ಉದ್ಯಮ ಲೋಕದಲ್ಲಿ ಮುಗಿಲೆತ್ತರಕ್ಕೆ ಏರಿ, ಎಲ್ಲರಿಗೂ ಮಾಧರಿಯಾಗಿ ಮಿಂಚಿನಂತೆ ದುರಂತ ಅಂತ್ಯವನ್ನು ಕಂಡ ಸಿದ್ಧಾರ್ಥರವರ ಕಥೆಯನ್ನು ಆಧರಿಸಿದ ಚಿತ್ರವನ್ನು ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆ.
ಅವರ ಕುರಿತಾದ ಕಾಫಿಕಿಂಗ್ ಎಂಬ ಪುಸ್ತಕವು ಬಿಡುಗಡೆಯಾಗುತ್ತಿದೆ, ಆ ಪುಸ್ತಕವನ್ನು ಆಧರಿಸಿ ಸಿನಿಮಾದ ಕಥೆಯು ಸಿದ್ಧವಾಗುತ್ತಿದೆ, ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿದ್ದ ಸಿದ್ದಾರ್ಥರವರ ಜೀವನ ಕಥೆಯಾಧಾರಿತ ಸಿನಿಮಾವನ್ನು ನಿರ್ಮಿಸಲು ಈಗ ಅನೇಕ ಸಂಸ್ಥೆಗಳು ಮುಂದೆಬಂದಿವೆ.
ಸಾಲದ ಸುಲಿಗೆ ಸಿಕ್ಕಿ 2019ರಲ್ಲಿ ಆತ್ಮಹತ್ಯೆಯನ್ನು ಮಾಡಿಕೊಡಿದ್ದರು, ಈಗ ಅವರ ಸಿನಿಮಾದ ಮೂಲಕ ಅವರ ಜೀವನದ ಹೇಳು ಬೀಳುಗಳನ್ನೂ ತೆರೆಯಮೇಲೆ ಪ್ರೇಕ್ಷಕ ಪ್ರಭುಗಳು ಕಾಣಲಿದ್ದಾರೆ.