ತುಳು ಚಿತ್ರರಂಗ

ನಮ್ಮ ಭಾರತ ದೇಶದಲ್ಲಿ ಹಲವಾರು ಭಾಷೆಯ  ಚಿತ್ರರಂಗಗಳಿವೆ. ಒಂದೊಂದು ಭಾಷೆಯ ಚಿತ್ರರಂಗವು ವಿಭಿನ್ನ ರೀತಿಯ ಹಿನ್ನೆಲೆಯನ್ನು ಹೊಂದಿದ್ದರೂ ಕೆಲವು ಚಿತ್ರರಂಗಗಳು ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕವಾಗಿ ಚೇತರಿಕೆ ಕಾಣದೇ ಇಂದಿಗೂ ಹಿಂದೆ ಉಳಿದಿವೆ.

ನಮ್ಮ ಓದುಗರಿಗೆ ಪ್ರತಿ ಭಾಷೆಯ ಚಿತ್ರರಂಗದ ಕುರಿತಾದ ಹಿನ್ನೆಲೆಯನ್ನು ತಿಳಿಸಬೇಕು ಎನ್ನುವ ಉದ್ದೇಶದಿಂದ ಅಧ್ಯಯನದ ಆಧಾರದ ಮೇಲೆ ಮೊದಲ ಬಾರಿಗೆ ಈ ರೀತಿಯ ಲೇಖನವನ್ನು ರಚಿಸುವ ಮೂಲಕ ಒಂದು ವಿನೂತನ ಪ್ರಯತ್ನವನ್ನು ಮಾಡಿದ್ದೇನೆ. ಭಾರತ ಚಿತ್ರರಂಗದ ಇತಿಹಾಸದಲ್ಲಿ ೪೯ ವರ್ಷಗಳ ಇತಿಹಾಸ ಹೊಂದಿರುವ ತುಳು ಚಿತ್ರ ರಂಗ ಇನ್ನೂ ಆರ್ಥಿಕವಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ ಮತ್ತು ಇದರ ಮಾರುಕಟ್ಟೆಯು ಚಿಕ್ಕದಾಗಿದ್ದು ಇದನ್ನು ಕೋಸ್ಟಲ್ ವುಡ್ ಎಂದು ಕೂಡ ಕರೆಯಲಾಗುತ್ತದೆ.

ಸುಮಾರು ೧೯೭೧ ನೇ ಇಸ್ವಿಯಲ್ಲಿ ಡಾಲಿ ಫಿಲಂಸ್ ಲಾಂಛನದಲ್ಲಿ ಎಸ್.ಆರ್.ರಾಜನ್ ನಿರ್ಮಿಸಿ, ನಿರ್ದೇಶಿಸಿದ್ದ ಮತ್ತು ಆನಂದ ಶೇಖರ್, ಸೋಮಶೇಖರ್ ಪುತ್ರನ್, ಲೋಕಯ್ಯ ಶೆಟ್ಟಿ , ಚಿತ್ರ ರಂಗದ ಅಮ್ಮ ಎಂದೇ ಪ್ರಸಿದ್ಧಿ ಪಡೆದಿದ್ದ ನಟಿ ಪಂಡರಿಬಾಯಿ ನಟಿಸಿದ ಎನ್ನ ತಂಗಡಿ ಚಿತ್ರವು ತೆರೆ ಕಾಣುವುದ ರೊಂದಿಗೆ ತನ್ನ ಕಾರ್ಯವನ್ನು ಆರಂಭಿಸಿತು. ಈ ಚಿತ್ರವು ಮಂಗಳೂರು ನಗರದ ಜ್ಯೋತಿ ಚಿತ್ರ ಮಂದಿರದಲ್ಲಿ ತೆರೆ ಕಂಡು ತಾಂತ್ರಿಕವಾಗಿ ನಿರ್ಮಾಣ ಗೊಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಕಳಪೆ ಗುಣಮಟ್ಟದಲ್ಲಿ ನಿರ್ಮಾಣವಾಗಿದ್ದರಿಂದ ಹೀನಾಯ ಸೋಲನ್ನು ಅನುಭವಿಸಿತು.

ಈ ಚಿತ್ರರಂಗದ ಎರಡು ವರ್ಷಗಳ ನಂತರ  ತುಳು ಚಿತ್ರರಂಗದ ಐದನೇ ಚಿತ್ರ ಮತ್ತು  ಮೊದಲ ಪೌರಾಣಿಕ ಚಿತ್ರ ೧೯೭೩ ರಲ್ಲಿ  ಕೋಟಿ ಚೆನ್ನಯ್ಯ  ಚಿತ್ರವು ತೆರೆ ಕಂಡಿತು. ಇದು ತುಳುನಾಡಿನ ಪ್ರಸಿದ್ಧ ಯೋಧರ ಕಥೆಯನ್ನು ಒಳಗೊಂಡಿದ್ದು ಇಬ್ಬರು ಯೋಧರನ್ನು ಅಲ್ಲಿನ ಜನರು ದೈವ ಎಂದು ಪೂಜಿಸುತ್ತಾರೆ.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply