ಹಾಸನ ಜಿಲ್ಲೆಯ ದುದ್ದ ಗ್ರಾಮದಲ್ಲಿ ಯಶ್ ಅವರು ಸ್ವಲ್ಪ ದಿನಗಳ ಹಿಂದೆ 10 ಎಕರೆ ಕೃಷಿ ಭೂಮಿಯನ್ನ ಖರೀದಿಸಿ, ವಿನೂತನ ಮಾದರಿಯ ಕೃಷಿ ಮಾಡಲು ಮುಂದಾಗಿದ್ದಾರೆ, ಅದರ ರೂವಾರಿ ಮತ್ತು ಮೇಲುಸ್ತುವಾರಿಯನ್ನ ಅವರ ತಂದೆ ತಾಯಿಗೆ ವಹಿಸಿ ಅಲ್ಲೇ ಒಂದು ಮನೆಯನ್ನು ಸಹ ಕಟ್ಟಿರಿಸಿದ್ದಾರೆ. ಈ ಮಧ್ಯೆ ಕೆಲವು ಕಿಡಿಗೇಡಿಗಳು ಅಕ್ರಮವಾಗಿ ಅವರ ಜಾಗದೊಳಗೆ ನುಸುಳಿ ಅವ್ಯವಹಾರ ಚಟುವಟಿಕೆಗಳನ್ನ ಮಾಡುವುದರ ಜೊತೆಗೆ ಇಲ್ಲದ ಸಲ್ಲದ ಅರೋಪ ಹಾಕಿ ಬೆದರಿಕೆ ಕೂಡ ನೀಡಿದ್ರು.
ಈ ಬೆಳವಣಿಗೆಗಳ ಅರಿವಾದ ತಕ್ಷಣ ಬೆಂಗ್ಳೂರಿನಿಂದ ಹಾಸನಕ್ಕೆ ತೆರಳಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ನಾ ಯಾರಿಗೂ ಹೆದರೊ ಅವಶ್ಯಕತೆ ಇಲ್ಲ ಈ ಜಾಗ ನಮ್ಮದು, ನಮ್ಮ ಅಪ್ಪಾ ಅಮ್ಮನ ಮೇಲೆ ಸುಳ್ಳು ಆರೋಪ ಮಾಡಿದ್ರೆ ಕೇಳ್ಕೊಕೊಂಡ್ ಇರೋದಕ್ಕೆ ಆಗಾಲ್ಲ , ನಾ ನಟ ಆಗೋದಕ್ಕೆ ಮುಂಚೆ ನಾ ಅಪ್ಪ ಅಮ್ಮನ ಮಗ, ನಂಗೆ ಅವರು ಮುಖ್ಯ ಅಂತ ಹೇಳ್ತಾ ಅವರ ಅಪ್ಪನ ಅಮ್ಮನ ಪರ ನಿಂತರು ರಾಕಿ ಭಾಯ್. ಸೆಲೆಬ್ರಿಟಿಗಳಿಗೆ ಒಂದು ಶಾಪ ಇದೆ, ಅವರ ವಯ್ಯಕ್ತಿಕ ಜೀವನದಲ್ಲಿ ಏನೇ ಚಿಕ್ಕ ಘಟನೆಯಾದ್ರು ಅದನ್ನ ದೊಡ್ಡದಾಗಿ ಬಿಂಬಿಸಿ ನ್ಯಾಯ ತೀರ್ಮಾನ ಮಾಡೋಕೆ ಎಲ್ಲರೂ ತಾ ಮುಂದು ನಾ ಮುಂದು ಅಂತ ಬರ್ರ್ತಾರೆ, ಮಾಧ್ಯಮಗಳು ಅಷ್ಟೇ ಏನೇ ನಿರ್ಧಾರಕ್ಕೆ ಬರುವ ಮುನ್ನ ಕೊಂಚ ತಾರ್ಕಿಕವಾಗಿ ಚಿಂತಿಸಿ ತದ ನಂತರ ವಿಷಯ ವಿನಿಮಯಕೆ ಮುಂದಾಗಿ ಎಂದ್ರು …