( ಮುಂದುವರೆದ ಭಾಗ )
೧೯೫೦ ನೇ ಇಸ್ವಿಯಿಂದ ೧೯೭೦ ರ ದಶಕದ ಕೊನೆಯವರೆಗೂ ತಮಿಳು ಚಿತ್ರರಂಗದಲ್ಲಿ ಎಂ.ಜಿ.ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಚಿತ್ರಗಳು ಹೆಚ್ಚು ಪ್ರದರ್ಶಿಸಲ್ಪಡುತ್ತಿದ್ದವು. ಇವರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ ಯಶಸ್ಸು ಸಾಮಾನ್ಯವಾಗಿರಲಿಲ್ಲ.
ಈ ಎರಡು ದಶಕಗಳು ಈ ದಿಗ್ಗಜರ ಯುಗವೆಂದು ಹೇಳಲಾಗುತ್ತಿತ್ತು. ೧೯೭೦ ರ ದಶಕದ ಮಧ್ಯಭಾಗದಿಂದ ಕಮಲಾ ಹಾಸನ್, ರಜನಿಕಾಂತ್,ಶರತ್ ಕುಮಾರ್,ವಿಜಯ್, ಅಜಿತ್ ಕುಮಾರ್, ಸೇರಿ ಬಹಳಷ್ಟು ಕಲಾವಿದರು ಇಂದಿಗೂ ಈ ಚಿತ್ರರಂಗದಲ್ಲಿ ಸಕ್ರೀಯವಾಗಿದ್ದಾರೆ.
ಆರಂಭದ ದಶಕಗಳಿಂದಲೂ ಕೇವಲ ಭಾರತ ದೇಶದಲ್ಲಿ ಮಾತ್ರ ಪ್ರದರ್ಶನವನ್ನು ಕಾಣುತ್ತಿದ್ದ ತಮಿಳು ಚಿತ್ರಗಳು ಹಲವು ವರ್ಷಗಳ ನಂತರ ಶ್ರೀಲಂಕಾ, ಸಿಂಗಾಪುರ ಮತ್ತು ಮಲೇಶಿಯಾ ಸೇರಿ ಅನೇಕ ದೇಶಗಳಲ್ಲಿ ಪ್ರದರ್ಶಿಸಲ್ಪಡುತ್ತಿವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ೨೦೦೭ ರಲ್ಲಿ ತೆರೆ ಕಂಡ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಶಿವಾಜಿ (ದಿ ಬಾಸ್) ತಮಿಳು ಚಿತ್ರದ ದಾಖಲೆಯ ಕುರಿತು ತಿಳಿಯದವರು ಇದ್ದಾರೆಯೇ? ಭಾರತ, ದಕ್ಷಿಣ ಆಫ್ರಿಕಾ,ಕೆನಡಾ ಮತ್ತು ಯುಕೆ ಸೇರಿ ಅನೇಕ ದೇಶಗಳಲ್ಲಿ ಏಕಕಾಲಕ್ಕೆ ತೆರೆ ಕಂಡ ಈ ಚಿತ್ರವು ಮೊದಲ ವಾರದಲ್ಲಿ ಗಳಿಸಿದ ದಾಖಲೆಯ ಗಳಿಕೆಗೆ ಮೊದಲ ಹತ್ತು ಉತ್ತಮ ಚಿತ್ರಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.
ಮಣಿರತ್ನಂ ನಿರ್ದೇಶನದ ಕಣ್ಣತ್ತಿಲ್ ಮುತ್ತಮಿತ್ತಿಲ್,ವೇಯಿಲ್ ಮತ್ತು ಅಮೀರ್ ಸುಲ್ತಾನ್ ರವರ ಪರುತಿಪೀರನ್ ಮತ್ತು ಪ್ರಿಯದರ್ಶನ್ ನಿರ್ದೇಶನದ ಕಾಂಜೀವರಂ ಚಿತ್ರವು ಕೂಡ ಟೊರೆಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸರ್ವ ಶ್ರೇಷ್ಠ ಪೋಷಕ ಚಿತ್ರವಾಗಿ ಆಯ್ಕೆಯಾಗಿತ್ತು. ೧೯೮೭ ರಲ್ಲಿ ತೆರೆ ಕಂಡ ಮಣಿರತ್ನಂ ನಿರ್ದೇಶನದ ಮತ್ತು ನಟ ಕಮಲ್ ಹಾಸನ್ ಅಭಿನಯದ ನಾಯಗನ್ ತಮಿಳು ಚಿತ್ರವನ್ನು ಟೈಮ್ ಮ್ಯಾಗಜೀನ್ ಆಲ್ ಟೈಮ್ ೧೦೦ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ತಮಿಳು ಚಿತ್ರಗಳು ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ನೇರವಾಗಿ ತಮಿಳು ಭಾಷೆಗಳಲ್ಲಿ ತೆರೆ ಕಾಣುತ್ತವೆ.
ಆದರೆ ಆಂಧ್ರ ಪ್ರದೇಶದಲ್ಲಿ ತಮಿಳು ಚಿತ್ರಗಳನ್ನು ತೆಲುಗು ಭಾಷೆಯಲ್ಲಿ ಮೂರು ಮುದ್ರಿಸಿ ಬಿಡುಗಡೆ ಮಾಡಲಾಗುತ್ತದೆ. ತಮಿಳಿನ ಬಹಳಷ್ಟು ಯಶಸ್ವಿ ಚಿತ್ರಗಳನ್ನು ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ರಿಮೇಕ್ ಮಾಡಲಾಗಿದೆ. ೨೦ ನೇ ಶತಮಾನದಲ್ಲಿ ೫೦೦೦ ಕ್ಕಿಂತ ಹೆಚ್ಚು ತಮಿಳು ಚಿತ್ರಗಳನ್ನು ನಿರ್ಮಿಸಲಾಗಿದೆಯೆಂದು ಅಂದಾಜು ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸಲು ಎಸ್.ಶಂಕರ್ ನಿರ್ದೇಶನದ ಅನ್ನಿಯನ್, ರಾಜೀವ್ ಮೆನನ್ ನಿರ್ದೇಶನದ ಮಿನ್ ಸಾರ್ ಕನವು, ಮಣಿರತ್ನಂ ನಿರ್ದೇಶನದ ರೋಜಾ ಮತ್ತು ಬಾಂಬೆಯಂತಹ ಅನೇಕ ಪ್ರಸಿದ್ಧ ಚಿತ್ರಗಳನ್ನು ಕೂಡ ಇತರೇ ಭಾಷೆಗಳಲ್ಲಿ ಮೂರು ಮುದ್ರಿಸಲಾಗಿದೆ.
ಮುಖ್ಯವಾಗಿ ತಮಿಳು ಚಿತ್ರಗಳು ಮದ್ರಾಸ್ ತಮಿಳಿನ ವೈಶಿಷ್ಟ್ಯತೆಯನ್ನು ಹೊಂದಿರುತ್ತವೆ. ತಮಿಳು ನಾಡು ರಾಜ್ಯದ ಒಟ್ಟಾರೆ ಸ್ವದೇಶಿ ಉತ್ಪನ್ನದ ವಹಿವಾಟಿನಲ್ಲಿ ತಮಿಳು ಚಿತ್ರರಂಗದ ಮಾರುಕಟ್ಟೆಯು ವಹಿವಾಟು ಸುಮಾರು ಶೇಕಡಾ ೦.೧ ರಷ್ಟಿದ್ದು ೨೦೦೭ ನೇ ಇಸ್ವಿಯಲ್ಲಿ ದಾಖಲೆಯ ೧೦೮ ಚಿತ್ರಗಳು ಬಿಡುಗಡೆಯಾಗಿವೆ. ಮನೋರಂಜನೆಯ ತೆರಿಗೆಗಾಗಿ ಚಿತ್ರ ಪ್ರದರ್ಶಕರು ಅಲ್ಲಿನ ಸರ್ಕಾರಕ್ಕೆ ಪ್ರತಿ ಮಂಗಳವಾರ ತಮ್ಮ ವಾರದ ಆದಾಯದ ವಿವರವನ್ನು ನೀಡುತ್ತಾರೆ. ಜುಲೈ ೨೨, ೨೦೦೬ ರಂದು ಅಂಗೀಕರಿಸಿದ ಸರ್ಕಾರಿ ಅನುಶಾಸನ ೭೨ ರ ಅನುರೂಪತೆಯಲ್ಲಿ ತಮಿಳು ನಾಡು ಸರ್ಕಾರವು ಶುದ್ಧ ತಮಿಳು ಶಬ್ಧಗಳನ್ನು ಹೊಂದಿರುವ ತಮಿಳು ಚಿತ್ರಗಳಿಗೆ ಮನೋರಂಜನೆಯ ತೆರಿಗೆಯನ್ನು ಒದಗಿಸಿದೆ.
ಈ ಹೊಸ ಶಾಸನದ ನಂತರ ತೆರೆ ಕಂಡ ಮೊದಲ ತಮಿಳು ಚಿತ್ರ ಉನಕ್ಕಮ್,ಎನಕ್ಕುಮ್, ಇದರ ಮೂಲ ಶಿರೋನಾಮೆ ಸಂತಿಂಗ್ ಸಂತಿಂಗ್ ಉನಕ್ಕಮ್, ಎನಕ್ಕುಮ್ ಆಗಿದ್ದು ಅರ್ಧ ಆಂಗ್ಲ ಭಾಷೆಯ ಮತ್ತು ಅರ್ಧ ತಮಿಳು ಭಾಷೆಯ ಶಿರೋನಾಮೆಯಾಗಿದೆ. ಪ್ರಸ್ತುತ ತಮಿಳು ನಾಡು ರಾಜ್ಯದಲ್ಲಿ ಸುಮಾರು ೧೮೦೦ ಚಲನಚಿತ್ರ ಮಂದಿರಗಳು ಇಂದಿಗೂ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿವೆ.