ಡಾ.ವಿಷ್ಣುವರ್ಧನರ ಆ 15 ನಿಮಿಷ ಪಾತ್ರಕ್ಕೆ ದೊಡ್ಡ ಮಹತ್ವವಿತ್ತು.

1997ರಲ್ಲಿ ಕಮಲ ಹಾಸನ್ ನಿರ್ದೇಶಿಸಿ,ನಿರ್ಮಿಸಿ,ನಟಿಸಿದ “ಮರುದನಾಯಗನ್”  ಸೆಟ್ಟೆರಿತ್ತು.ಇಡೀ ದೇಶವೇ ಮೆಚ್ಚಿದ ನಟ ನೂರಾರು ಸೂಪರ್ ಹಿಟ್ ಸಿನಿಮಾ ನೀಡಿದ್ದರೂ ಕಮಲ ಹಾಸನ್ರ ಪಾಲಿಗೆ, ಈ ಒಂದು ಚಿತ್ರ “ಮರುದನಾಯಗನ್” ಬಹಳ ವಿಶೇಷ ಮತ್ತು ಕನಸಿನ ಸಿನಿಮಾವಾಗಿತ್ತು.ಅದ್ದೂರಿ ವೆಚ್ಚದ,ಬಹು ತಾರಾಂಗಣದ,ಬೃಹತ್ ಭವ್ಯ ಕಲಾ ಸಾಮ್ರಾಜ್ಯವನ್ನು ಪರಿಚಯಿಸಲು ಸಿದ್ದರಾಗಿದ್ದರು.

ಸಿನಿಮಾದ ಮುಹೂರ್ತಕ್ಕೆ ಅಂದಿನ ತಮಿಳ್ನಾಡಿನ ಮುಖ್ಯಮಂತ್ರಿಗಳಾಗಿದ್ದ ಕುರಣಾನಿಧಿ, ನಟ ಶಿವಾಜಿ ಗಣೇಶನ್, ರಜನಿಕಾಂತ್ ಜೊತೆಗೆ ಬ್ರಿಟನ್ ದೇಶದ ಮಾಹಾರಾಣಿ ಎಲಿಜಿಬೆತ್ ಉಪಸ್ಥಿತಿ ಕೂಡ ಇತ್ತು.

ಇಂತಹ ಅದ್ಭುತ ಕಥಾವಸ್ತು ಮತ್ತು ಅದ್ಭುತ ಕಲಾವಿದರು ಒಟ್ಟಿಗೆ ಸೇರುತ್ತಿರುವ ಸಿನಿಮಾವನ್ನು ಹರಿಸಲು ಸ್ವಯಂ ಪ್ರೇರಿತವಾಗಿ ಕ್ವೀನ್ ಎಲಿಜಿಬೆತ್ ಇಂಗ್ಲೆಂಡಿನಿಂದ ಮದ್ರಾಸ್ಗೆ ಬಂದಿದ್ದರು

ಆ ಸಿನಿಮಾಗೆ ನಾಯಕಿಯಾಗಿ, ಕಮಲ್ಗೆ ಜೋಡಿಯಾಗಿ ಟೈಟಾನಿಕ್ಕಿನ ಚೆಲುವೆ “ಕ್ಯೆಟ್ ವಿನ್ಸ್ಲೇಟ್” ಬರಲು ಸಿದ್ಧವಾಗಿದ್ದರು.

ಅವರುಗಳ ಜೊತೆಗೆ ಹಮಮಾಲಿನಿ,ನಾಸರ್,ರೇಖಾ ಕೂಡ ಇದ್ದರು. ಕನ್ನಡಿಗರ ಪಾಲಿಗೆ ವಿಶೇಷವೆಂದರೆ ಈ ಅದ್ದೂರಿ ಸಿನಿಮಾದಲ್ಲಿ ನಮ್ಮ ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಬಹು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.

ಯುಸುಫ್ ಖಾನ್ ಅನ್ನೋದು ಅವರ ಪಾತ್ರದ ಹೆಸರಾಗಿತ್ತು.ಚಿತ್ರದಲ್ಲಿ ಅವರೊಬ್ಬ ಮುಘಲ್ ದೊರೆ, ಸಂಕಷ್ಟದಲ್ಲಿ ಸಿಲುಕಿದ್ದ ನಾಯಕನಿಗೆ ಸಹಾಯ ಹಸ್ತ ಚಾಚುವ ಸಹೃದಯಿ ಪಾತ್ರ.ಒಟ್ಟು 40 ದಿನಗಳ ಕಾಲ ಆ ಪಾತ್ರಕ್ಕೆ ಶೂಟ್ ಮಾಡಿದ್ರು ನಮ್ಮ ದಾದಾ.ಕೇಂಚು ಗಡ್ಡ,  ಶ್ವೇತ ವಸ್ತ್ರದಾರಿಯಾಗಿ ಕಮಲ್ ಎದುರು ಸ್ಟೈಲಾಗಿ  ಕತ್ತಿವರಸೆ ಮಾಡೋ ದೃಶ್ಯದಲ್ಲಿ ದಾದಾ ಕಾಣಿಸಿಕೋಂಡಿದ್ದರೂ. ಗಡ್ಡ ಬಿಟ್ಟ ದಾದರ ಒಂದು ಫೋಟೋ,ಮ್ಯಾಗಜಿನ್ ಒಂದರಲ್ಲಿ ಪ್ರಕಟವಾಗಿತ್ತು ಅದು ಕಮಲ ಹಾಸನ್ ರ್ ಕಣ್ಣಿಗೆ ಬಿದ್ದಿತು. ಅವರ ಕನಸಿನ ಯೂಸುಫ್ ಖಾನ್ ಪಾತ್ರಕ್ಕೆ ವಿಷ್ಣುವರ್ಧನ್ ಹೇಳಿ ಮಾಡಿಸಿದಂತಿದ್ದರಂತೆ,ಎರಡನೇ ಚಿಂತೆ ಇಲ್ಲದೆ ವಿಷ್ಣು ಅವರಿಗೆ ಫೋನ್ ಕಮಲ್ ಮಾಡಿ ಯೂಸುಫ್ ಖಾನ್ ಪಾತ್ರದ ಬಗ್ಗೆ ವಿವರಿಸಿ,ಗಡ್ಡ ತೆಗೆಯದಂತೆ ವಿನಂತಿಸಿ ,ಕೂಡಲೆ ಅಡ್ವಾನ್ಸ್ ನೀಡಿ ಅವರ ಕಾಲ್ ಶೀಟ್ ಪಡೆದ್ರಂತೆ. ಕಮಲ್ ರ  ಅಪೇಕ್ಷಗೂ ಮೀರುವಂತೆ ವಿಷ್ಣು  ಅವರು ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ರಂತೆ. ಮುದುದನಾಯಗನ್ ಚಿತ್ರದಲ್ಲಿ ಯಾವ ಸನ್ನಿವೇಶದಲ್ಲೂ ಗ್ರಾಫಿಕ್ಸ್ನ ಬಳಕೆ ಇರಲಿಲ್ಲ ಎಲ್ಲವನ್ನು ನೈಜವಾಗಿ ಚಿತ್ರಿಸಿದ್ದರು..ಅದು ಯುದ್ಧ್ದ ದೃಶ್ಯವಾಗಲಿ ಅಥವಾ ಸಾಹಸದ ದೃಶ್ಯ ವಾಗಲಿ ..ಒಮ್ಮೆಲೇ 100 ಆನೆ 200 ಕುದುರೆ ಮತ್ತು 50 ಒಂಟೆಗಳನ್ನು ಬಳಸಿ ಸನ್ನಿವೇಶದ ಚಿತ್ರೀಕರಣ ನಡೆದಿತ್ತಂತೆ.25 ವರ್ಷಗಳ ಕೇಳೆಗೆ ಅಂದಾಜು 200 ಕೋಟಿ ಬಜೆಟ್ ಸಿನಿಮಾ ಅದಾಗಿತ್ತು ಅಂತ ಖುದ್ದು ಕಮಲ್ ಅವರೇ ಹೇಳಿದ್ದರು.. ಹಣದ ಅಭಾವದ ಕಾರಣ ಆ ಸಿನಿಮಾವನ್ನ ಅರ್ಧದಲ್ಲೇ ಕೈ ಬಿಡುವ ಪರಿಸ್ಥಿತಿ ಕಮಲ ಅವರಿಗೆ ಬಂದಿತು. 1997 ರಲ್ಲಿ ಸಿನಿಮಾದ ಒಂದು ಯುದ್ಧದ ದೃಶ್ಯಕ್ಕೆ(2 ನಿಮಿಷ) ಬರೋಬ್ಬರಿ 2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರು.

ಒಂದು ವೇಳೆ ಆ ಸಿನಿಮಾ ಪೂರ್ಣಗೊಂಡು ಬಿಡುಗಡೆಯಾಗಿದ್ದರೆ ಇಡೀ ವಿಶ್ವವನ್ನೇ ತನ್ನತ್ತ ಸೆಳೆದು ತಿರುಗಿ ನೋಡುವಂತೆ ಮಾಡಿಕೊಳ್ಳುವ ತಾಕತ್ತು ಆ ಸಿನಿಮಾಗಿತ್ತು.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply