬಾರಿಗೆ ಪಡೆದುಕೊಂಡರು.

9) ಆಕಸ್ಮಿಕ ಚಿತ್ರಕ್ಕೆ ಒಂಭತ್ತನೆ ಬಾರಿ : 1993-94 ನೇ ಸಾಲಿನಲ್ಲಿ ಬಿಡುಗಡೆಯಾದ ಡಾ: ರಾಜ್ ರವರು ತಮ್ಮ ಆಕಸ್ಮಿಕ ಚಿತ್ರದ ಅಭಿನಯಕ್ಕಾಗಿ ರಾಜ್ಯ ಸರಕಾರದಿಂದ ಅತ್ಯುತ್ತಮ ನಟ ಪ್ರಶಸ್ತಿನ್ನು ಒಂಭತ್ತನೆ ಬಾರಿಗೆ ಪ್ರಶಸ್ತಿಯನ್ನು ಪಡೆದುಕೊಂಡರು.

10) ಕೇಂದ್ರ ಪ್ರಶಸ್ತಿಗಳು : ಡಾ: ರಾಜ್ ಕುಮಾರ್ ಅಭಿನಯದ ಹಲವಾರು ಚಿತ್ರಗಳು ಕೇಂದ್ರ ಸರಕಾರದ ಪ್ರಶಸ್ತಿಗೂ ಭಾಜನರಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಗೌರವ ತಂದಿದ್ದಾರೆ. ಕೇಂದ್ರ ಸರಕಾರದ ಅರ್ಹತಾ ಪತ್ರವನ್ನು ಪಡೆದ ಮೊದಲಿಗರು ಎಂಬ ಹೆಗ್ಗಳಿಕೆ ರಾಜ್ ಕುಮಾರ್ ರವರದು. 1959-ಜಗಜ್ಯೋತಿ ಬಸವೇಶ್ವರ, 1960-ಭಕ್ತ ಕನಕದಾಸ, 1961- ಕಿತ್ತೂರು ಚೆನ್ನಮ್ಮ, 1962-ನಂದಾದೀಪ ಚಿತ್ರಗಳು ಸತತವಾಗಿ ಪ್ರತಿವರ್ಷವೂ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಅರ್ಹತಾ ಪತ್ರವನ್ನು ಪಡೆದುಕೊಂಡವು.

11) ರಾಷ್ಟ್ರಪತಿಗಳ ಪದಕ : 1963 ರಲ್ಲಿ ಸಂತ ತುಕಾರಾಂ, 1964 ರಲ್ಲಿ ಚಂದವಳ್ಳಿಯ ತೋಟ, 1965 ರಲ್ಲಿ ಸತ್ಯ ಹರಿಶ್ಚಂದ್ರ ಹೀಗೆ ಸತತ ಮೂರು ವರ್ಷ ರಾಷ್ಟ್ರಪತಿಗಳ ಬೆಳ್ಳಿ ಪದಕ ಪಡೆದ ರಾಜ್ ಅಭಿಯನದ ಚಿತ್ರಗಳಾಗಿವೆ.

12) ಕೇಂದ್ರ ಸರಕಾರದಿಂದ ಗಾಯನಕ್ಕೆ ಪ್ರಶಸ್ತಿ : ಕನ್ನಡ ಚಿತ್ರರಂಗಕ್ಕೆ ಇದೊಂದು ಬಹುಮುಖ್ಯವಾದ ವಿಷಯ. ಡಾ: ರಾಜ್ ಕುಮಾರ್ ರವರು 1992 ರಲ್ಲಿ ಜೀವನ ಚೈತ್ರದ ನಾದಮಯ ಈ ಲೋಕವೆಲ್ಲಾ…. ಗಾಯನಕ್ಕಾಗಿ ಕೇಂದ್ರ ಸರಕಾರ ಶ್ರೇಷ್ಠ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕನ್ನಡದಲ್ಲಿ ಈ ಹಿಂದೆ ಶಿವಮೊಗ್ಗ ಸುಬ್ಬಣ್ಣ ರವರು ಕಾಡು ಕುದುರೆ ಚಿತ್ರಕ್ಕೆ ಶ್ರೇಷ್ಠ ಗಾಯಕ ಪ್ರಶಸ್ತಿ ಪಡೆದಿದ್ದು, ಡಾ: ರಾಜ್ ಕುಮಾರ್ ಎರಡನೆಯವರು.

13) ರಾಜ್ಯೋತ್ಸವ ಪ್ರಶಸ್ತಿ : ಕರ್ನಾಟಕ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪ್ರತಿಷ್ಠಿತರನ್ನು ಗೌರವಿಸುವ ಪರಿಪಾಠ ಆರಂಭಿಸಿದ ನಂತರ ಮೊದಲ ಬಾರಿಗೆ 1070 ರಲ್ಲಿ ಮೊದಲಿಗೆ ಬಿ.ಆರ್. ಪಂತಲು ಅವರನ್ನು ಚಿತ್ರರಂಗದಿಂದ ಆಯ್ಕೆ ಮಾಡಿ ಗೌರವಿಸಲಾಯಿತು. ನಂತರ 1973 ರಲ್ಲಿ ಡಾ: ರಾಜ್ ಕುಮಾರ್ ರವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು.

14) ಚಲನಚಿತ್ರ ರಂಗದಲ್ಲಿ ಕಲಾವಿದರಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ ರಾಜ್ ಕುಮಾರ್ ರವರು 1976 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆಯುವ ಮೂಲಕ ಇಂತಹ ಗೌರವಕ್ಕೆ ಪಾತ್ರರಾದ ಚಿತ್ರರಂಗದ ಮೊದಲಿಗರಾದರು.

15) ಕೆಂಟಕಿ ಕರ್ನಲ್ ಪ್ರಶಸ್ತಿ : ಡಾ: ರಾಜ್ ಕುಮಾರ್ ಅವರಿಗೆ ಸಂದ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಕೆಂಟಕಿ ಕರ್ನಲ್ ಅಮೇರಿಕಾದ ಕೆಂಟಕಿ ಪ್ರಾಂತ್ಯದ ಆಡಳಿತ ಕೊಡ ಮಾಡುವ ಅತ್ಯಂತ ಶ್ರೇಷ್ಠ ಪ್ರಶಸ್ತಿಯಿದು. 1982 ರಲ್ಲಿ ರಾಜ್ ರವರಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಯಿತು. ಈ ಪ್ರಶಸ್ತಿಯನ್ನು ಈ ಹಿಂದೆ ಅಮೇರಿಕಾ ಅದ್ಯಕ್ಷ ಲಿಂಡನ್ ಜಾನ್ಸನ್, ಬ್ರಿಟನ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ರಂಥ ಜಾಗತಿಕ ಗಣ್ಯರು ಪಡೆದಿದ್ದರು. ರಾಜ್ ಕೂಡ ಅವರ ಸಾಲಿಗೆ ಸೇರಿದ್ದು ಕನ್ನಡಿಗರ ಹಿರಿಮೆಗೆ ಹಿಡಿದ ಕನ್ನಡಿಯಾಗಿತ್ತು.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply