#Drishyam_2#ದೃಶ್ಯಂ_2 ಪ್ರೈಮ್ ವಿಡಿಯೋಮಲೆಯಾಳಂ, ಇಂಗ್ಲೀಷ್ ಸಬ್ ಟೈಟಲ್ಸ್
ಮೊದಲಭಾಗವನ್ನು ನೋಡಿದವರಿಗೆ ( ಮೂರು ನಾಲ್ಕು ಭಾಷೆಗಳಲ್ಲಿ ಬಂದಿತ್ತು) ಮುಖ್ಯ ಪಾತ್ರ ಪರಿಚಯದ ಅಗತ್ಯವಿಲ್ಲ. ನೋಡದಿದ್ದವರು ಸ್ವಲ್ಪ ವಿಕಿಪೀಡಿಯಾ ತಡಕಿ ನೋಡಿ.ಇದರಲ್ಲಿ ಜಾರ್ಜ್ ಕುಟ್ಟಿ ಕುಟುಂಬ ಆ ದೊಡ್ದ ಕೊಲೆ ಅಪರಾಧದ ತನಿಖೆಯ ಅವಗಢದ ನಂತರ 6 ವರ್ಷ ನಿರಾತಂಕವಾಗಿ ಬಾಳುತ್ತಿದ್ದಾರೆ.
ಜಾರ್ಜ್ ಕೇಬಲ್ ಟಿವಿಯಿಂದ ಬೆಳೆದವ ಸಿನೆಮಾ ನಿರ್ಮಾಪಕನಾಗುವ ಕನಸು ಹೊತ್ತು ತಿರುಗುತ್ತಿದ್ದಾನೆ. ಕುಡಿತದ ಅಭ್ಯಾಸ ಮಾಡಿಕೊಂಡವನಂತೆ ಕಾಣುತ್ತಾನೆ. ಮನೆಯ ಬಳಿ ಹೊಸ ಜಗಳವಾಡುವ ದಂಪತಿ ಸರಿತಾ ಮತ್ತು ಸಾಬು ನೆಲೆಸಿದ್ದಾರೆ. ಜಾರ್ಜ್ ಮತ್ತು ಮೀನಾಗೆ ಅವರಿಬ್ಬರ ಕುಡಿತದ ನಂತರದ ಜಗಳವನ್ನು ಪರಿಹಾರ ಮಾಡುವುದೇ ಕೆಲಸವಾಗಿ ಬಿಟ್ಟಿದೆ. ಆಕೆ ಅವರಿಗೆ ಬಹಳ ಕ್ಲೋಸ್ ಆಗಿಬಿಟ್ಟಿದ್ದಾಳೆ, ಅದೇಕೋ?
ಆದರೆ ಆ ಕಳೆದ ಭಾಗದಲ್ಲಿ ಜಾರ್ಜ್ ಹೆಣ ಹೂತು ಪೋಲಿಸ್ ಸ್ಟೇಷನ್ ಕಟ್ಟಡದಿಂದ ಹೊರಬಂದದ್ದನ್ನು ಅವತ್ತೇ ಬಂಧಿತನಾಗಿ ಇದೀಗ ಬಿಡುಗಡೆಯಾದ ಜೋಸ್ ಎಂಬವನು ನೋಡಿಬಿಟ್ಟಿದ್ದಾನೆ. ಅವನೇನಾದರೂ ಐ ವಿಟ್ನೆಸ್ಸ್ ಆಗಿ ಇನ್ನೂ ತನಿಖೆ ಮಾಡುತ್ತಿರುವ ಪೋಲೀಸರಿಗೆ ಹೇಳಿಬಿಟ್ಟರೆ ಎಂಬ ಭಯಾನಕ ಸಾಧ್ಯತೆ ಮೇಲೆ ಈ ಚಿತ್ರ ನಿಂತಿದೆಮೊದಲರ್ಧ ಸ್ವಲ್ಪ ಕಥೆಯನ್ನು ಎಳೆದು ಹೆಂಗಳೆಯರಿಗೆ ಹೆಚ್ಚು ಪ್ರಿಯವಾಗುವಂತೆ ಸಾಮಾಜಿಕ ಚಿತ್ರದಂತೆ ನಿಧಾನವಾಗಿ ಸಾಗುತ್ತದೆ. ಜಾರ್ಜ್ ಮನೆಯವರು ಹೇಗೆ ಆ ದೊಡ್ಡ ಆಪಾದನೆ ನಂತರ ಚೇತರಿಸಿಕೊಳ್ಳುತ್ತಿದ್ದಾರೆ ಗಂಡ ಹೆಂಡಿರ ಸಂವಾದಗಳು, ಅಕ್ಕ ತಂಗಿ ಗೆಳೆಯರು…
ಹೀಗೆಲ್ಲಾ ಸೆಂಟಿಮೆಂಟಲ್ ಸೀನ್ಸ್ ತಂದಿದ್ದಾರೆ. ಆದರೆ “ಅದೇಕೋ ಸ್ವಲ್ಪ ಹೆಚ್ಚಾಯಿತು, ಮರ್ಡರ್ ತನಿಖೆ ಎಲ್ಲಿ?” ಎನ್ನುವಷ್ಟರಲ್ಲಿ ಚಿತ್ರ ಮತ್ತೆ ವೇಗ ಪಿಕ್ ಅಪ್ ಮಾಡಿ ಚುರುಕಾದ ಸಸ್ಪೆನ್ಸ್ ಥ್ರಿಲರ್ ಆಗಿ ಮಾರ್ಪಡುತ್ತದೆ. ಜಾರ್ಜ್ ಕುಟ್ಟಿಯ ರಹಸ್ಯ ಆಟ ಬಯಲಾಯಿತೆ? ಪೋಲೀಸರಿಗೆ ಬೇಕಿದ್ದ ಎವಿಡೆನ್ಸ್ ನಿಜಕ್ಕೂ ಸಿಕ್ಕಿತೆ? ಆ ಮನೆಯವರು ಬೀದಿಗೆ ಬೀಳುವಂತೆಯೋ ಜೈಲು ಕಂಬಿ ಎಣಿಸುವಂತಾ ಸ್ಥಿತಿ ಬಂದೇ ಬಟ್ಟಿತೇ? ಎಂಬುದರ ಉತ್ತರವನ್ನು ನೀವು ಚಿತ್ರ ನೋಡಿ ಕೊನೆಯ “ದೃಶ್ಯಂ” ನಲ್ಲೇ ನೋಡಬೇಕಾಗುತ್ತದೆ, ನಾನು ಸ್ಪಾಯಿಲ್ ಮಾಡುವುದಿಲ್ಲ!
ಮೋಹನ್ ಲಾಲ್ ಮನೋಜ್ಞ ಅಭಿನಯ ನೀಡಿದ್ದಾರೆ, ಮಿಕ್ಕವರೂ ಸಮರ್ಥರುನಿರ್ದೇಶಕ ಜೀತು ಜೋಸೆಫ್ ಕರಾರುವಾಕ್ಕಾದ ಲೂಸ್ ಎಂಡ್ಸ್ ಇಲ್ಲದ ಥ್ರಿಲ್ಲರ್ ಮಾಡಲೇಬೇಕೆಂದು ಶ್ರಮಿಸಿರುವುದು ಚೆನ್ನಾಗಿ ಗೊತ್ತಾಗುತ್ತದೆ. ಪ್ರತಿಭಾವಂತ! ಆದರೂ, ನನಗೇಕೋ ಕ್ಲೈಮ್ಯಾಕ್ಸ್ ಅಷ್ಟು ಪ್ರಚಂಡವಾಗಿದೆ, ಬ್ರಿಲಿಯೆಂಟ್ ಅನಿಸಲಿಲ್ಲ. ಬಹಳ ಹೆಚ್ಚು ಕಲ್ಪನಾ ಶಕ್ತಿ ಉಪಯೋಗಿಸಿದರೆ ಮಾತ್ರ ಹಾಗೆಲ್ಲಾ ಆಗಲು ಸಾಧ್ಯವಿತ್ತು ಎನಿಸಿತು
ಅದು ಏನು ಎತ್ತ ಎಂದು ನೀವು ನೋಡಿಯೇ ನಿರ್ಧರಿಸಿಹಾಗಾಗಿ ನನ್ನ ರೇಟಿಂಗ್: 3.5/5