ಡ್ಯಾನ್ಸ್ ಜೊತೆಗೆ ಫಿಟ್ನೆಸ ಪ್ರಿಯ ಶ್ರೇಯಸ್ ಮಂಜು

ಹೀರೊಗಳು ಡ್ಯಾನ್ಸ್ ಮತ್ತು ಫೈಟ್ ಮಾಡೋದು ಎಂದಿಗೂ, ಇಂದಿಗೂ ಟ್ರೆಂಡಿನ ವಿಷಯ. ಮೈಯನ್ನು ಬಳುಕಿಸಿ  ಊಹಿಸಲು ಅಸಾಧ್ಯವಾದ ಸ್ಟೆಪ್ ಹಾಕಿ, ವಿಲ್ಲನಗಳನ್ನ  ಥರಾವರಿಯಾಗಿ  ಸದೇಬಡೆದು, ಎದೇ ಝಲ್ ಎನ್ನಿಸುವ ರೋಮಾಂಚನಕಾರಿ ಸ್ಟಂಟ್ ಸೀನಗಳನ್ನ ಸರಾಗವಾಗಿ ಮಾಡುವುದೇ ಇಂದಿನ ಅತಿ ದೊಡ್ಡ ಟ್ರೆಂಡ್.

ಕನ್ನಡದ ಯಶಸ್ವಿ ನಿರ್ಮಾಪಕ K. ಮಂಜು ಅವರ ಪುತ್ರ “ಶ್ರೇಯಸ್  ಮಂಜು” ಪಡ್ಡೆಹುಲಿ ಸಿನಿಮಾದಲ್ಲಿ ನಾಯಕನಾಗಿ ನಟಿಸಿ ಚಿರಪರಿಚಿತರಾಗಿದ್ದರೆ. ಈ ಟ್ರೇ0ಡಿಗೆ ತಕ್ಕಂತೆ ತನ್ನನ್ನು ರೂಪಿಸಿಕೊಂಡು, ಅಗತ್ಯ ತಯಾರಿ ಪಡಿತಿದ್ದಾರೆ “ಶ್ರೇಯಸ್ ಆ ಟ್ರೇ0ಡಿಗೆ ತಕ್ಕಂತೆ ತನ್ನನ್ನು ರೂಪಿಸಿಕೊಂಡು, ಅಗತ್ಯ ತಯಾರಿ ಪಡೆಯುತ್ತಿದ್ದಾರೆ “ಶ್ರೇಯಸ್ ಮಂಜು”.ದೇಹದ ತೂಕ ಇಳಿಸಲು,  ನಿತ್ಯವೂ ಸತತವಾಗಿ 3 ಘಂಟೆಗಳ ಕಾಲ  ಜಿಮ್ನಲ್ಲಿ ವರ್ಕೌಟ್  (ವ್ಯಾಯಾಮ) ಮಾಡ್ತ ಮೈಕಟ್ಟು ಧೃಡಗೋಳಿಸಿ ಕೊಂಡಿದ್ದಾರೆ. ಜೊತೆಯಲ್ಲೇ ನೃತ್ಯ ಹಾಗೂ ಕಿಕ್ ಬಾಕ್ಸಿಂಗ್ ತರಬೇತಿ ಕೂಡ ಪಡೆಯುತ್ತಿದ್ದಾರೆ  ಮನೆಯಲ್ಲೇ ಇರುವ ಜಿಮ್ನಲ್ಲಿ ನಿರಂತರವಾಗಿ ಡ್ಯಾನ್ಸ್ ಮತ್ತು ಆರೋಬಿಕ್ಸ್ ಅಭ್ಯಾಸ ಮಾಡುತ್ತಿದ್ದಾರೆ.ಶ್ರಮವೇ ಯಶಸ್ಸಿನ ಅಡಿಪಾಯವೆಂದು ನಂಬಿದ್ದಾರೆ.

ಕನ್ನಡದ ಹೆರೋಗಳಲ್ಲಿ ಡ್ಯಾನ್ಸ್ ಮತ್ತೆ ಫೈಟ್ ಎರಡನ್ನು ನಿಭಾಯಿಸಿಬಲ್ಲವರು ಎಂದರೆ ಪುನೀತ್ ರಾಜ್ಕುಮಾರ್,ಯಶ್ ಮತ್ತು ಧ್ರುವ ಸರ್ಜಾ.. ಈಗಾ ಆ ಸಾಲಿಗೆ ಈ ಪಡ್ಡೆ ಹುಲಿ ಕೂಡ ಸೇರಲಿದೆ ..ತರಬೇತಿ ಪಡೆಯುತ್ತಿದೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply