“ಧಾರಾವಾಹಿ ಪ್ರಿಯರಿಗೆ ಖುಷಿ ಸುದ್ದಿ”

ಕವಿಡ್ 19 ಮಹಾಮಾರಿಎಲ್ಲೆಡೆಹಬ್ಬಿದಕಾರಣ, ಸಾಮಾಜಿಕ ಅಂತರವನ್ನು ಕಾಪಾಡಲು ಬಹಳ ಮುಖ್ಯವಾಗಿತ್ತು. ಸರ್ಕಾರದ ಆದೇಶದ ಅನುಸಾರ ಎಲ್ಲಾ ರೀತಿಯಾದ (ಸೀರಿಯಲ್,ಸಿನಿಮಾ, ರಿಯಾಲಿಟಿಷೋ )ಶೂಟಿಂಗ್ಸ್ಥಗಿತಗೊಂಡಿತ್ತು.

ಕಲೆಯನ್ನೇಜೀವಾಳವಾಗಿಟ್ಟುಕೊಂಡು 5000ಕ್ಕುಹೆಚ್ಚುಕಲಾವಿದರು, ತಂತ್ರಾಜ್ನ್ಯಾರು,  ಬರಹಗಾರರು ಮತ್ತು ಕಾರ್ಮಿಕರು ಬದುಕುತ್ತಿದ್ದಾರೆ, ಆವರ್ಗಕ್ಕೆ ಕೈಕಟ್ಟಾಕಿದಹಾಗಿತ್ತು, ಅವರ ಬದುಕೊಗೆಪರ್ಯಾಯದಾರಿಯುಇಲ್ಲ .ಟಿ.ವಿ. ಯಲ್ಲು ಹೊಸಸಂಚಿಕೆಗಳಿಲ್ಲ. ಕರ್ನಾಟಕ ಟೆಲಿವಿಷನ್ಅ ಸ್ಸೋಸಿಯೇಷನ್ಮುಖ್ಯಸ್ಥರಾದಶಿವಕುಮಾರ್.

ಎಸ್.ವಿ.ಮತ್ತು ನಟಿತಾರಾ ಅವರು ಎಲ್ಲಾಸಮಸ್ಯೆಗಳನ್ನು ಮುಖ್ಯಮಂತ್ರಿಗಳಎದುರಿಟ್ಟರು. ಯಾವುದೇ ನೀತಿನಿಯಮಗಳ ಉಲ್ಲಂಘನೆ ಆಗದ ಹಾಗೆ ಎಚ್ಚರ ವಹಿಸಿ ಚಿತ್ರೀಕರಣ ಮಾಡಲಾಗುವುದು ಅನ್ನೋ ಭರವಸೆಯ ಕೂಡ ನೀಡಿದರು. ಎಲ್ಲವನ್ನು ಪರಿಶೀಲಿಸಿದ ನಂತರ ರಾಜ್ಯ ಸರ್ಕಾರಮೇ 25ನೆ ತಾರೀಕಿನಿಂದ ಶೂಟಿಂಗ್ಕೆಲಸ ಪ್ರಾರಂಭಿಸಲು ಅನುಮತಿಯನ್ನು ನೀಡಿದೆ. ಜೂನ್ತಿಂಗಳ ಮೊದಲವಾರದಿಂದ ಹೊಸಕಂತುಗಳನ್ನು ವೀಕ್ಷಿಸಬಹುದು.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply