ಡಿಂಡಿಮ ಕವಿ ಶ್ರದ್ಧಾಂಜಲಿ 💐

ಡಿಂಡಿಮ ಕವಿ” ಪಾತ್ರ ಯಾರೂ ನೋಡಿಲ್ಲ ಅನ್ನೊ ಹಾಗಿಲ್ಲ, “ಕವಿರತ್ನ ಕಾಳಿದಾಸ” ಚಿತ್ರದಲ್ಲಿ ಇವರ ನಟನೆಗೆ ನೋಡುಗರು ನಿಬ್ಬೆರಗಾಗುವಂತೆ ಮಾಡಿದ ಸನ್ನಿವೇಶ ಕಾಳಿದಾಸನಿಗೆ ಹಾಕುವ ಪ್ರಶ್ನೆಗಳು, ನಟನೆಗೆ ತಕ್ಕ ಸವಾಲ್ ಈ ಚಿತ್ರದಲ್ಲಿದೆ.

ಹಿರಿಯ ಪೋಷಕ ನಟ ಶನಿಮಹದೇವಪ್ಪ ವಯೋವೃಧ್ಧ ಸಮಸ್ಯೆಯಿಂದ 03.01.2021 ಸಂಜೆ 5ಕ್ಕೆ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ನಮ್ಮನ್ನು ಅಗಲಿದ್ದಾರೆ.

ರಂಗಭೂಮಿ ಮೂಲಕ ನಟನೆ ಆರಂಭಿಸಿದ ಅವರು ನಾಟಕ, ಸಿನಿಮಾಗಳ ವೈವಿಧ್ಯಮಯ ಪಾತ್ರಗಳ ಮೂಲಕ ಜನರಿಗೆ ಚಿರಪರಿಚಿತರಾಗಿದ್ದ ಕಲಾವಿದ. ಸುಮಾರು ಐದು ದಶಕಗಳ ನಟನಾ ಜೀವನದಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಬೆಳಕವಾಡಿ ಶನಿಮಹದೇವಪ್ಪರ ಹುಟ್ಟೂರು. ಅವರ ತಂದೆ ಕೆಂಚಪ್ಪ ಹಳ್ಳಿಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತಂದೆ ನಟಿಸುತ್ತಿದ್ದ ನಾಟಕಗಳನ್ನು ನೋಡುತ್ತಾ ಬೆಳೆದ ಅವರು ರಂಗಭೂಮಿಯತ್ತ ಆಕರ್ಷಿತರಾದರು. ‘ರಾಜಾ ವಿಕ್ರಮ’ ನಾಟಕದೊಂದಿಗೆ ಬಣ್ಣ ಹಚ್ಚಿದ ಅವರಿಗೆ ‘ಶನೀಶ್ವರ ಮಹಾತ್ಮೆ’ಯ ಶನಿದೇವನ ಪಾತ್ರ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈ ಯಶಸ್ಸಿನೊಂದಿಗೆ ‘ಮಹದೇವಪ್ಪ’ ಮುಂದೆ ‘ಶನಿಮಹದೇವಪ್ಪ’ ಎಂದೇ ಹೆಸರಾದರು. ಕನ್ನಡ ಥಿಯೇಟರ್ಸ್ ಮತ್ತು ಗುಬ್ಬಿ ಕಂಪನಿಯ ‘ಬಡವನ ಬಾಳು’, ‘ಅತ್ತೆ ಸೊಸೆ’, ‘ಬಿಡುಗಡೆ’, ‘ಸತ್ಯವಿಜಯ’, ‘ಚಂದ್ರಹಾಸ’ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿದರು.

‘ಧರ್ಮಸ್ಥಳ ಮಹಾತ್ಮೆ’ (1962) ಚಿತ್ರದ ಬ್ರಹ್ಮನ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಶನಿಮಹದೇವಪ್ಪ ಮುಂದೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾ ಬಂದರು. ‘ಭಕ್ತ ಕುಂಬಾರ’ ಚಿತ್ರದಲ್ಲಿ ಜ್ಞಾನೇಶ್ವರನಾಗಿ, ‘ಮೂರೂವರೆ ವಜ್ರಗಳು’ ಚಿತ್ರದಲ್ಲಿ ಶಕುನಿಯಾಗಿ, ಹೀಗೆ ಹತ್ತಾರು ಪಾತ್ರಗಳಲ್ಲಿ ಶನಿಮಹದೇವಪ್ಪ ಸಿನಿಪ್ರೇಮಿಗಳಿಗೆ ನೆನಪಾಗುತ್ತಾರೆ. ವರನಟ ರಾಜಕುಮಾರ್ ಅವರಿಗೆ ಆಪ್ತರಾಗಿದ್ದ ಅವರು ರಾಜ್ ಅಭಿನಯದ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀನಿವಾಸ ಕಲ್ಯಾಣ, ಶಂಕರ್ ಗುರು, ಬಬೃವಾಹನ, ಸ್ವಯಂವರ, ಅದೇ ಕಣ್ಣು, ಬಂಗಾರದ ಪಂಜರ, ಬಂಗಾರದ ಮನುಷ್ಯ, ಚಲಿಸುವ ಮೋಡಗಳು, ಪ್ರೇಮದ ಕಾಣಿಕೆ, ತ್ರಿಮೂರ್ತಿ….

ಬಾಲಿವುಡ್ ಅಮಿತಾಬ್ ಬಚ್ಚನ್ ರವರು ಒಮ್ಮೆ ಅಣ್ಣಾವ್ರನ್ನು ಭೇಟಿ ಮಾಡುವ ಭಕ್ತ ಪ್ರಹ್ಲಾದ ಚಿತ್ರೀಕರಣ ಸಂಧಭ೯ ,ಅಣ್ಣಾವ್ರನ್ನು ನೋಡಲು ಬಂದಾಗ ಇವರು ಅಣ್ಣಾವೃ ಇರುವ ಸ್ಥಳಕ್ಕೆ ಕರೆದುಕೊಂಡು ಭೇಟಿ ಮಾಡಿಸ್ತಾರೆ ಆಗ ಅಮಿತಾಬ್ ಬಚ್ಚನ್ ರವರು ಅಣ್ಣಾವ್ರ ಜೊತೆ ಫೋಟೋ ತೆಗೆಸುವಾಗ ಇವರನ್ನೂ ಕರೆದು ಅಣ್ಣಾವ್ರಿಗೆ ಹೇಳ್ತಾರೆ ಶನಿಮಹದೇವಪ್ಪ ರವರಿಂದ ನಿಮ್ಮನ್ನು ಭೇಟಿ ಮಾಡೋಕೆ ಸಾಧ್ಯವಾಗಿದೆ, ಫೋಟೋನಲ್ಲಿ ನೀವೂ ಇರಬೇಕು ಅಂತ ಹೇಳಿ ಕರೆದು ನಂತರ ಮೂವರ ಜೊತೆ ತೆಗೆಸಿದ ಫೋಟೋ.

ಅಣ್ಣಾವ್ರಿಗೆ ಇವರು ಆಪ್ತರೂ ಸಹ, ವಾಕಿಂಗ್ ಹೋಗೋ ಸಮಯದಲ್ಲೂ ಇವರ ಜೊತೆಲೇ ಅಷ್ಟು ಸ್ನೇಹ.

ಆಗಿನ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಟೈಗರ್ ಪ್ರಭಾಕರ್, ಸುಧೀರ್ ರವರ ಜೊತೆ ನಟನೆ.

ರೆಬಲ್ ಸ್ಟಾರ್ ಅಂಬರೀಷ್, ವಿಷ್ಣುವರ್ಧನ್, ಶಿವರಾಜ್ ಕುಮಾರ್, ರವಿಚಂದ್ರನ್, ಅಜು೯ನ್ ಸಜಾ೯, ಕಾಶಿನಾಥ್, ಸುನೀಲ್ ನಟರ ಚಿತ್ರಗಳಲ್ಲಿ ನೋಡಬಹುದು.

ಶಿವನಾಗ, ಜಯಸಿಂಹ, ಒಂಟಿಸಲಗ, ಒಂದಾಗಿ ಬಾಳು, ಜೀವನ ಜ್ಯೋತಿ, ಗುರುಬ್ರಹ್ಮ, ಬಹಳ ಚೆನ್ನಾಗಿದೆ, ನಮ್ಮೂರ ಹಮ್ಮೀರ ಇನ್ನೂ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇವರ ಚಿತ್ರಗಳನ್ನು ನೋಡುವಾಗ ಒಮ್ಮೆಯಾದರೂ ಭೇಟಿ ಮಾಡಬೇಕೆಂಬ ಆಸೆ ಒಂದು ದಿನ ನೆರವೇರಿತು, 2 ವಷ೯ಗಳ ಹಿಂದೆ ಮನೆಗೆ ಭೇಟಿ ಕೊಟ್ಟು ಅವರ ಯೋಗಕ್ಷೇಮ ವಿಚಾರಿಸಿದೆ, ಅಣ್ಣಾವ್ರ ಜೊತೆ ಕಳೆದ ಕೆಲವು ಮಧುರ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಂಡರು, ಕೆಲ ಡೈಲಾಗ್ ವಿಡಿಯೋ ಅವರಿಗೆ ತೋರಿಸಿ ಕಳೆದ ನೆನಪುಗಳು ಸಾಕ್ಷಿ, ಅವರ ಮಗ ಗುರು ಕುಮಾರ್ ತುಂಬಾ ಚೆನ್ನಾಗಿ ಸತ್ಕರಿಸಿದ್ರು. ಶನಿಮಹದೇವಪ್ಪ ಜೊತೆ ನೆನಪಿಗೆ ಫೋಟೋ ತೆಗೆಸಿದೆ. ಆರೋಗ್ಯ ಗುಣಮುಖರಾಗಲಿ ಎಂದು ಹೇಳಿ ಕೊನೆಯಲ್ಲಿ ಅವರ ಕಾಲಿಗೆ ನಮಸ್ಕರಿಸಿ ಬಂದೆ.

ಪುನೀತ್ ರಾಜಕುಮಾರ್ ಜೊತೆ ಬೆಟ್ಟದ ಹೂವು ಚಿತ್ರದಲ್ಲಿ ನಟನೆ.

🦚ವರದರಾಜು ಅವಾಡ್೯ ಮತ್ತು ರಾಜ್ ಕುಮಾರ್ ಸೌಹಾದ೯ ಅವಾಡ್೯ ಇವರಿಗೆ ಸಂದ ಗೌರವ.

ಚಿತ್ರರಂಗದಲ್ಲಿ ನಟನೆ ಮಾಡಿ ಜನಪ್ರಿಯರಾದ ನಂತರ ಇದ್ದಕ್ಕಿದ್ದಂತೆ ದೂರ ಇರಲು ಕಾರಣ ಇರುತ್ತೆ ಅವಕಾಶಗಳು ಮೊದಲಿನ ಹಾಗೆ ಸಿಗದೆ ಚಿತ್ರರಂಗದವರು ಇವರನ್ನು ನೋಡಿಕೊಳ್ಳದೆ ಇದ್ದದು ನೊಂದುಕೊಳ್ಳುವ ಹಾಗಿದೆ. ನಟನೆ ಮಾಡೋ ವಯಸ್ಸಿನಲ್ಲಿ ಅಭಿಮಾನಿಗಳು ಹೆಚ್ಚು ಇತಾ೯ರೆ ನಂತರ ಗಮನಿಸೋದು ಇಲ್ಲ ಇದು ತುಂಬಾ ನೋವಿನ ಸಂಗತಿ.

ಕಳೆದೆರಡು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶನಿಮಹದೇವಪ್ಪ ಇಂದು ಇಹಲೋಕ ತ್ಯಜಿಸಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ.

ಇವರ ಅಂತ್ಯಕ್ರಿಯೆ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ 12 ಕ್ಕೆ ನಡೆಸಲಾಗುವುದು ಎಂದು ಅವರ ಮಗ ತಿಳಿಸಿದ್ದಾರೆ.

ಮತ್ತೊಮ್ಮೆ ಹುಟ್ಟಿ ಬನ್ನಿ ಡಿಂಡಿಮ ಕವಿ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply