ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಗುರುಸ್ವಾಮಿಗಳು ಇಂದು(31/03/2021) ಬೆಳಗ್ಗೆ ದೈವಾಧೀನರಾಗಿದ್ದಾರೆ. ನಿಮೋನಿಯ ಖಾಯಿಲೆಯಿಂದ ಬಳಲುತ್ತಿದ್ದ ಗುರುಸ್ವಾಮಿಗಳು 77ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ದೊಡ್ಡ ಗಣೇಶನ ಗುಡಿಯಲ್ಲಿ ನೂರಾರು ಕನ್ನಡ ಸಿನಿಮಾಗಳು ಸೆಟ್ಟೇರಿದೆ ಜೊತೆಗೆ ಶೂಟಿಂಗ್ ಕೂಡ ಮಾಡಿದ್ದಾರೆ, ಸಿನಿಮಾದವರಿಗೆ ಈ ದೇವಸ್ಥಾನ ಅಂದ್ರೆ ಬಲು ಪ್ರೀತಿ ಕಾರಣ ಗಣೇಶನ ಮೇಲಿರುವ ಭಕ್ತಿ ಹಾಗೂ ಸ್ವಾಮಿಗಳು ಹರಸಿ- ಹಾರೈಸುವ ರೀತಿ, ಚಿತ್ರರಂಗದವರ ಪಾಲಿಗೆ ದೊಡ್ಡ ಗಣೇಶ ಮತ್ತು ಈ ಅರ್ಚಕರು ಇಬ್ಬಾರು ಬಹಳ ಲಕ್ಕಿ ಮತ್ತು ವಿಶೇಷ. ಕನ್ನಡ ಚಿತ್ರರಂಗಕ್ಕೂ ಇವರಿಗೂ ಒಂದು ದೊಡ್ಡ ಅವಿನಾಭಾವ ಸಂಭದವೇ ಇದೆ, ಡಾ. ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಅಂತಹ ದಿಗ್ಗಜರಿಂದ ಹಿಡಿದು ಇಂದಿನ ಪೀಳಿಗೆಯ ಸಿನಿಮಾ ನಟರುಗಳ ಸಿನಿಮಾದ ಪ್ರಾರಾಂಬ ಹಂತದಲ್ಲಿ ಇಲ್ಲಿ ಬಂದು ಅವರ ಆಶೀರ್ವಾದ ಪಡೆದು ಹೊಗುತ್ತಿದ್ದರು ಆ ಸಿನಿಮಗಳೆಲ್ಲಾ ಸೂಪರ್ ಹಿಟ್ ಆಗ್ತಿದ್ವು. ಗುರು ಸ್ವಾಮಿಗಳ ಅಗಲಿಕೆಗೆ ಚಿತ್ರರಂಗದ ಅನೇಕ ಹಿರಿಯ ಕಲಾವಿದರು ಹಾಗೂ ತಂತ್ರಜ್ನ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Related Posts
ಕನ್ನಡ ಚಿತ್ರರಂಗದ ಮಾಂತ್ರಿಕ ಚಿತ್ರಗಳ ರಾಜ ಬಿ.ವಿಠಲಾಚಾರ್ಯ
ಮುಂದುವರಿದ ಭಾಗ… 1953 ರಲ್ಲಿ ಒಂದು ಕೆಟ್ಟ ಸಂದರ್ಭದಲ್ಲಿ ತಮ್ಮ ಸ್ನೇಹಿತರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದ ಇವರು ಮಹಾತ್ಮ ಪಿಕ್ಚರ್ಸ್ ನಿಂದ ಹೊರಗೆ ಬಂದು ತಮ್ಮದೇ ವಿಠಲ್…
ಬಾಲಿವುಡ್ ಚಿತ್ರರಂಗದ ಜಂಪಿಂಗ್ ಜ್ಯಾಕ್ ನಟ ಜಿತೇಂದ್ರ
ಜಂಪಿಂಗ್ ಜ್ಯಾಕ್ ಎಂಬ ಬಿರುದು ಪಡೆದಿರುವ ನಟ ಜಿತೇಂದ್ರ ಬಾಲಿವುಡ್ ದಿಗ್ಗಜ ನಟರಲ್ಲಿ ಕೂಡ ಒಬ್ಬರು. ಯಾವುದೇ ಹಿನ್ನಲೆಯಿಲ್ಲದೇ ಚಿತ್ರ ರಂಗ ಪ್ರವೇಶಿಸಿದ ಇವರು ತಮ್ಮ…
ಜನ್ಮರಹಸ್ಯ
ಒಂದು ವಿಶಿಷ್ಟ ಪಾತ್ರದಲ್ಲಿ ಅಶ್ವತ್ಥ್. ಜೂಜಿನಲ್ಲಿ ಹೆಂಡತಿ(ಪಂಢರಿಬಾಯಿ)ಯನ್ನೇ ಮಾರಿರುತ್ತಾನೆ ರಾಮನಾಥ್(ಕೆ. ಎಸ್. ಅಶ್ವತ್ಥ್). ಮಾನ ಉಳಿಸಿಕೊಳ್ಳಲು ಆರು ತಿಂಗಳ ಮಗುವಿನ ಸಹಿತ ನೀರಿಗೆ ಹಾರಿದ ಆಕೆಗೆ ಮೂರೂವರೆ…