ತಮಿಳು ಚಿತ್ರರಂಗ

( ಮುಂದುವರೆದ ಭಾಗ )

    ೧೯೦೯ ರಲ್ಲಿ ಮದ್ರಾಸಿನಲ್ಲಿ ಧ್ವನಿಯ ಜೊತೆಗೆ ಲಘು ಚಿತ್ರಗಳ ಪ್ರದರ್ಶನದ ಅದ್ದೂರಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ವಸ್ತು ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅತಿಥಿಯ ಹೆಸರು ಕಿಂಗ್ ಚಾರ್ಜ್, ಮೂಲತಃ ಬ್ರಿಟಿಷ್ ಪ್ರಜೆ. ಬ್ರಿಟಿಷ್ ಸಂಸ್ಥೆಯು ಕ್ರೋನ್ ಧ್ವನಿ ವರ್ಧಕವನ್ನು ತರಿಸಿಕೊಂಡಿತು. ಇದರಲ್ಲಿ ಚಿತ್ರ ಪ್ರಕ್ಷೇಪಕ, ಗ್ರಾಮಾ ಪೋನ್ ಜೊತೆ ಧ್ವನಿ ಮುದ್ರಿಸಿದ ಬಿಲ್ಲೆಯನ್ನು ಜೋಡಿಸಲಾಗಿತ್ತು. ಧ್ವನಿಯನ್ನು ಒಂದೇ ಸ್ಥಾಯಿಯಲ್ಲಿ ಓಡಿಸಿದರೆ ಚಲನಚಿತ್ರ ಮತ್ತು ಧ್ವನಿ ಒಂದೇ ಸಮನಾಗಿ ಬರುತ್ತಿತ್ತು. ಆದರೆ ಸಂಭಾಷಣೆಗಳಿರಲಿಲ್ಲ.

ಆ ಸಮಯದಲ್ಲಿ  ರಘುಪತಿ ವೆಂಕಯ್ಯ ನಾಯ್ಡು ಯಶಸ್ವಿ ಛಾಯಾಗ್ರಹಕರಾಗಿ ಉತ್ತಮ ಹೆಸರನ್ನು ಗಳಿಸಿದ್ದರು. ಮತ್ತು ಮದ್ರಾಸ್ ಹೈಕೋರ್ಟ್ ಬಳಿ ಚಿತ್ರಗಳ ಪ್ರದರ್ಶನಕ್ಕಾಗಿ  ಬಿಡಾರವನ್ನು ನಿರ್ಮಿಸಿದ್ದರು. ಈ  ಪ್ರಯತ್ನದಲ್ಲಿ  ಅದ್ಭುತ ಯಶಸ್ಸನ್ನು ಕಂಡ ಆರ್.ವೆಂಕಯ್ಯನವರಿಗೆ ಹಣದ ಸುರಿಮಳೆಯೇ ಉಂಟಾಯಿತು.

ಇದರಿಂದ ಪ್ರೇರೇಪಿತರಾಗಿ ಆರ್.ವೆಂಕಯ್ಯನವರು  ೧೯೧೨ ರಲ್ಲಿ  ಚಿತ್ರಗಳ ಪ್ರದರ್ಶನ ಕ್ಕಾಗಿಯೇ ಮದ್ರಾಸಿನಲ್ಲಿ ಮೌಂಟ್ ರಸ್ತೆಯ ಪ್ರದೇಶದಲ್ಲಿ ಗೈಟಿ ಎಂಬ ಚಿತ್ರ ಮಂದಿರವನ್ನು ಕಟ್ಟಿಸಿದರು. ಮದ್ರಾಸಿನಲ್ಲಿ ಮೊದಲ ಬಾರಿಗೆ ನಿರ್ಮಾಣ ಗೊಂಡ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ ಈ ಚಿತ್ರಮಂದಿರವು ಬೇರೆ ಮಾಲಿಕರ ಆಡಳಿತದಲ್ಲಿ  ಈಗಲೂ ಕಾರ್ಯನಿರ್ವಹಿಸತ್ತಿದೆ.

೧೯೧೬ ರಿಂದ  ಮದ್ರಾಸಿನಲ್ಲಿ ಮೂಕಿ ಚಿತ್ರಗಳ  ನಿರ್ಮಾಣ ಆರಂಭವಾಯಿತು. ಅದೇ ವರ್ಷ ಮದ್ರಾಸಿನಲ್ಲಿ ದಕ್ಷಿಣ ಭಾರತದ ಮೊದಲ ತಮಿಳು ಮೂಕಿ ಚಿತ್ರ ಕೀಚಕ ವಧಮ್ ಬಿಡುಗೊಡೆಯಾಯಿತು.  ೧೯೨೦ ರ ದಶಕ ನಂತರದ ಕಾಲದಲ್ಲಿ ತಮಿಳು ಭಾಷೆಯ ಮೂಕಿ ಚಿತ್ರಗಳನ್ನು ಮದ್ರಾಸ್ ಮತ್ತು ಇತರ ತಾತ್ಕಾಲಿಕ ಸ್ಥಳಗಳಲ್ಲಿ  ಚಿತ್ರೀಕರಿಸುತ್ತಿದ್ದರು ಮತ್ತು ತಾಂತ್ರಿಕ ಸಂಸ್ಕರಣೆಗೆ  ಪುಣೆ ಅಥವಾ ಕಲ್ಕತ್ತಾ ಪಟ್ಟಣಕ್ಕೆ ಕಳುಹಿಸುತ್ತಿದ್ದರು.

ನಂತರದ ದಿನಗಳಲ್ಲಿ ಮೂಕಿ ಚಿತ್ರಗಳ ನಾಯಕರೆಂದು ಪ್ರಸಿದ್ಧಿ ಪಡೆದಿದ್ದ ನಟ ಎಂ.ಕೆ.ತ್ಯಾಗರಾಜ್ ಭಾಗವತರ್ ಮತ್ತು  ಚಿ.ಯು.ಚನ್ನಪ್ಪ ಇವರು ನಟಿಸಿದ ಚಿತ್ರಗಳನ್ನು ಪುಣೆ ಮತ್ತು ಕೋಲ್ಕತ್ತಾದಲ್ಲಿ ಚಿತ್ರೀಕರಿಸಲಾಗಿತ್ತು. ಎಂ.ಕೆ.ತ್ಯಾಗರಾಜ ಮತ್ತು ಪಿ.ಯು.ಚೆನ್ನಪ್ಪ ಎಂಬ ಈ ಇಬ್ಬರು ಮಹಾನ್ ಕಲಾವಿದರು ೧೯೪೦ ರ ದಶಕದ ಮಧ್ಯದವರೆಗೂ ಮೂಕಿ ಚಿತ್ರಗಳ ದಿಗ್ಗಜರಾಗಿ,ರಾಜರಾಗಿ ವಿಜ್ರಂಭಿಸಿದರು

೧೯೩೦ ರ ದಶಕದಲ್ಲಿ ಎ.ವಿ.ಎಮ್ ಸ್ಟುಡಿಯೋವನ್ನು ಕರೈಕುಡಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದರು. ಅದೇ ದಶಕದ ಸಮಯದಲ್ಲಿ ಸೇಲಂನಲ್ಲಿ ಮಾಡರ್ನ್ ಥಿಯೇಟರ್ ಸ್ಟುಡಿಯೋ ಮತ್ತು ಕೋಯಂಬತ್ತೂರಿನಲ್ಲಿ ಸೆಂಟ್ರಲ್ ಸ್ಟುಡಿಯೋ ಎಂಬ ನಿರ್ಮಾಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ವಿಜಯ ವಾಹಿನಿ, ಜೆಮಿನಿ ಮತ್ತು ಎ.ವಿ.ಎಮ್.ಪ್ರೊಡಕ್ಷನ್ ಸಂಸ್ಥೆಗಳು ತಮ್ಮ ಕಛೇರಿಗಳನ್ನು ಚೆನೈಗೆ ಸ್ಥಳಾಂತರಿಸಿದವು.

ಅವಿಭಕ್ತ ಮದ್ರಾಸ್ ಪ್ರೆಸಿಡೆನ್ಸಿ ದಕ್ಷಿಣ ಭಾರತದ ರಾಜಧಾನಿಯಾಗಿದ್ದರಿಂದ  ಮದ್ರಾಸ್ ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಕೇಂದ್ರ ಸ್ಥಾನವಾಗಿತ್ತು. ೧೯೪೦ ರ ದಶಕದಿಂದ ಸ್ವಾತಂತ್ರ್ಯ ಪೂರ್ವ ಯುಗದ ನಾಟಕ ಮತ್ತು ರಂಗ ಭೂಮಿ ಕಲಾವಿದರು ತಮಿಳು ಚಿತ್ರರಂಗವನ್ನು ಪ್ರವೇಶಿಸಿದರು.

೧೯೪೮ ರಲ್ಲಿ ತೆರೆ ಕಂಡ ಚಂದ್ರ ಲೇಖ ಎಂಬ ತಮಿಳು ಚಿತ್ರವು ಭಾರತದಾದ್ಯಂತ ವಾಣಿಜ್ಯವಾಗಿ ಯಶಸ್ಸು ಕಂಡ ಮೊದಲ ಚಿತ್ರವಾಗಿದೆ. ಈ ಚಿತ್ರವು ಇಂದಿಗೂ ತಮಿಳು ಚಿತ್ರರಂಗದಲ್ಲಿ ಮೈಲುಗಲ್ಲು ಆಗಿದೆ. ಒಂದು ಹಂತದಲ್ಲಿ ಚದುರಿ ಹೋಗಿದ್ದ ತಮಿಳು ಚಿತ್ರಗಳ ವೀಕ್ಷಣೆಯಲ್ಲಿ ಅನಿರೀಕ್ಷಿತವಾಗಿ ಏರಿಕೆ ಕಂಡಿತು.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply