ತುಂಬು ಹೃದಯದ ಧನ್ಯವಾದಗಳು ಅಮ್ಮ

karibasavayya

ದಿ. ಕರಿಬಸವಯ್ಯ ಹಾಸ್ಯ ಕಲಾವಿದರ ಕುರಿತು ನಾನು ಲೇಖನ ಬರೆದಿದ್ದಕ್ಕೂ ಸಾಥ೯ಕವಾಯಿತು, ಬಹು ದಿನಗಳಿಂದ ಪುಸ್ತಕ ನೀಡಬೇಕೆಂಬ ಹಂಬಲ ಇಂದು ನೆರವೇರಿದೆ.

ಅನ್ನದ ಋಣ ಇರೋರಿಗೆ ಎಲ್ಲಿ ಹೋದರೂ ಅನ್ನ ಸಿಕ್ಕೇ ಸಿಗುತ್ತೆ ಅನ್ನೋ ಮಾತು ನೂರಕ್ಕೆ ನೂರು ಸತ್ಯ .

ಅವರ ಮನೆಯಲ್ಲಿ ಕುಳಿತು ಊಟ ಮಾಡುವ ಸೌಭಾಗ್ಯ ನನ್ನದಾಯಿತು ಮತ್ತು ಅವರ ಮನೆಗೆ ಹೋದಾಗ ಮಾತನಾಡಿಸಿದ ರೀತಿ ನಿಜಕ್ಕೂ ಮರೆಯಲಾಗದು.

ಶಾಂತ ಕರಿಬಸವಯ್ಯ ರವರ ಮೊಮ್ಮಗ ಕೈಯಲ್ಲಿ ಪುಸ್ತಕ ಕೊಟ್ಟು ಒಳ್ಳೆಯದಾಗಲಿ ಎಲ್ಲರಿಗೂ ಅಂತ ಹೇಳಿ ಹೊಸ ವರ್ಷದ ಪ್ರಯುಕ್ತ ಬಿಸಿ ಬಿಸಿ ಶಾವಿಗೆ ಪಾಯಸ ಮತ್ತು ಟೊಮೆಟೊ ಬಾತ್ , ಎರಡೂ ತುಂಬಾ ಚೆನ್ನಾಗಿತ್ತು, ಹಾಗೆ ಅವರ ಹಳೆಯ ನೆನಪುಗಳನ್ನು ಕೆದುಕಿದೆ ನಂತರ ಅಮ್ಮವರ ಕೈಲಿ ಪುಸ್ತಕ ಕೊಟ್ಟು ಅವರ ಜೊತೆ ಒಂದು ಫೋಟೋ ತೆಗೆಸಿದೆ.

2 ಅಥವ 3 ಚಿತ್ರಗಳಲ್ಲಿ ನಟಿಸಿದ ನಟರು ಫ್ಯಾನ್ಸ್ ನ ನೋಡೋ ರೀತಿಯೇ ಭಿನ್ನವಾಗಿರುತ್ತೆ ಆದರೆ 120 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ವಿವಿಧ ಪಾತ್ರಗಳಲ್ಲಿ ನಮ್ಮನ್ನು ರಂಜಿಸಿದ ಕರಿಬಸವಯ್ಯ ರವರು ಜೊತೆಗೆ ಅಮ್ಮ ರವರು ಮನೆಯಲ್ಲಿ ಯಾರೇ ಹೋದರೂ ಬಂಧುವಿನ ಹಾಗೆ ಉಪಚರಿಸಿದ ಕ್ಷಣ ಮತ್ತು ನಡೆದು ಬಂದ ಹಾದಿ ಎಲ್ಲವೂ ಕೆಲವರಿಗೆ ಮಾದರಿಯಾಗಲಿ .

ಕಲಾವಿದರು ನಮ್ಮನ್ನು ಅಗಲಿದರೂ ಅವರ ಮನೆಯ ಸಂಸ್ಕಾರ ಎಂದೂ ಬದಲಾಗದು ಅನ್ನೋದಕ್ಕೆ ಇವರು ಸಾಕ್ಷಿ.

ತುಂಬು ಹೃದಯದ ಧನ್ಯವಾದಗಳು ಅಮ್ಮ, ನಿಮ್ಮ ಆಶೀವಾ೯ದ ನನ್ನ ಹಾಗೂ ನಮ್ಮ ತಂಡದ ಮೇಲಿರಲಿ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply