“ನಟಸಾವ೯ಭೌಮ” ಅನ್ನೋ ಹೆಸರು ಅಣ್ಣಾವ್ರಿಗೆ ಮಾತ್ರ ಸೂಕ್ತ ಆದರೆ ಅವರ ಛಾಯೆ ದೊಡ್ಮನೆ ಹುಡುಗ ಪುನೀತ್ ರವರಲ್ಲಿದೆ. ಇವರು ಅಭಿಮಾನಿಗಳನ್ನು ರಂಜಿಸಲು ವಿಭಿನ್ನ ಪಾತ್ರಗಳಿಂದ ಮನೆ ಮಾತಾದವರು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ , ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಹಾಗೂ ರಚಿತಾ ರಾಮ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ನಟರ್ಸಾವಭೌಮ ಬಿಡುಗಡೆಯಾಗಿ ಇಂದಿಗೆ 2 ವರ್ಷ 😘😍
“ಅಮಿ ತೊಮಾಕಿ ಭಾಲೋ ಭಾಷಿ “
ಒಪನ್ ದ ಬಾಟಲ್.. ಟಲ್ ಟಲ್ ಟಲ್
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
ಮೊಟ್ಟ ಮೊದಲ ಬಾರಿಗೆ ಪುನೀತ್ ರವರು ಎರಡು ವಿಭಿನ್ನ ರೀತಿಯ ಪಾತ್ರಗಳಲ್ಲಿ ಅಭಿಮಾನಿಗಳನ್ನು ರಂಜಿಸಿದ ಚಿತ್ರ “ನಟಸಾವ೯ಭೌಮ “
ಒಂದು ಮೀಡಿಯಾದಲ್ಲಿ ರಿಪೋರ್ಟರ್ ಪಾತ್ರ ಅದಕ್ಕೂ ಹೆಚ್ಚು ತಾನು ಪ್ರೀತಿಸಿದ ಗೆಳತಿಯ ಧಾರುಣವಾಗಿ ಖಳನಾಯಕ ಕೊಲೆ ಮಾಡಿದ ಸೇಡನ್ನು ತೀರಿಸಿಕೊಳ್ಳಲು ತಾವೇ ಖಳನಾಯಕರಾಗಿ ದುಷ್ಟರನ್ನು ಸಂಹಾರ ಮಾಡುವ ಪಾತ್ರ,
ಪವನ್ ಒಡೆಯರ್ ರವರ ವಿನೂತನ ಪ್ರಯತ್ನಕ್ಕೆ ಜನಮೆಚ್ಚುಗೆ,
ಅನುಪಮ ಪರಮೇಶ್ವರ್ ರವರ ನಟನೆ ಮತ್ತು ಹೊಸ ಪರಿಚಯ, ರಚಿತರಾಮ್ ರವರ ಸಹನಟನೆ ❤
ಚಿತ್ರದ ಮತ್ತೊಂದು ಆಕಷ೯ಣೆ ದಕ್ಷಿಣ ಭಾರತದ ಖ್ಯಾತ ನಟಿ ಬಿ ಸರೋಜ ದೇವಿ ಅವರ ಗೆಸ್ಟ್ ಅಪಿರಿಯನ್ಸ್, ಹಿಂದೆ ಯಾರಿವನು ಚಿತ್ರದಲ್ಲಿ ಪುನೀತ್ ಚಿಕ್ಕ ಹುಡುಗ ಪಾತ್ರ ತಾಯಿ ಇವರು. ಆದರೆ ಈ ಚಿತ್ರದಲ್ಲಿ ಇವರನ್ನು ವಿಶೇಷ ಸಂದಶ೯ನ ಮಾಡುವ ದೃಶ್ಯ, ಇದ್ದಕ್ಕಿದ್ದ ಹಾಗೆ ಪುನೀತ್ ಮೈಮೇಲೆ ಆಗುವ ಬದಲಾವಣೆ ..
ರೊಮ್ಯಾಂಟಿಕ್, ಸೆಂಟಿಮೆಂಟ್, ಕಾಮಿಡಿ ಚಿತ್ರಗಳನ್ನು ತೆಗೆದುಕೊಂಡು ಯಶಸ್ವಿಯಾದ ನಿದೇ೯ಶಕ ಪವನ್ ಒಡೆಯರ್ ರವರ ನಿದೇ೯ಶನ, ನೂತನ ಕಥೆ, ಮೆಡಿಸಿನ್ ಮಾಫಿಯಾ ಹೇಗಿದೆ ಅಂತ ತೋರಿಸುವ ವಿಭಿನ್ನ ಪ್ರಯತ್ನ, ಬೆಂಗಳೂರು ಮತ್ತು ಕೊಲ್ಕತ್ತ ಸುತ್ತಮುತ್ತ ನಡೆದ ಚಿತ್ರೀಕರಣ, ಅಲ್ಲಿಯ ಜನರ ಭಾಷೆ, ಜೀವನ ಸ್ಥಿತಿ ಅನಾವರಣ.
ಸಾಧುಕೋಕಿಲ, ಚಿಕ್ಕಣ್ಣ ಕಾಮಿಡಿ, ರವಿಶಂಕರ್ , ಪ್ರಕಾಶ್ ಬೆಳವಾಡಿ, ಅಚ್ಯುತ್ ಕುಮಾರ್ , ಪ್ರಭಾಕರ್ ಖಳನಟರಾಗಿ ಮನ್ನಣೆ, ಶ್ರೀನಿವಾಸ್ ಮೂರ್ತಿ ಪುನೀತ್ ತಂದೆಯಾಗಿ ನಟನೆ.
ಚಿತ್ರದ ಮತ್ತಷ್ಟು ಮಾಹಿತಿ :-
ನಿಮಾ೯ಪಕರು : ರಾಕ್ಲೈನ್ ವೆಂಕಟೇಶ್.
ಸಂಗೀತ ನಿರ್ದೇಶಕರು : ಡಿ ಇಮಾನ್.
ಛಾಯಾಗ್ರಹಣ : ವೈದಿ ಎಸ್.
ಸಂಕಲನ : ಮಹೇಶ್ ರೆಡ್ಡಿ.
ನಿಮಾ೯ಣ ಸಂಸ್ಥೆ : ರಾಕ್ಲೈನ್ ಎಂಟಟೇ೯ನ್ಮೆಂಟ್.
ಸ್ಪೆಷಲ್ ಅಪಿಯರೆನ್ಸ್ : ಓಪನ್ ದಿ ಬಾಟಲ್ ಹಾಡಿನಲ್ಲಿ ಜಾನಿ ಮಾಸ್ಟರ್ ಕೊರಿಯಾಗ್ರಾಫರ್.
ಭೂಷಣ್ ಕೊರಿಯಾಗ್ರಾಫರ್ “ನಟಸಾವ೯ಭೌಮ ” ಟೈಟಲ್ ಸಾಂಗ್ ನಲ್ಲಿ ನೋಡಬಹುದು.
ನಮ್ಮ ನೆಚ್ಚಿನ ಮಿತ್ರರಾದ ಅಭಿ ಶಿವು ಅಡ್ಡ ರವರು ಊವ೯ಶಿ ಚಿತ್ರಮಂದಿರದ ಮೊದಲ 1200 ಟಿಕೇಟ್ ಅವರೇ ಖರೀದಿಸಿದ್ದು ರಾಜವಂಶದ ಮೇಲಿಟ್ಟಿರುವ ಅಭಿಮಾನಕ್ಕೆ ಸಾಕ್ಷಿ 🙏
ಬಿಡುಗಡೆಯಾದ ಮೊದಲ ದಿನ 1400 ಶೋಗಳು ಪ್ರದಶ೯ನ ಕಂಡು ದಾಖಲೆ ಬರೆದ ಚಿತ್ರ. ಡಾನ್ಸ್ ವಿತ್ ಅಪ್ಪು ಆಸಮ್ ಸಾಂಗ್ ಜೊತೆ ಪವರ್ ಫುಲ್ ಡಾನ್ಸ್ ಸ್ಟೆಪ್ ಮರೆಯಲಾಗದು. ಮಿಡ್ನೈಟ್ ಶೋಗಳಲ್ಲೂ ದಾಖಲೆ ಮಾಡಿದೆ.