“ಆಡು ಮುಟ್ಟದ ಸೊಪ್ಪಿಲ್ಲ, ಅಣ್ಣಾವೃ ನಟಿಸದ ಪಾತ್ರಗಳಿಲ್ಲ ಅನ್ನೋದಕ್ಕೆ ನಾನು ಈಗ ಹೇಳುತ್ತಿರುವ ಪಾತ್ರಗಳ ಪರಿಚಯ, ಬಹುಶಃ ಕೆಲವರಿಗೆ ಗೊತ್ತಿರಬಹುದು ಇಲ್ಲ ತಿಳಿದುಕೊಳ್ಳಲು ಆಸಕ್ತರಿರಬಹುದಲ್ಲವೆ.. ಅಂತ ಓದುಗರಿಗೆ ನನಗೆ ತಿಳಿದ ಪಾತ್ರಗಳನ್ನು ತೋರಿಸುವ ಒಂದು ಸಣ್ಣ ಪ್ರಯತ್ನ.
ಶ್ರಾವಣ ಬಂತು ಚಿತ್ರದ ನಟದ ನೃತ್ಯಗಾರ, ಹಾಡುಗಾರ, ಕವಿಯ ಪಾತ್ರ 🌹
ಒಡಹುಟ್ಟಿದವರು ಚಿತ್ರದ ನೆಚ್ಚಿನ ಅಣ್ಣ, ಸಂಸಾರದ ಜವಾಬ್ದಾರಿ ಹೊತ್ತ ಪಾತ್ರ 🌻
ಇಮ್ಮಡಿ ಪುಲಿಕೇಶಿಯ ಪುಲಿಕೇಶಿ ಪಾತ್ರ 🍎
ಜೀವನ ಚೈತ್ರದ ಊರ ಯಜಮಾನರು ನಿಜ ಜೀವನ ಶೈಲಿ ತೋರಿಸುವ,
ದಾರಿ ತಪ್ಪಿದ ಮಕ್ಕಳನ್ನು ಸರಿದಾರಿ ತರುವ ಪಾತ್ರ 🏆
ಬಂಗಾರದ ಮನುಷ್ಯದ ಸಾಮಾನ್ಯ ಯುವಕ ರೈತನಾಗಿ ಮನೆಯ ಪೂರ್ಣ ಜವಾಬ್ದಾರಿ ಹೊತ್ತು ಸವ೯ರಿಗೂ ಒಳ್ಳೆಯದನ್ನು ಮಾಡುವ ಪಾತ್ರ🏅
ಕಾಮನಬಿಲ್ಲುವಿನ ಯೋಗ ರಾಜ ಪಾತ್ರ , ಜೀವನ ಮಾಡಲು ರೈತರಾಗುವ ಪಾತ್ರ🎀
ಧೃವತಾರೆಯ ಅನ್ಯಾಯದ ವಿರುದ್ಧ ಹೋರಾಡುವ ಪಾತ್ರ🌄
ಗಂಧದ ಗುಡಿಯ ಅರಣ್ಯ ರಕ್ಷಣೆ ಮಾಡುವ ಅಧಿಕಾರಿ ಪಾತ್ರ🗼
ಪರಶುರಾಮದ ಮಿಲಿಟರಿ ಆಫೀಸರ್ ತಮ್ಮ ಜೀವನವನ್ನು ಹಾಳು ಮಾಡಿದವರನ್ನು ಕೊಲ್ಲುವ ಪಾತ್ರ🌲
ಒಂದು ಮುತ್ತಿನ ಕಥೆಯ ಉತ್ತಮ ಮೀನುಗಾರ ಸಮುದ್ರದ ಮುತ್ತನ್ನು ತರುವ ಪಾತ್ರ🍀
ಚಲಿಸುವ ಮೋಡಗಳು ಚಿತ್ರದ ಪ್ರಾಮಾಣಿಕ ವಕೀಲರ ಪಾತ್ರ🐠
ಶಂಕರ್ ಗುರುವಿನ ತಂದೆ ಮತ್ತು ತಾಯಿಯನ್ನು ಒಂದುಗೂಡಿಸುವ ಪಾತ್ರ🦃
ಆಪರೇಷನ್ ಡೈಮಂಡ್ ರಾಕೆಟ್ ನಲ್ಲಿ ಜೇಮ್ಸ್ ಬಾಂಡ್ ಪಾತ್ರ🐣
ಆಕಸ್ಮಿಕ ಚಿತ್ರದ ಹೆಣ್ಣಿಗೆ ಆಗುತ್ತಿರುವ ದೌಜ೯ನ್ಯವನ್ನು
ನಿನಾ೯ಮಗೊಳಿಸುವ ಪೋಲೀಸ್ ಪಾತ್ರ 🐿
ಶಬ್ದವೇಧಿಯ ಡ್ರಗ್ಸ್ ವಿರುದ್ಧ ಹೋರಾಡುವ ಪಾತ್ರ 🐯
ಕವಿರತ್ನ ಕಾಳಿದಾಸದ ಕುರಿ ಕಾಯುವ ಕುರುಬ ಎಲ್ಲರೂ ಮೆಚ್ಚುವ ಕಾಳಿದಾಸ ಪಾತ್ರ.
ಬಂಗಾರದ ಪಂಜರದ ಪೆದ್ದ ಹಾಸ್ಯಮಯ ಪಾತ್ರ💘
ಬಡವರ ಬಂಧುವಿನ ಹೋಟೆಲ್ ಸವ೯ರ್ ಪಾತ್ರ 👀
ಬಬೃವಾಹನದ ಅಭಿಮನ್ಯು, ಅಜು೯ನ ಪಾತ್ರ 👁🗨
ಮಯೂರದ ಕನ್ನಡ ನಾಡಿನ ಉಳಿವಿಗಾಗಿ ನಡೆಸುವ ಹೋರಾಟದ ಪಾತ್ರ 💍
ಇನ್ನೂ ಹಲವಾರು ರೀತಿಯ ವೈವಿಧ್ಯಮಯ ಪಾತ್ರಗಳಲ್ಲಿ ಅಭಿಮಾನಿಗಳಿಗೆ ರಸದೌತಣ ನೀಡಿದ ನಮ್ಮ ಅಣ್ಣಾವೃ, ಇವರ ಚಿತ್ರಗಳನ್ನು ನೋಡಿದರೆ ಸಾಕು ನಮಗೆ ಜೀವನ ನಡೆಸುವ ದಾರಿ ಸಿಗುತ್ತದೆ, ಒಟ್ಟಿನಲ್ಲಿ ಹೇಳುವುದಾದರೆ ‘ಆಡು ಮುಟ್ಟದ ಸೊಪ್ಪಿಲ್ಲ, ಅಣ್ಣಾವೃ ನಟಿಸದ ಪಾತ್ರಗಳಿಲ್ಲ, ಇವರೇ ಸಕಲಕಲಾವಲ್ಲಭರು, ಏನಂತೀರಿ ಮಿತ್ರರೇ…
ಜೈ ಕರುನಾಡ ಕಲಾ ತಪಸ್ವಿ ಅಪ್ಪಾಜಿ💙💜🧡🖤❣️