ಬೆಂಗಳೂರಿನಲ್ಲಿ ಪೋಲಿಸರ ಕಂಡಾಗ ಅಂಜುತ್ತಿದ ಜನ , ಬರೀ ಜಯರಾಜ ಅವರ ಹೆಸರು ಕೇಳಿದ್ರೆ ಸಾಕು ಹೆದರೋರು, ಅಂತ ಭಯದ ಗಾಳಿಯು ಹೇಗೆ ಎಬ್ಬಿತು, ನಂತರ ಬಿರುಸಾಗಿ ಹೇಗೆ ಎಲ್ಲೆಡೆ ನುಸುಳಿ ಹಾವಳಿ ಮಾಡಿತು ಅನ್ನೋದಕ್ಕೆ ಉತ್ತರ ವಿವರ ಅಕ್ಟೋಬರ್ 21ಕ್ಕೆ ದೇಶದಾದ್ಯಂತ ತಿಳಿಯುತ್ತದೆ.
Zee ವಾಹಿನಿಯವರು ಹೆಡ್ಡು ಬುಷ್ ಸಿನಿಮಾದ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯ ಸ್ಯಾಟಿಲೈಟ್ ರೈಟ್ಸನ್ನು ಭಾರೀ ಬೆಲೆಗೆ ಕೊಂಡಿದ್ದಾರೆ. ಬಿಡುಗಡೆಗೂ ಮುನ್ನವೆ ಇಂತದ್ದೊಂದು ಬೆಳವಣಿಗೆಯಿಂದ ಸಿನಿಮಾ ತಂಡವು ಮೊದಲ ಹಂತದಲ್ಲೆ ದೊಡ್ದ ಮಟ್ಟದ ಯಶಸ್ಸನ್ನ ಪಡೆದಿದೆ.
ಡಾನ್ M. P ಜಯರಾಜ್ ಜೀವನಾಧಾರಿತ ಕಥೆಯು ” ಹೆಡ್ಡು ಬುಷ್ಷು” ಅನ್ನೋ ಶೀರ್ಷಿಕೆಯಲ್ಲಿ ಸಿನಿಮಾವಾಗಿ ಬರ್ತಿದೆ, ನಟ ಡಾಲಿ ಧನಂಜಯ ಜಯರಾಜನಾಗಿ ಕಾಣಲಿದ್ದು, ಖುದ್ದು ಧನಂಜಯ ಅವರೇ ಸಿನಿಮಾದ ನಿರ್ಮಾತೃ ಅನ್ನೋದು ತಿಳಿದ ವಿಷ್ಯ. ಇದೇ ಅಕ್ಟೋಬರ್ 21ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಗೆಲುವಿನ ಪಟಾಕಿ ಹೊಡೆಯಲು ಸಜ್ಜಾಗಿದೆ. ಅಗ್ನಿ ಶ್ರೀಧರ ಅವರ ನುಣುಪಾದ ಬರವಣಿಗೆಯಿಂದ ರಚಿತವಾದ “ದಾದಾಗಿರಿಯ ದಿನಗಳು” ಅನ್ನೋ ಕಾದಂಬರಿಯೇ ಸಿನಿಮಾಗೆ ಕಥಾವಸ್ತು ಜೊತೆಗೆಯೇ ಶ್ರೀಧರ್ ಸಿನಿಮಾದ ಸಂಭಾಷಣೆ ಮತ್ತು ಚಿತ್ರಕತೆಯನ್ನು ರಚಿಸಿ ಇಡೀ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. M. P. ಜಯರಾಜರನ್ನ ಬಹಳ ಹತ್ತಿರದಿಂದ ಕಂಡು ಅತಿಯಾದ ಒಡನಾಟ ಇಟ್ಟಿಕೊಂಡಿದ್ದರು ಅಗ್ನಿ ಶ್ರೀಧರ್, ಜಯರಾಜಾರಿಗೆ ಸಂಬಂಧಿಸಿದ ಹಾಗೆ ಇಲ್ಲಿಯ ತನಕ ನಾವು ಅಸಂಖ್ಯಾತ ಡಾಕ್ಯುಮೆಂಟರಿ, ಸಂದರ್ಶನಗಳು ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರ ಹೇಳಿಕೆಗಳಿಗೆ ಕಿವಿ ಒಡ್ಡಿದ್ದೀವಿ ಆದ್ರೆ ಅವುಗಳಲ್ಲಿ ಎಲ್ಲೂ ಕೇಳದ ಕಾಣದ ರೋಚಕ ಹಾಗು ಕುತೂಹಲಕಾರಿ ಮಾಹಿತಿ- ಸಂಘಟನೆಗಳನ್ನ ಪರಿಚಯಿಸುವಲ್ಲಿ ಈ ಚಿತ್ರ ಸಾಕ್ಷಿಯಾಗಲಿದೆ, ಯುವ ಪ್ರತಿಭೆ “ಶೂನ್ಯ” ಎಂಬವರು ಈ ಸಿನಿಮಾದ ನಿರ್ದೇಶಕರು, ಚರಣರಾಜ್ ಸಂಗೀತ ಸಂಯೋಜನೆ ಮಾಡಿದ್ದು ಮತ್ತು ಸುನೋಜ್ ವೇಲಾಯುಧನ್ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದಾರೆ. ಇನ್ನು ತಾರಾಂಗಣದಲ್ಲಿ ಯೋಗಿ, ವಸಿಷ್ಠ ಸಿಂಹ, ಸಾಂಡಿ, ಶ್ರುತಿ ಹರಿಹರನ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಪಾಯಲ್ ರಜಪುತ್ ಮೊದಲ ಬಾರಿಗೆ ಕನ್ನಡದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಲಿದ್ದಾರೆ.